ಬೆಂಗಳೂರು: ಮೋಸ್ಟ್ ವಾಟೆಂಡ್ ಇಂಟರ್ ನ್ಯಾಷನಲ್ ಕ್ರಿಮಿನಲ್ಸ್ ಬಂಧನ ಪ್ರಕರಣ; ವಿಚಾರಣೆ ವೇಳೆ ಬಾಯ್ಬಿಟ್ಟರು ಸ್ಪೋಟಕ ಅಂಶ

ಬೆಂಗಳೂರಿನಲ್ಲಿ ಮೋಸ್ಟ್ ವಾಟೆಂಡ್ ಇಂಟರ್ ನ್ಯಾಷನಲ್ ಕ್ರಿಮಿನಲ್ಸ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬಂಧಿತ ಆರೋಪಿಗಳಿಗೆ ಹಣಕಾಸು ನೀಡುತ್ತಿದ್ದವರು ಯಾರು? ಇವರು ಬೆಂಗಳೂರಿನಲ್ಲಿ ನೆಲಸಿದ್ದು ಏಕೆ ಎಂಬ ಅಂಶ ಬಹಿರಂಗವಾಗಿದೆ.

ಬೆಂಗಳೂರು: ಮೋಸ್ಟ್ ವಾಟೆಂಡ್ ಇಂಟರ್ ನ್ಯಾಷನಲ್ ಕ್ರಿಮಿನಲ್ಸ್ ಬಂಧನ ಪ್ರಕರಣ; ವಿಚಾರಣೆ ವೇಳೆ ಬಾಯ್ಬಿಟ್ಟರು ಸ್ಪೋಟಕ ಅಂಶ
ಸಿಸಿಬಿ
Follow us
| Updated By: ವಿವೇಕ ಬಿರಾದಾರ

Updated on:Aug 25, 2023 | 10:14 AM

ಬೆಂಗಳೂರು: ನಗರದಲ್ಲಿ ಮೋಸ್ಟ್ ವಾಟೆಂಡ್ ಇಂಟರ್ ನ್ಯಾಷನಲ್ ಕ್ರಿಮಿನಲ್ಸ್ (International Criminals) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರು ಮತ್ತೆ ಇಬ್ಬರನ್ನು ಇಂದು (ಆ.25) ಬಂಧಿಸಿದ್ದಾರೆ. ಚೆನ್ನೈ (Chennai) ಮೂಲದ ಮನ್ಸೂರ್ ಮತ್ತು ವಿವೇಕ್ ನಗರದ ಅನ್ಬು ಬಂಧಿತ ಆರೋಪಿಗಳು. ಬಂಧಿತ ಮನ್ಸೂರ್​​ನಿಂದ ಸಿಸಿಬಿ ಪೊಲೀಸರು 57 ಲಕ್ಷ ರೂ. ನಗದು, 1.5 ಕೋಟಿ ಡಿಡಿ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಹಲವು ವಿಚಾರಗಳನ್ನು ಬಾಯಿಬಿಟ್ಟಿದ್ದಾರೆ.

ಮನ್ಸೂರ್ ಚೆನ್ನೈನಲ್ಲಿದ್ದುಕೊಂಡು ಬೆಂಗಳೂರಿನಲ್ಲಿದ್ದ ಆರೋಪಿಗಳ ಖರ್ಚು ವೆಚ್ಚಕ್ಕೆ ಸುಮಾರು 57 ಲಕ್ಷ ರೂ. ಹಣ ಹೊಂದಿಸಿದ್ದನು. ಕೆಲವೇ ದಿನಗಳಲ್ಲಿ ಆ ಹಣವನ್ನು ಬೆಂಗಳೂರಿಗೆ ಬಂದು ಆರೋಪಿಗಳಿಗೆ ನೀಡಲು ಸಿದ್ದನಾಗಿದ್ದನು. ಈ ಹಣ ಕೈಗೆ ಸೇರುತ್ತಿದ್ದಂತೆ ನಗರದಿಂದ ವಿದೇಶಕ್ಕೆ ಹಾರಲು ಆರೋಪಿಗಳು ಸಿದ್ಧರಾಗಿದ್ದರಂತೆ. ಸದ್ಯ ಸಿಸಿಬಿ ಪೊಲೀಸರು ಮನ್ಸೂರ್ ಯಾರು..? ಈತನ ಹಿನ್ನಲೆ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ.

ಅಲ್ಲದೇ ಈ ಮನ್ಸೂರ್​​ ಓಮನ್​​ನಲ್ಲಿ ಬಂಧನವಾಗಿರುವ ಜಲಾಲ್​​ಗೆ ಬೇನಾಮಿಯಾಗಿದ್ದನು. ಜಲಾಲ್ ಮಾರ್ಗದರ್ಶನದಂತೆ ಮನ್ಸೂರ್ ಆತ ಹೇಳಿದವರಿಗೆ ಹಣ ನೀಡುತ್ತಿದ್ದನು. ಜಲಾಲ್ ಬಂಧನಕ್ಕೂ ಮುನ್ನ ಬೆಂಗಳೂರಿಗೆ ಬಂದ ಶ್ರೀಲಂಕ ಶಾರ್ಪ್ ಶೂಟರ್​ಗಳಿಗೆ 50 ಲಕ್ಷ ರೂ. ನೀಡಲು ಹೇಳಿದ್ದನಂತೆ. ಅದರಂತೆ ಮನ್ಸೂರ್​ 50 ಲಕ್ಷ ರೂ. ನೀಡಲು ಬೆಂಗಳೂರಿಗೆ ಬರಲು ಸಿದ್ಧನಾಗಿದ್ದನು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂತಾರಾಷ್ಟ ಮಟ್ಟದ ಮೋಸ್ಟ್ ವಾಂಟೆಡ್​ ಕ್ರಿಮಿನಲ್​ಗಳ ಬಂಧನ, ಭಾರತಕ್ಕೆ ನುಸುಳಿದ್ದೇ ರೋಚಕ

