3 ತಿಂಗಳಿನಿಂದ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗದ ರೇಷನ್​​: ಅರೆಹೊಟ್ಟೆಯಲ್ಲಿರುವ ಮಕ್ಕಳು

| Updated By: ವಿವೇಕ ಬಿರಾದಾರ

Updated on: Oct 14, 2024 | 1:36 PM

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿರುದ್ಧ ಒಂದಲ್ಲ ಒಂದು ಆರೋಪ ಕೇಳಿ ಬರುತ್ತಲೇ ಇರುತ್ತದೆ. ಇದೀಗ ಬಾಗಲಕೋಟೆ ಜಿಲ್ಲೆಯ ಹುನಗುಂದ ಮತ್ತು ಇಳಕಲ್ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕಳೆದ ಮೂರು ತಿಂಗಳಿನಿಂದ ರೇಷನ್​ ಸರಬರಾಜು ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.

3 ತಿಂಗಳಿನಿಂದ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗದ ರೇಷನ್​​: ಅರೆಹೊಟ್ಟೆಯಲ್ಲಿರುವ ಮಕ್ಕಳು
3 ತಿಂಗಳಿನಿಂದ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗದ ರೇಷನ್
Follow us on

ಬಾಗಲಕೋಟೆ, ಅಕ್ಟೋಬರ್​ 14: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ (Department of Women and Child Development) ಹುನಗುಂದ (Hunagund) ಮತ್ತು ಇಳಕಲ್ (Ilakal) ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕಳೆದ ಮೂರು ತಿಂಗಳಿನಿಂದ ರೇಷನ್​ ಸರಬರಾಜು ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಅಂಗನವಾಡಿ ಮಕ್ಕಳು ನಿತ್ಯ ಅರ್ಧಂಬರ್ಧ ಊಟ ಮಾಡುತ್ತಿವೆ. ಅಂಗನವಾಡಿಗಳಿಂದ ತಮಗೆ ಬರಬೇಕಿದ್ದ ಸಮರ್ಪಕ ಪೌಷ್ಟಿಕ ಆಹಾರ ಬಾರದೆ ಗರ್ಭಿಣಿಯರು ನೊಂದಿದ್ದಾರೆ.

ಹುನಗುಂದ, ಇಳಕಲ್ ವ್ಯಾಪ್ತಿಯಲ್ಲಿ ಒಟ್ಟು 422 ಅಂಗನವಾಡಿ ಕೇಂದ್ರಗಳಿವೆ. ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಇದೇ ಹಣೆಬರಹವಾಗಿದೆ. ಮೂರು ತಿಂಗಳ ಹಿಂದೆ ಸರಬರಾಜು ಆಗಿದ್ದ ರೇಷನ್​ನಲ್ಲೇ ಅಂಗನವಾಡಿ ಸಿಬ್ಬಂದಿ ಅಡುಗೆ ತಯಾರಿಸಿ ಮಕ್ಕಳಿಗೆ ಮಿತವಾಗಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಹೊಟೇಲ್​ಗಳಲ್ಲಿ ಅಂಗನವಾಡಿ ಮಸಾಲೆ ಪಾಕೆಟ್​ಗಳು ಬಳಕೆ, ಕ್ರಮಕ್ಕೆ ಸ್ಥಳೀಯರ ಆಗ್ರಹ

ಜುಲೈ, ಅಗಷ್ಟ್, ಸೆಪ್ಟೆಂಬರ್ ತಿಂಗಳ ರೇಷನ್​​ ಅಂಗನವಾಡಿ ಕೇಂದ್ರಗಳಿಗೆ ತಲುಪಿಲ್ಲ. ರೇಷನ್​ ಸರಬರಾಜು ಆಗದೆ ಇರುವುದನ್ನು ಹುನಗುಂದ ಸಿಡಿಪಿಒ ಒಪ್ಪಿಕೊಂಡಿದ್ದಾರೆ. ಮೂರು ತಿಂಗಳ ಎಮ್​ಎಸ್​​ಪಿಟಿಸಿ (ಮಹಿಳಾ ಸೆಪ್ಲಿಮೆಂಟರಿ ನ್ಯೂಟ್ರಿಷನ್ ಪ್ರೌಡಕ್ಟ್ ಸೆಂಟರ್)ನಲ್ಲೇ ಕೊಳೆಯುತ್ತಿದೆ.

ಎಮ್​ಎಸ್​ಪಿಟಿಸಿನಿಂದ ಎಲ್ಲ ಅಂಗನವಾಡಿಗೆ ರೇಷನ್ ಸಾಗಿಸಬೇಕು. ಆದರೆ ಯಾವ ಕಾರಣಕ್ಕೆ ಹಂಚಿಕೆಯಾಗಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಮಾತ್ರ ಉತ್ತರ ಇಲ್ಲ. ಮಹಿಳಾ‌ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನ್ಯೂನ್ಯತೆ ನಡುವೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವತಿಯಿಂದ ಪೋಷಣ್​ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