ಘಲ್ ಘಲ್ ಬಳೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು, ಬನಶಂಕರಿದೇವಿ ಜಾತ್ರೆಯಲ್ಲಿ ಬಳೆಗಳ ಮೋಡಿ

ಬಾಗಲಕೋಟೆ: ಜಾತ್ರೆ ಅಂದ್ರೆ ಹೆಣ್ಮಕ್ಕಳಿಗೆ ಒಂಥರಾ ಖುಷಿ. ಯಾಕಂದ್ರೆ ಕೂದಲಿಗೆ ಹಾಕೋ ಕ್ಲಿಪ್​ಯಿಂದ ಹಿಡ್ದು ಬಳೆಗಳವರೆಗೂ ಕಲೆಕ್ಷನ್ಸ್ ಸಿಗುತ್ತೆ. ಈ ಜಾತ್ರೆಯೂ ಅಷ್ಟೇ. ಜಾತ್ರೆಗೆ ಬರೋ ಮಹಿಳೆಯರು ಬರಿಗೈನಲ್ಲಿ ಬಂದ್ರೂ ಹೋಗೋವಾಗ ಕೈತುಂಬಾ ಬಳೆ ತೊಟ್ಟು ಹೋಗ್ತಾರೆ. ಕಂಡೊಡನೆ ಕಣ್ಣರಳಿಸುವಷ್ಟು ಸುಂದರ.. ಘಲ್ ಘಲ್ ನಾದದ ಜೊತೆ ಕಲರವದ ಝೇಂಕಾರ. ಕಾಮನಬಿಲ್ಲಿನ ರಂಗನ್ನೇ ಮೀರಿಸುವಷ್ಟು ಚಿತ್ತಾರ. ನೋಡಿದಷ್ಟೂ ಮನಸೆಳೆಯುವಷ್ಟು ಮನೋಹರ. ಅಬ್ಬಾ.. ಬಣ್ಣ ಬಣ್ಣದ ಬಳೆ ಧರಿಸಿ ಹೆಣ್ಮಕ್ಕಳದ್ದು ವಯ್ಯಾರವೋ ವಯ್ಯಾರ. ಆಯ್ಕೆಯಲ್ಲಿ ಕಾಂಪ್ರಮೈಸ್ ಆಗ್ಬೇಕಿಲ್ಲ. ಕಲರ್​ […]

ಘಲ್ ಘಲ್ ಬಳೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು,  ಬನಶಂಕರಿದೇವಿ ಜಾತ್ರೆಯಲ್ಲಿ ಬಳೆಗಳ ಮೋಡಿ
ಸಾಧು ಶ್ರೀನಾಥ್​

Updated on: Jan 16, 2020 | 7:02 AM

ಬಾಗಲಕೋಟೆ: ಜಾತ್ರೆ ಅಂದ್ರೆ ಹೆಣ್ಮಕ್ಕಳಿಗೆ ಒಂಥರಾ ಖುಷಿ. ಯಾಕಂದ್ರೆ ಕೂದಲಿಗೆ ಹಾಕೋ ಕ್ಲಿಪ್​ಯಿಂದ ಹಿಡ್ದು ಬಳೆಗಳವರೆಗೂ ಕಲೆಕ್ಷನ್ಸ್ ಸಿಗುತ್ತೆ. ಈ ಜಾತ್ರೆಯೂ ಅಷ್ಟೇ. ಜಾತ್ರೆಗೆ ಬರೋ ಮಹಿಳೆಯರು ಬರಿಗೈನಲ್ಲಿ ಬಂದ್ರೂ ಹೋಗೋವಾಗ ಕೈತುಂಬಾ ಬಳೆ ತೊಟ್ಟು ಹೋಗ್ತಾರೆ.

ಕಂಡೊಡನೆ ಕಣ್ಣರಳಿಸುವಷ್ಟು ಸುಂದರ.. ಘಲ್ ಘಲ್ ನಾದದ ಜೊತೆ ಕಲರವದ ಝೇಂಕಾರ. ಕಾಮನಬಿಲ್ಲಿನ ರಂಗನ್ನೇ ಮೀರಿಸುವಷ್ಟು ಚಿತ್ತಾರ. ನೋಡಿದಷ್ಟೂ ಮನಸೆಳೆಯುವಷ್ಟು ಮನೋಹರ. ಅಬ್ಬಾ.. ಬಣ್ಣ ಬಣ್ಣದ ಬಳೆ ಧರಿಸಿ ಹೆಣ್ಮಕ್ಕಳದ್ದು ವಯ್ಯಾರವೋ ವಯ್ಯಾರ.