ಇನ್ನು ಮನ್ಸೂರ್​​ನನ್ನು ಎಲ್​​ಟಿಟಿ ಲಿಂಕ್ ಹೊಂದಿರುವ, ನೇಪಾಳದಲ್ಲಿರುವ ಸಂಜೀವ್ ಜೊತೆ ಸೇರಿಸಲು ಜಲಾಲ್ ಫ್ಲ್ಯಾನ್ ಮಾಡಿದ್ದನು. ಈ ಶ್ರೀಲಂಕಾದ ಕ್ರಿಮಿನಲ್ಸ್ ಎಕೆ -47 ಸೇರಿದಂತೆ ವಿವಿಧ ಹೈ ಹ್ಯಾಂಡ್ ವೆಪನ್ ಬಳಸುವಲ್ಲಿ ನುರಿತರಾಗಿದ್ದಾರೆ. ಸಂಜೀವ್ ಜೊತೆ ಜಲಾಲ್​ ಮತ್ತು ಮನ್ಸೂರ್​ ಶ್ರೀಲಂಕಾದ ಪ್ರಾದೇಶಿಕ ಭಾಷೆ ಸಿಂಹಳಿಯಲ್ಲಿ ಚಾಟಿಂಗ್ ಮಾಡಿದ್ದಾರೆ. ಇವರ ಫ್ಲಾನಿಂಗ್​ ಏನು, ಯಾವ ಯಾವ ಗ್ರೂಪ್​ಗಳಲ್ಲಿ ಇವರು ಸಕ್ರಿಯವಾಗಿದ್ದರೂ ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮೊತ್ತೊಬ್ಬ ಆರೋಪಿ ಅನ್ಬು ಬೆಂಗಳೂರಿನಲ್ಲಿ ಪಾಸ್​​ಪೋರ್ಟ್ ಮಾಡಿಕೊಡುವ ಕೆಲಸ ಮಾಡುತ್ತಿದ್ದನು. ಶ್ರೀಲಂಕಾ ಪ್ರಜೆಗಳಿಗೆ ಭಾರತದ ಪಾಸ್​​ಪೋರ್ಟ್ ಮಾಡಿಕೊಡಲು ಪ್ಲಾನ್ ಇತ್ತು. ಅದಕ್ಕೆ ಬೇಕಾದ ದಾಖಲೆಗಳು ಸಂಗ್ರಹ ಮಾಡಲಾಗುತ್ತಿತ್ತು. ಹೀಗಾಗಿ ಪ್ರಕರಣದಲ್ಲಿ ಅನ್ಬು ಅರೆಸ್ಟ್ ಆಗಿದ್ದಾನೆ ಎಂದು ಮಾಹಿತಿ ದೊರೆತಿದೆ.

ಯಾರು ಈ ಜಲಾಲ್ ಅಲಿಯಾಸ್ ಮಹಮದ್ ಸಿದ್ದಿಕಿ ?

ಜಲಾಲ್ ಅಲಿಯಾಸ್ ಮಹಮದ್ ಸಿದ್ದಿಕಿ ಶ್ರೀಲಂಕಾದ ಡ್ರಗ್ಸ್ ಕಿಂಗ್​ಪಿನ್. ಶ್ರೀಲಂಕಾ ಅಂಡರ್ವರ್ಲ್ಡ್​​ನಲ್ಲಿ ಸಕ್ರಿಯನಾಗಿದ್ದನು. ಪಾಕಿಸ್ತಾನದ ಒರ್ವ ಡ್ರಗ್ಸ್ ಕಿಂಗ್​​ಪಿನ್ ಸಹೋದರಿಯನ್ನು ಮದುವೆಯಾಗಿದ್ದನು. ಶ್ರೀಲಂಕಾದಲ್ಲಿ ಅಪರಾಧ ಮಾಡಿ ಭಾರತದಲ್ಲಿ ತಲೆಮರೆಸಿಕೊಂಡಿದ್ದನು. ಭಾರತದ ಪಾಸ್​​ ಪೋರ್ಟ್​​ ಹೊಂದಿದ್ದನು. ಭಾರತದ ಪಾಸ್​​ ಪೋರ್ಟ್​​ ಬಳಸಿ ಒಮಾನ್ ದೇಶಕ್ಕೆ ಹೋಗಿದ್ದನು. ಭಾರತೀಯ ಇಂಟಲಿಜೆನ್ಸ್ ತಂಡದ ಸಹಕಾರದಿಂದ ಒಮಾನ್​ನಲ್ಲಿ ಬಂಧಿಸಲಾಗಿದೆ. ಸದ್ಯ ಇದೇ ಜಲಾನ್ ಅಲಿಯಾಸ್ ಮಹಮದ್ ಸಿದ್ದಿಕಿ ಮಾತಿನಿಂದ ಭಾರತದಲ್ಲಿ ಇಷ್ಟೆಲ್ಲ ಕೆಲಸ ನಡೆದಿರುವುದು ಪತ್ತೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:47 am, Fri, 25 August 23

ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