Kannada News Karnataka Bagalkot Not a dirty bus stand, no filthy toilet Bagalkote KSRTC bus stop role model for cleanliness and passenger friendly bus stop
ಉಚಿತ ಬಸ್ ಪ್ರಯಾಣದ ಸಂದಿಗ್ಧ ಪರಿಸ್ಥಿತಿ ಮಧ್ಯೆ ಸುಂದರವಾದ ಮಾದರಿ ಬಸ್ ನಿಲ್ದಾಣ ಎಲ್ಲರ ಗಮನ ಸೆಳೆಯುತ್ತಿದೆ! ಬನ್ನಿ ‘ಉಚಿತವಾಗಿ’ ಒಂದು ರೌಂಡ್ ಹಾಕಿಬರೋಣ
Bagalkote KSRTC bus stop: ನೂತನ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳಲ್ಲಿ ಕೆಎಸ್ಆರ್ಟಿಸಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕೂಡ ಒಂದು. ಈಗ ಬಹುತೇಕ ರಾಜ್ಯಾದಂತ ಎಲ್ಲ ಕೆ ಎಸ್ ಆರ್ ಟಿ ಸಿ ಬಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಹಿಳೆಯರಿಗೆ ಉಚಿತ ಪ್ರಯಾಣದ ಬಸ್ ವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಅದೊಂದು ನಗರದಲ್ಲಿ ಸುಂದರವಾದಂತಹ ಮಾದರಿ ಬಸ್ ನಿಲ್ದಾಣ ಎಲ್ಲರ ಗಮನ ಸೆಳೆಯುತ್ತಿದೆ. ಸ್ವಚ್ಛತೆ ಹಾಗೂ ಶಿಸ್ತಿಗೆ ಹೆಸರಾದಂತಹ ಬಸ್ ನಿಲ್ದಾಣ ಪ್ರಯಾಣಿಕರ ಮೆಚ್ಚುಗೆ ಗಳಿಸಿದೆ.
1 / 13
ಹೌದು ಸದ್ಯ ಕರ್ನಾಟಕ ರಾಜ್ಯದಲ್ಲಿ 5 ಗ್ಯಾರಂಟಿ ಬಗ್ಗೆಯೇ ಚರ್ಚೆಗಳು ಶುರುವಾಗಿದೆ. ಕಾಂಗ್ರೆಸ್ ಸರ್ಕಾರ ಹೇಳಿರುವಂತಹ ಐದು ಪ್ರಮುಖ ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎನ್ನುವುದು ಕೂಡ. ಸರ್ಕಾರವೇನೋ ಉಚಿತ ಬಸ್ ಪ್ರಯಾಣ ಎಂದು ಘೋಷಣೆ ಮಾಡಿದೆ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಯಾವ ರೀತಿ ಸನ್ನದ್ದರಾಗಿರಬೇಕು, ಹೇಗೆಲ್ಲ ಬಸ್ ನ ವ್ಯವಸ್ಥೆ ಮಾಡ್ಬೇಕು ಎಂಬುದೇ ದೊಡ್ಡ ಚಿಂತೆಯಾಗಿ ಅದರ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
2 / 13
ಸಹಜವಾಗಿ ಕೆಎಸ್ಆರ್ಟಿಸಿ ಬಸ್ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸ್ವಚ್ಚವಾಗಿರಲ್ಲ ಎಂಬ ಅಸಡ್ಡೆಯ ಭಾವನೆ ಇರೋದು ಸಹಜ. ಆದರೆ ಇದಕ್ಕೆ ಅಪವಾದ ಎಂಬಂತೆ ಬಾಗಲಕೋಟೆಯ ನವನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಎಲ್ಲಾ ಪ್ರಯಾಣಿಕರನ್ನು ತನ್ನತ್ತ ಕೈ ಮಾಡಿ ಕರೆಯುತ್ತಿದೆ ಈ ಬಸ್ ನಿಲ್ದಾಣದಲ್ಲಿ ಪ್ರತಿಯೊಂದು ಕೂಡ ಶಿಸ್ತು ಹಾಗೂ ಸ್ವಚ್ಛತೆ ಸುಸಜ್ಜಿತವಾಗಿ ಕೂಡಿದೆ.
