
ಬಾಗಲಕೋಟೆ, (ಅಕ್ಟೋಬರ್ 20): ಆಸ್ತಿ ವಿಚಾರಕ್ಕೆ (property dispute) ಸಂಬಂಧಿಗಳ ನಡುವೆ ನಡೆದ ಜಗಳಕೊಲೆಯಲ್ಲಿ ಅಂತ್ಯವಾಗಿದೆ. ಬಾಗಲಕೋಟೆ (Bagalkot) ಜಿಲ್ಲೆಯ ಬೀಳಗಿ ತಾಲ್ಲೂಕಿನ ಲಿಂಗಾಪುತ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿಶ್ವನಾಥ ಮರೆಮ್ಮನವರ ( 26) ಕೊಲೆಯಾದ ದುರ್ದೈವಿ. ಪೂರ್ವಜರ ಆಸ್ತಿಗಾಗಿ ಮೃತ ವಿಶ್ವನಾಥ ಹಾಗೂ ಆತನ ತಂಗಿ ಕುಟುಂಬದ ನಡುವೆ ಕಳೆದ ಏಳು ತಿಂಗಳಿನಿಂದ ನಡೆಯುತ್ತಿದ್ದ ಕಲಹ ಅಂತಿಮವಾಗಿ ಸಾವಿನಲ್ಲಿ ಅಂತ್ಯವಾಗಿದೆ. ತಂದೆ ತಾಯಿಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಕೊಲೆಯಾದ ವಿಶ್ವನಾಥ ಓದು ಅರ್ಧಕ್ಕೆ ಬಿಟ್ಟು ಬಂದು ಮನೆಯಲ್ಲಿದ್ದ. ಕೃಷಿ ಮಾಡಿಕೊಂಡು ಹೆತ್ತರವರ ಜೊತೆಗಿದ್ದ. ಆದ್ರೆ, ಕೊನೆಗೆ ಹೆತ್ತರವ ರಕ್ಷಣಗೆಂದು ಕಾಲೇಜು ಬಿಟ್ಟುಬಂದವನನ್ನೇ ಬಲಿ ಪಡೆದುಕೊಂಡಿದ್ದಾರೆ.
ಕೊಲೆಯಾದ ವಿಶ್ವನಾಥನ ತಂದೆ ಹನಮಂತ ಮತ್ತು ಹನಮಂತನ ಸಹೋದರಿ ಯಮನವ್ವಳ ಮಧ್ಯೆ ಆಗಾಗ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಪೂರ್ವಜರಿಂದ 10 ಎಕರೆ ಜಮೀನು ಹನಮಂತನಿಗೆ ಬಂದಿತ್ತು. ಈ ನಡುವೆ ಯಮನವ್ವಳಿಗೆ ಒಂದೂವರೆ ಎಕರೆ ಬರೆದುಕೊಡಲಾಗಿತ್ತು ಎನ್ನಲಾಗಿದೆ. ಇವುಗಳ ಮಧ್ಯೆ ತನಗೆ ತವರು ಮನೆ ಆಸ್ತಿಯಲ್ಲಿ ಪಾಲು ಬರಬೇಕು ಎಂದು ಕೇಳಿದ್ದಳು. ಆದ್ರೆ ಇತ್ತೀಚಿಗೆ ಹನಮಂತ ಹೊಲವನ್ನ ಮತ್ತಷ್ಟು ಹದಗೊಳಿಸಿ ತಯಾರಿ ಮಾಡಿಕೊಂಡಾಗ ಕಳೆದ 7 ತಿಂಗಳಿಂದ ಆಗಾಗ ಜಗಳ ಜೋರಾಗಿಯೇ ನಡೆಯುತ್ತಿತ್ತು. ಇದರ ಬೆನ್ನಲ್ಲೆ ವಿಶ್ವನಾಥ ತನ್ನ ಸಹೋದರನ ಜೊತೆ ಬೈಕ್ ಮೇಲೆ ತೆರಳುವಾಗ ರಸ್ತೆಯಲ್ಲಿದ್ದ ಬುಟ್ಟಿಯನ್ನ ತೆಗೆದಿಡುವ ವಿಚಾರವಾಗಿ ಮತ್ತೇ ಗಲಾಟೆ ಶುರುವಾಗಿದೆ. ಹೀಗಿರುವಾಗ ಯಮನವ್ವಳ ಅಣ್ಣ ಬಸಪ್ಪ ಹಾಗೂ ಸಂಬಂಧಿಗಳಾದ ಪ್ರಕಾಶ್, ಗಣೇಶ, ರಂಗಪ್ಪ, ಕುಮಾರ, ಯಲ್ಲಪ್ಪ, ಬಸಪ್ಪ,ಯಂಕಪ್ಪ ಸೇರಿ ರಾಡ್ ನಿಂದ ತಲೆಗೆ ಜೋರಾಗಿ ಹಲ್ಲೆ ಮಾಡಿದ್ದಾರಂತೆ. ಇದರಿಂದ ಸ್ಥಳದಲ್ಲಿ ಕುಸಿದು ಬಿದ್ದಿದ್ದ ವಿಶ್ವನಾಥನನ್ನು ತಕ್ಷಣ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಫಲಕಾರಿಯಾಗದೇ ವಿಶ್ವನಾಥ ಕೊನೆಯುಸಿರೆಳೆದಿದ್ದಾನೆ.