ಆಯ್ಕೆಯಲ್ಲಿ ಕಾಂಪ್ರಮೈಸ್ ಆಗ್ಬೇಕಿಲ್ಲ. ಕಲರ್​ ಸೆಲೆಕ್ಷನ್​ನಲ್ಲಿ ಟೆನ್ಷನ್ ಪಡ್ಬೇಕಾಗಿಲ್ಲ. ಯಾಕಂದ್ರೆ ಡಿಸೈನ್​ನಿಂದ ಹಿಡ್ದು ಇಲ್ಲಿ ಎಲ್ಲವೂ ನಿಮ್ಮ ಮನಸೆಳೆಯೋದ್ರಲ್ಲಿ ಅನುಮಾನ ಇಲ್ಲ. ಎತ್ತ ನೋಡಿದರೂ ಘಲ್ ಘಲ್ ಬಳೆಗಳದ್ದೇ ಸದ್ದು. ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಕಲರ್​ಫುಲ್ ಬಳೆಗಳು ಹೆಣ್ಮಕ್ಕಳನ್ನ ಸೆಳೀತಿವೆ. ಬನಶಂಕರಿ ಜಾತ್ರೆ ಪ್ರಯುಕ್ತ ದೇವಸ್ಥಾನದ ಬಳಿ ನೂರಾರು ಬಳೆಗಳ ಅಂಗಡಿಗಳು ಓಪನ್ ಆಗಿವೆ. ಸಾಲು ಸಾಲಾಗಿ ಜೋಡಿಸಿಟ್ಟ ವೆರೈಟಿ ಕಲರ್ಸ್, ಥರಹೇವಾರಿ ಡಿಸೈನ್ ಬಳೆ ಕಮಾಲ್ ಮಾಡ್ತಿವೆ. ಹೀಗಾಗಿ ಕೈಗೆ ಚೆಂದದ ಬಳೆ ತೊಡಲು ಹೆಣ್ಮಕ್ಕಳು ಮುಗಿ ಬೀಳ್ತಿದ್ದಾರೆ.

ಇನ್ನು ಬನಶಂಕರಿದೇವಿ ಜಾತ್ರೆಯ ಬಳೆಗಳಂದ್ರೆ ಬಾರಿ ಫೇಮಸ್. ಯಾಕಂದ್ರೆ ಯಾವ್ದೇ ಹೊಸ ಡಿಸೈನ್ ಬಳೆ ಬಂದ್ರೂ ಬನಶಂಕರಿ ಜಾತ್ರೆಗೆ ಲಗ್ಗೆ ಇಡುತ್ವೆ. ಹೀಗಾಗೇ ಬಳೆ ಖರೀದಿಸೋಕೆ ಅಂತಾನೇ ದೂರದ ಊರುಗಳಿಂದ ಮಹಿಳೆಯರು ಬರುತ್ತಾರೆ. ಮೊದ್ಲು ಹಸಿರು ಬಳೆಗಳನ್ನು ಖರೀದಿಸಿ ಬನಶಂಕರಿ ದೇವಿಗೆ ಅರ್ಪಣೆ ಮಾಡುತ್ತಾರೆ. ನಂತ್ರ ಪ್ಲೇನ್ ಬಳೆ, ಚುಕ್ಕೆ ಬಳೆ, ಡಿಜೈನ್ ಬಳೆ, ಮುತ್ತಿನ ಬಳೆ, ಹರಳಿನ ಬಳೆ, ಮೆಟಲ್ ಬಳೆ, ಗಾಜಿನ ಬಳೆ ಸೇರಿದಂತೆ ವಿವಿಧ ಬಗೆಯ ಬಳೆಗಳನ್ನ ಕೊಂಡುಕೊಳ್ತಾರೆ. ವ್ಯಾಪಾರಸ್ಥರ ಕೈಗೆ ಕೈಕೊಟ್ಟು ಕೈತುಂಬಾ ಘಲ್ ಘಲ್ ಬಳೆ ತೊಡ್ತಾರೆ. ಇತ್ತ ಮಹಿಳೆಯರ ರೆಸ್ಪಾನ್ಸ್​ಗೆ ವ್ಯಾಪಾರಸ್ಥರು ಫುಲ್ ಹ್ಯಾಪಿ ಆಗಿದ್ದಾರೆ.

ಜಾತ್ರೆ ಅಂದರೆ ಸಂಭ್ರಮ ನಿಜ. ಆದ್ರೆ ಬನಶಂಕರಿ ಜಾತ್ರೆ ಮಾತ್ರ ಎಲ್ಲಾ ಜಾತ್ರೆಗಳಿಗಿಂತ ಕೊಂಚ ಸ್ಪೆಷಲ್ ಆಗಿದೆ. ತಿಂಗಳ ಕಾಲ ನಡೆಯೋ ಈ ಜಾತ್ರೆಯಲ್ಲಿ ಈ ಬಳೆಗಳದ್ದೂ ದರ್ಬಾರ್ ಜೋರಾಗಿರುತ್ತೆ.






Published On - 6:57 am, Thu, 16 January 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us