3 / 13
ಕಣ್ಣು ಹಾಯಿಸಿ ನೋಡಿದ ಕಡೆಯಲ್ಲ ಜಾಗೃತಿ ಸಂದೇಶವಿರುವಂತಹ ಬರಹಗಳು. ಇನ್ನೊಂದು ಕಡೆ ಸಾಲು ಸಾಲು ನೀಟಾಗಿ ಜೋಡಿಸಿದಂತಹ ಡಸ್ಟ್ ಬಿನ್ ಗಳು, ಸಮವಸ್ತ್ರ ಧರಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿರುವ ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ. ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿರುವ ಮೇಲಾಧಿಕಾರಿಗಳು.
4 / 13
5 / 13
ವಿಕಲಚೇತನ ರನ್ನು ವೀಲ್ ಚೇರ್ನಲ್ಲಿ ಕೂರಿಸಿಕೊಂಡು ಬಸ್ ನಲ್ಲಿ ಕೂರಿಸುತ್ತಿರುವ ಕೆಎಸ್ಆರ್ಟಿಸಿ ಸಿಬ್ಬಂದಿ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ನವನಗರದ ಬಸ್ ನಿಲ್ದಾಣದಲ್ಲಿ.
6 / 13
ಇದರ ಜೊತೆಗೆ ಪ್ರಮುಖವಾದಂತಹ ಆಕರ್ಷಣೆ ಎಂದರೆ ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲರೂ ಕೂಡ ಸಮವಸ್ತ್ರದಲ್ಲಿ ಕಂಗೊಳಿಸುತ್ತಿದ್ದಾರೆ. ಯಾರೂ ಕೂಡ ಬೇಕಾಬಿಟ್ಟಿಯಾಗಿ ತಮಗೆ ತಿಳಿದಂತಹ ಸಮವಸ್ತ್ರವನ್ನು ಧರಿಸಿಕೊಂಡು ಬರುವಂತಿಲ್ಲ. ಎಲ್ಲರೂ ಕಡ್ಡಾಯವಾಗಿ ಕೆಎಸ್ಆರ್ಟಿಸಿ ಸೂಚನೆ ಹಾಗೂ ನಿಯಮಾನುಸಾರ ಸಮವಸ್ತ್ರಗಳನ್ನು ಧರಿಸಿಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇದರಿಂದ ಬಾಗಲಕೋಟೆಯ ನವನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸ್ವಚ್ಛತೆ ಹಾಗೂ ಶಿಸ್ತಿನಿಂದ ಕೂಡಿದ್ದು, ಮಾದರಿ ಬಸ್ ನಿಲ್ದಾಣ ಎಂದು ಕರೆಯಲ್ಪಡುತ್ತಿದೆ.
7 / 13
ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಾಗಲಕೋಟೆಯ ನವನಗರದ ಬಸ್ ನಿಲ್ದಾಣ ಶಿಸ್ತು ಹಾಗೂ ಸ್ವಚ್ಛತೆಯಿಂದ ಕಂಗೊಳಿಸುತ್ತಿದೆ. ತಮಗಿರುವ ಅತಿಯಾದ ಒತ್ತಡದ ಮಧ್ಯೆಯೂ ಕೂಡ ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನವನಗರದ ಬಸ್ ನಿಲ್ದಾಣವನ್ನು ಅಚ್ಚುಕಟ್ಟಾಗಿ ಶಿಸ್ತು ಹಾಗೂ ಸ್ವಚ್ಛತೆಯಿಂದ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿ ಮಾದರಿ ಬಸ್ ನಿಲ್ದಾಣವನ್ನಾಗಿ ಮಾಡಿದ್ದಾರೆ.
8 / 13
ಈ ಬಸ್ ನಿಲ್ದಾಣದಲ್ಲಿ ಕೂರಲು ಸುಸಜ್ಜಿತ ಆಸನ ವ್ಯವಸ್ಥೆ ಯಾರೂ ಕೂಡ ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್ ಬಿಸಾಡಬಾರದು ಎಂಬ ನಿಟ್ಟಿನಲ್ಲಿ ಡಸ್ಟ್ ಬಿನ್ ಗಳನ್ನ ಜೋಡಿಸಿಡಲಾಗಿದೆ. ಜೊತೆಗೆ ಯಾವುದೇ ವ್ಯಕ್ತಿ ಉಗುಳಿದರೆ ನಿರ್ದಾಕ್ಷಿಣ್ಯವಾಗಿ ದಂಡ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಿದ್ದಾರೆ.
