Youth Parliament Festival: ಪ್ರಧಾನಿ ಮೋದಿ ಎದುರು ರಾಷ್ಟ್ರಮಟ್ಟದ ಭಾಷಣ ಮಾಡಲಿರುವ ಕರ್ನಾಟಕದ ಏಕೈಕ ವಿದ್ಯಾರ್ಥಿ ಬಾಗಲಕೋಟೆಯ ಪರೇಶ್ ಗುಂಡೇಚಾ

| Updated By: Rakesh Nayak Manchi

Updated on: Jan 20, 2023 | 4:27 PM

ರಾಷ್ಟ್ರೀಯ ಯುವ ಸಂಸತ್ ಉತ್ಸವದಲ್ಲಿ ರಾಷ್ಟ್ರಮಟ್ಟದ ಭಾಷಣ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಿಂತು ಭಾಷಣ ಮಾಡಲು ಕರ್ನಾಟಕದ ಏಕೈಕ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ.

Youth Parliament Festival: ಪ್ರಧಾನಿ ಮೋದಿ ಎದುರು ರಾಷ್ಟ್ರಮಟ್ಟದ ಭಾಷಣ ಮಾಡಲಿರುವ ಕರ್ನಾಟಕದ ಏಕೈಕ ವಿದ್ಯಾರ್ಥಿ ಬಾಗಲಕೋಟೆಯ ಪರೇಶ್ ಗುಂಡೇಚಾ
ಬಾಗಲಕೋಟೆ ವಿದ್ಯಾರ್ಥಿ ಪರೇಶ್ ಗುಂಡೇಚಾ (ಎಡ ಚಿತ್ರ) ಮತ್ತು ಪ್ರಧಾನಿ ನರೇಂದ್ರ ಮೋದಿ (ಬಲ ಚಿತ್ರ)
Follow us on

ಬಾಗಲಕೋಟೆ: ರಾಷ್ಟ್ರೀಯ ಯುವ ಸಂಸತ್ ಉತ್ಸವದಲ್ಲಿ (National Youth Parliament Festival) ರಾಷ್ಟ್ರಮಟ್ಟದ ಭಾಷಣ (National level speech) ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮುಂದೆ ನಿಂತು ಭಾಷಣ ಮಾಡಲು ಬಾಗಲಕೋಟೆಯ ಪರೇಶ್ ಗುಂಡೇಚಾ ಆಯ್ಕೆಯಾಗಿದ್ದು, ಕರ್ನಾಟಕದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿಯೂ ಇವರಾಗಿದ್ದಾರೆ. ಜನವರಿ 23ರಂದು ಸಂಸತ್ ಭವನದಲ್ಲಿ ಯುವ ಸಂಸತ್ ಉತ್ಸವ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಯುವ ಸಂಸತ್ ಕಾರ್ಯಕ್ರಮದಲ್ಲಿ ಪರೇಶ್ ಗುಂಡೇಚಾ ಅವರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತ ಭಾಷಣಕ್ಕೆ ಅವಕಾಶ ನೀಡಲಾಗಿದ್ದು, ಮೂರು ನಿಮಿಷ ಕಾಲಾವಕಾಶ ನೀಡಲಾಗಿದೆ. ಬಾಗಲಕೋಟೆ ಬಿವಿವಿ ಸಂಘದ ಕಾಮರ್ಡ್ ಕಾಲೇಜಿನಲ್ಲಿ ಬಿಬಿಎ ಮೂರನೇ ಸೆಮಿಸ್ಟರ್ ವ್ಯಾಸಾಂಗ ಮಾಡುತ್ತಿರುವ ಪರೇಶ್, ನೆಹರು ಯುವಕೇಂದ್ರದ ಮೂಲಕ ಜಿಲ್ಲಾ, ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಗುರುತಿಸಿಕೊಂಡಿದ್ದರು. ರಾಷ್ಟ್ರಮಟ್ಟದಲ್ಲಿ ಇವರು ಮಾಡಿದ ಭಾಷಣ ವಿಡಿಯೋ ಗಮನಿಸಿದ ರಾಷ್ಟ್ರಮಟ್ಟದ ನೆಹರು ಯುವ ಕೇಂದ್ರದ ಅಧಿಕಾರಿಗಳು ಯುವ ಸಂಸತ್ ಉತ್ಸವದಲ್ಲಿನ ಭಾಷಣಕ್ಕೆ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: ಫೆ.27ರಿಂದ ಮಲೆನಾಡಿನಲ್ಲಿ ವಿಮಾನ ಹಾರಾಟ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ

ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಪ್ರತಿವರ್ಷ ಜನವರಿ ತಿಂಗಳಲ್ಲಿ ರಾಷ್ಟ್ರೀಯ ಯುವಜನೋತ್ಸವ ರಾಷ್ಟ್ರೀಯ ಯುವಜನೋತ್ಸವವನ್ನು ಆಯೋಜಿಸಲಾಗುತ್ತಿದೆ. ದೇಶದ ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಗ್ಗೂಡಿಸುವುದು ರಾಷ್ಟ್ರೀಯ ಯುವ ಉತ್ಸವದ ಉದ್ದೇಶವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Fri, 20 January 23