ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನ: ಮಕ್ಕಳು ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 25, 2023 | 7:31 PM

ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದು,  ಬಾವಿಯಲ್ಲಿ ಬಿದ್ದ ಮೂವರು ಪುಟಾಣಿ ಮಕ್ಕಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಬಳಿ ನಡೆದಿದೆ. ಸದ್ಯ ತಾಯಿ ಸಂಗೀತಾ ವಿರುದ್ಧ ಜಮಖಂಡಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನ: ಮಕ್ಕಳು ಸಾವು
ಪೊಲೀಸರಿಂದ ಪರಿಶೀಲನೆ
Follow us on

ಬಾಗಲಕೋಟೆ, ಆಗಸ್ಟ್​ 25: ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ (Mother) ಆತ್ಮಹತ್ಯೆಗೆ ಯತ್ನಿಸಿದ್ದು,  ಬಾವಿಯಲ್ಲಿ ಬಿದ್ದ ಮೂವರು ಪುಟಾಣಿ ಮಕ್ಕಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಬಳಿ ನಡೆದಿದೆ. ಶ್ರೀಶೈಲ್‌(5), ಶ್ರಾವಣಿ(3) ಹಾಗೂ 17 ದಿನದ ಸೌಜನ್ಯಾ ಮೃತ ಮಕ್ಕಳು. ಬಾವಿಗೆ ಹಾರಿದ್ದ ಪತ್ನಿ ಸಂಗೀತಾಳನ್ನು ಪತಿ ಹನುಮಂತ ರಕ್ಷಿಸಿದ್ದು, ಮಕ್ಕಳ ರಕ್ಷಣೆಗೆ ತಂದೆ ಎಷ್ಟೇ ಹೋರಾಡಿದರೂ ಬದುಕಿಸಲು ಸಾಧ್ಯವಾಗಿಲ್ಲ.

3ನೇ ಮಗು ಗಂಡಾಗುತ್ತೆಂಬ ಆಸೆ ಇಟ್ಟುಕೊಂಡಿದ್ದ ಸಂಗೀತಾ ಗುಡೆಪ್ಪನವರ, ಆದರೆ ಕಳೆದ 17 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇದರಿಂದ ನೊಂದು ಹೊಲದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಕ್ಕಳನ್ನು ಬಾವಿಗೆ ತಳ್ಳಿ ಕೊಂದಿದ್ದಕ್ಕೆ ಸಂಗೀತಾ ವಿರುದ್ಧ ಜಮಖಂಡಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಡಿಕ್ಕಿ-ವಿದ್ಯಾರ್ಥಿ ಸಾವು

ರಾಯಚೂರು: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ನಡೆದಿದೆ. ರಾಯಚೂರಿನ ಎಸ್​ಆರ್​ಪಿಎಸ್​ ಕಾಲೇಜಿನ ಮಲ್ಲೇಶ್(18) ಮೃತ ವಿದ್ಯಾರ್ಥಿ. ಕೊತ್ತದೊಡ್ಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಹಾಸನ: ಮದ್ಯದ ಚಟ ಬಿಡಿಸುತ್ತೇವೆಂದು ಪುನರ್ವಸತಿ ಕೇಂದ್ರದಲ್ಲಿ ವ್ಯಕ್ತಿಯ ಕೊಲೆ; ಪೋಷಕರ ಆರೋಪ

ಚಾಲಕ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ. ಅವಸರದಲ್ಲಿ ಟ್ರ್ಯಾಕ್ಟರ್​ ವೇಗವಾಗಿ ಚಲಾಯಿಸುತ್ತಿದ್ದ ವೇಳೆ ವಿದ್ಯಾರ್ಥಿಗೆ ಡಿಕ್ಕಿ ಆಗಿದೆ. ಘಟನೆ ನಂತರ ​ಟ್ರ್ಯಾಕ್ಟರ್ ಚಾಲಕ ಆರೋಪಿ ನಾಗರಾಜ್ ಪರಾರಿ ಆಗಿದ್ದಾನೆ. ರಾಮಣ್ಣ ಎಂಬುವನಿಗೆ ಮರಳು ತುಂಬಿದ್ದ ಟ್ರ್ಯಾಕ್ಟರ್ ಸೇರಿದೆ. ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ: ಸಾವು

ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರು: ಮೋಸ್ಟ್ ವಾಟೆಂಡ್ ಇಂಟರ್ ನ್ಯಾಷನಲ್ ಕ್ರಿಮಿನಲ್ಸ್ ಬಂಧನ ಪ್ರಕರಣ; ವಿಚಾರಣೆ ವೇಳೆ ಬಾಯ್ಬಿಟ್ಟರು ಸ್ಪೋಟಕ ಅಂಶ

ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಕ್ಯಾಂಟರ್ ಚಾಲಕ ರಾಕೇಶ್(19) ಮೃತ ವ್ಯಕ್ತಿ. ಕ್ಲೀನರ್ ಕೃಷ್ಣ(27)ಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:29 pm, Fri, 25 August 23