9 / 13
ಈಗಾಗಲೇ ಕೆಲವೊಂದಿಷ್ಟು ಅವಿವೇಕಿಗಳು ತಿಂದು ಉಗಿದ ಜಾಗವನ್ನು ಖುದ್ದು ಕೆಎಸ್ಆರ್ಟಿಸಿ ಸಿಬ್ಬಂದಿಯೇ ಸ್ವಚ್ಛ ಮಾಡಿದ್ದು ಗಮನಿಸಬಹುದಾಗಿದೆ. ನಿಲ್ದಾಣದಲ್ಲಿ ಬಸ್ ನಿಲ್ಲುವ ಜಾಗದಲ್ಲಿ ಜನರಿಗೆ ಸರಿಯಾಗಿ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ರೂಟ್ ಬೋರ್ಡ್ ಗಳನ್ನು ಕೂಡ ಅಳವಡಿಸಿದ್ದು ಪ್ರಯಾಣಿಕರಿಗೆ ತಮ್ಮ ತಮ್ಮ ಮಾರ್ಗದ ಬಸ್ ಗುರುತುಹಿಡಿಯಲು ಅನುಕೂಲವಾಗಿದೆ.
10 / 13
ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ ವಿಶ್ರಾಂತಿ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ ,ಚಿಕ್ಕ ಮಕ್ಕಳ ತಾಯಂದಿರು ಬಾಣಂತಿಯರು ಎಲ್ಲರೂ ಕೂಡ ಇಲ್ಲಿ ಉಳಿದುಕೊಳ್ಳಬಹುದು. ತಾಯಂದಿರು ಇದೆ ಕೋಣೆಯಲ್ಲಿ ಕುಳಿತುಕೊಂಡು ತಮ್ಮ ಮಕ್ಕಳಿಗೆ ಹಾಲುಣಿಸಬಹುದಾದಂತ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.
11 / 13
ನಿಲ್ದಾಣದಲ್ಲಿ ಸಿಸಿಕ್ಯಾಮೆರಾ ಅಳವಡಿಸಲಾಗಿದೆ. ಇನ್ನು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬರುವಂತಹ ಯಾವುದೇ ಪ್ರಯಾಣಿಕರು ತಮ್ಮ ಬೈಕ್ ಅಥವಾ ಇತರೆ ವಾಹನಗಳನ್ನು ತೆಗೆದುಕೊಂಡು ಬಂದರೆ ವಾಹನಗಳು ನಿಲ್ಲುವುದಕ್ಕೆ ಪ್ರತ್ಯೇಕವಾದಂತಹ ಪಾರ್ಕಿಂಗ್ ಯಾರ್ಡ್ ಮಾಡಲಾಗಿದೆ.
12 / 13
ಜೊತೆಗೆ ಬಸ್ ನಿಲ್ದಾಣದ ಮಧ್ಯಭಾಗದಲ್ಲಿ ಚಿಕ್ಕದಾದ ಒಂದು ಉದ್ಯಾನವನವನ್ನು ಕೂಡ ನಿರ್ಮಿಸಲಾಗಿದ್ದು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಪರಿಸರಸ್ನೇಹಿ ಬಸ್ ನಿಲ್ದಾಣ ಎಂದು ಕೂಡ ಕರೆಸಿಕೊಳ್ಳುತ್ತಿದೆ ಇಲ್ಲಿ ಗಮನಿಸಬೇಕಾದಂತಹ ಒಂದು ಅಂಶವೆಂದರೆ ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಸ್ವಂತ ಹಣವನ್ನು ಕೂಡಿಸಿ ಬಸ್ ನಿಲ್ದಾಣವನ್ನ ಸ್ವಚ್ಛತಾ ಕಾರ್ಯಕ್ಕೆ ಬಳಕೆ ಮಾಡಿದ್ದಾರೆ.
13 / 13
ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪ್ರಯತ್ನ, ಇಚ್ಛಾಶಕ್ತಿ ಮೇರೆಗೆ ಬಾಗಲಕೋಟೆಯ ನವನಗರ ಬಸ್ ನಿಲ್ದಾಣ ಇಂದು ಮಾದರಿ ಬಾಸ್ ನಿಲ್ದಾಣವಾಗಿ ಕಂಗೊಳಿಸುತ್ತಿದ್ದು, ಬಸ್ ನಿಲ್ದಾಣ ಇಷ್ಟೊಂದು ಸುಂದರವಾಗಿ ರೂಪಗೊಳ್ಳಲು ಕಾರಣವಾದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಶಿಸ್ತು ಹಾಗೂ ಸ್ವಚ್ಚತೆ ಮೂಲಕ ಕಂಗೊಳಿಸುತ್ತಿದ್ದು,ಇದು ನಿರಂತರವಾಗಿ ಮಂದುವರೆಯಬೇಕಿದೆ
Published On - 9:48 am, Thu, 8 June 23