ಇನ್ನು ಆಸ್ತಿ ವಿಚಾರವಾಗಿ ಯಮನವ್ವ ಕುಟುಂಬಸ್ಥರು ವಿಶ್ವಾನಾಥನ ತಂದೆ ತಾಯಿಗೆ ಬೆದರಿಕೆ ಹಾಕಿದ್ದರು. ಹೀಗಾಗಿ ಯಾವ ಸಮಯದಲ್ಲಿ ಏನಾಗುತ್ತೋ ಎನ್ನುವ ಭಯದಲ್ಲಿ ವಿಶ್ವನಾಥ್ ಕಾಲೇಜನ್ನು ಅರ್ಧಕ್ಕೆ ಬಿಟ್ಟು ಬಂದು ಮನೆ ಸೇರಿದ್ದ. ಹೆತ್ತವರನ್ನು ನೋಡಿಕೊಳ್ಳುತ್ತ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ. ಆದ್ರೆ, ದುರದೃಷ್ಟವಶಾತ್ ತಂದೆ ತಾಯಿ ಜೀವ ಕಾಪಾಡಲು ಓದುವುದನ್ನೇ ಬಿಟ್ಟು ಬಂದಿದ್ದ ವಿಶ್ವನಾಥನೇ ಸಂಬಂಧಿಕರ ಕೈಯಲ್ಲಿ ಬಲಿಯಾಗಿದ್ದಾನೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಮ್ಮ ಮಗನ ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಸಿಬಿ ಎಸ್ ಇ ಯಲ್ಲಿ ಓದಿ ಬಿಕಾಮ್ ಮುಗಿಸಿದ ವಿಶ್ವನಾಥ ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ. ನಿತ್ಯ ಕೃಷಿ ಮಾಡಿ ಕುಟುಂಬಕ್ಕೆ ಆಸರೆಯಾಗಿದ್ದ.ಆದರೆ ಇದೀಗ ಸಂಬಂಧಿಕರೇ ಆತನನ್ನು ಕೊಲೆ ಮಾಡಿದ್ದಾರೆ.ಇದು ಕುಟುಂಬಕ್ಕೆ ಅರಗಿಸಿಕೊಳ್ಳದಷ್ಟು ದುಃಖ ತಂದೊಡ್ಡಿದೆ.
.
ಇತ್ತ ಘಟನೆಯ ಬೆನ್ನಲ್ಲೆ ಬೀಳಗಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳದಲ್ಲಿದ್ದ 4 ಜನ ಸೇರಿ ಒಟ್ಟು 24 ವಿರುದ್ಧ ವಿಶ್ವನಾಥ ಕುಟುಂಬಸ್ಥರು ಕೊಲೆ ಕೇಸ್ ದಾಖಲಿಸಿದ್ದಾರೆ. ಸದ್ಯ ಪ್ರಾಥಮಿಕ ಹಂತವಾಗಿ ಆರೋಪಿಗಳಿಗಾಗಿ ಶೋಧ ನಡೆಸಿದ ಪೋಲಿಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಉಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಒಟ್ಟಿನಲ್ಲಿ ಆಸ್ತಿಗಾಗಿ ಅಕ್ಕ ತಮ್ಮನ ಕುಟುಂಬಸ್ಥರ ಮದ್ಯೆ ನಡೆದ ಜಗಳ ಅಂತಿಮವಾಗಿ ತಮ್ಮನ ಮಗನನ್ನೇ ಬಲಿಪಡೆದುಕೊಂಡಿದ್ದು ಮಾತ್ರ ದುರದೃಷ್ಟಕರ ಸಂಗತಿಯೇ ಸರಿ.