ನಕಲಿ ಗೊಬ್ಬರ ತಯಾರಿಕೆ ಆರೋಪ, ಪ್ರೀತಮ್ ಇಂಡಸ್ಟ್ರೀಸ್ ಸೀಜ್
ಬಾಗಲಕೋಟೆ: ನಕಲಿ ಗೊಬ್ಬರ ತಯಾರಿಸುತ್ತಿರುವ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಿದ ಅಧಿಕಾರಿಗಳು ಬಾಗಲಕೋಟೆ ನವನಗರದ ಕೈಗಾರಿಕಾ ವಲಯದಲ್ಲಿರುವ ಪ್ರೀತಮ್ ಇಂಡಸ್ಟ್ರೀಸ್ ಸೀಜ್ ಮಾಡಿದ್ದಾರೆ. ಮಾಹಿತಿ ಆಧರಿಸಿ ಕೃಷಿ, ಕಂದಾಯ, ಪೊಲೀಸ್ ಅಧಿಕಾರಿಗಳು ಪ್ರೀತಮ್ ಇಂಡಸ್ಟ್ರೀಸ್ ಮೇಲೆ ಜಂಟಿ ದಾಳಿ ನಡೆಸಿದ್ರು. ಇಂಡಸ್ಟ್ರೀಜ್ಗೆ ಹೋದಾಗ ಸಂಬಂಧಪಟ್ಟವರಿಗೆ ಕರೆ ಮಾಡಿದ್ರು ಸ್ಪಂದಿಸಿಲ್ಲ. ಹೀಗಾಗಿ ಗೇಟ್ ಮತ್ತು ಕೀಲಿ ಮುರಿದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಉಪ್ಪಿನ ರೀತಿ ಕಾಣುವ ಬಿಳಿ ವಸ್ತು ಪತ್ತೆಯಾಗಿದೆ. ಹಾಗೂ ಅಲ್ಲಿ 400ಕ್ಕೂ ಅಧಿಕ ಬ್ಯಾಗ್ಗಳು, […]
ಬಾಗಲಕೋಟೆ: ನಕಲಿ ಗೊಬ್ಬರ ತಯಾರಿಸುತ್ತಿರುವ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಿದ ಅಧಿಕಾರಿಗಳು ಬಾಗಲಕೋಟೆ ನವನಗರದ ಕೈಗಾರಿಕಾ ವಲಯದಲ್ಲಿರುವ ಪ್ರೀತಮ್ ಇಂಡಸ್ಟ್ರೀಸ್ ಸೀಜ್ ಮಾಡಿದ್ದಾರೆ.
ಮಾಹಿತಿ ಆಧರಿಸಿ ಕೃಷಿ, ಕಂದಾಯ, ಪೊಲೀಸ್ ಅಧಿಕಾರಿಗಳು ಪ್ರೀತಮ್ ಇಂಡಸ್ಟ್ರೀಸ್ ಮೇಲೆ ಜಂಟಿ ದಾಳಿ ನಡೆಸಿದ್ರು. ಇಂಡಸ್ಟ್ರೀಜ್ಗೆ ಹೋದಾಗ ಸಂಬಂಧಪಟ್ಟವರಿಗೆ ಕರೆ ಮಾಡಿದ್ರು ಸ್ಪಂದಿಸಿಲ್ಲ. ಹೀಗಾಗಿ ಗೇಟ್ ಮತ್ತು ಕೀಲಿ ಮುರಿದು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಉಪ್ಪಿನ ರೀತಿ ಕಾಣುವ ಬಿಳಿ ವಸ್ತು ಪತ್ತೆಯಾಗಿದೆ. ಹಾಗೂ ಅಲ್ಲಿ 400ಕ್ಕೂ ಅಧಿಕ ಬ್ಯಾಗ್ಗಳು, ಬೇರೆ ಬೇರೆ ಕಂಪನಿಗಳ ಗೊಬ್ಬರದ ಪ್ಯಾಕೆಟ್ಗಳು ಸಿಕ್ಕಿವೆ. ಗೊಬ್ಬರದ ಗುಣಮಟ್ಟ ಪರೀಕ್ಷಿಸಲು ಲ್ಯಾಬ್ಗೆ ರವಾನೆ ಮಾಡಲಾಗಿದೆ. ಲ್ಯಾಬ್ನ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Published On - 1:49 pm, Thu, 14 May 20