ಬಾಗಲಕೋಟೆ: ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ತಾಯಿ, ಮಗು ರಕ್ಷಣೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ರಿಡ್ಜ್ ಮೇಲಿಂದ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ತಾಯಿ ಸೇರಿದಂತೆ ಎರಡು ವರ್ಷದ ಮಗುವಿನ ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಸ್ಥಳೀಯರ ಮಾಹಿತಿ ಮೇರೆಗೆ 112 ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ತಾಯಿ ಮತ್ತು ಮಗುವನ್ನು ರಕ್ಷಿಸಿದ್ದಾರೆ.

ಬಾಗಲಕೋಟೆ, ಡಿಸೆಂಬರ್ 23: ಎರಡು ವರ್ಷದ ಗಂಡು ಮಗುವಿನ ಸಮೇತ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ (Suicide Attempt) ತಾಯಿಯನ್ನು 112 ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿರುವಂತಹ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ (Chikkapadasalagi) ಬ್ರಿಡ್ಜ್ ಬಳಿ ನಡೆದಿದೆ. ಸುರೇಖಾ ಭಜಂತ್ರಿ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ. ಸದ್ಯ ಮಹಿಳೆಯನ್ನು ಸಾವಳಗಿ ಠಾಣೆಗೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನಡೆದಿದ್ದೇನು?
ಸುರೇಖಾ ಭಜಂತ್ರಿ ತಮ್ಮ ಎರಡು ವರ್ಷದ ಗಂಡು ಮಗುವಿನ ಸಮೇತ ಚಿಕ್ಕಪಡಸಲಗಿ ಕೃಷ್ಣಾ ನದಿ ಬ್ರಿಡ್ಜ್ನಿಂದ ಹಾರಲು ಮುಂದಾಗಿದ್ದರು. ಈ ವೇಳೆ ಮಲ್ಲು ಕಲ್ಯಾಣಿ ಎಂಬ ಸ್ಥಳೀಯರು ಗಮನಿಸಿ 112 ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದಿದ್ದಾರೆ.
ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ 10ನೇ ಕ್ಲಾಸ್ ವಿದ್ಯಾರ್ಥಿನಿ: ಶಾಲಾ ಬಸ್ ಡ್ರೈವರ್ನಿಂದಲೇ ನೀಚ ಕೃತ್ಯ
ಸದ್ಯ ಮಹಿಳೆ ವಿಚಾರಣೆ ನಡೆಸಿರುವ ಪೊಲೀಸರು ಗಂಡನ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಠಾಣೆಗೆ ಬಂದ ಪತಿ ತಮ್ಮ ಪತ್ನಿ ಮತ್ತು ಮಗುವನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಕುಟುಂಬ ಕಲಹದಿಂದ ಬೇಸತ್ತು ವ್ಯಕ್ತಿ ನೇಣಿಗೆ ಶರಣು
ಕುಟುಂಬ ಕಲಹದಿಂದ ಮಾನಸಿಕವಾಗಿ ಮನನೊಂದಿದ್ದ ವ್ಯಕ್ತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ಇದನ್ನೂ ಓದಿ: ಬೆಳ್ಳಂ ಬೆಳಿಗ್ಗೆ ಬಿರಿಯಾನಿ ತಿನ್ನಲು ಹೋದವರಿಗೆ ಭರ್ಜರಿ ಶಾಕ್: ಕಾಲೇಜು ವಿದ್ಯಾರ್ಥಿಗಳ ಅಡ್ಡಗಟ್ಟಿ ದರೋಡೆ
ಪಟ್ಟಣದ ರೇಷ್ಮೆ ಹುರಿ ಘಟಕದ ಆವರಣದಲ್ಲಿ ಚಿಂತಾಮಣಿ ಮೂಲದ ಕಲ್ಯಾಣ್ ಕುಮಾರ್ ( 35 ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ ಕೆಲ ದಿನಗಳಿಂದ ಮನೆಯಲ್ಲಿ ಜಗಳ ಮಾಡಿಕೊಂಡು ಕೌಟುಂಬಿಕ ಕಲಹದಿಂದ ಮನನೊಂದಿದ್ದು ಮೂರು ದಿನಗಳ ಹಿಂದೆ ವಿಜಯಪುರಕ್ಕೆ ಬಂದು ಮರಕ್ಕೆ ನೇಣುಬಿಗಿದುಕೊಂಡು ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಶವವನ್ನ ಕಂಡ ಸ್ಥಳಿಯರು ವಿಜಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ ವಿಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




