ಕೊಪ್ಪಳ: ಹೊಟೇಲ್​ಗಳಲ್ಲಿ ಅಂಗನವಾಡಿ ಮಸಾಲೆ ಪಾಕೆಟ್​ಗಳು ಬಳಕೆ, ಕ್ರಮಕ್ಕೆ ಸ್ಥಳೀಯರ ಆಗ್ರಹ

ಕೊಪ್ಪಳದ ಕಾರಟಗಿ ಪಟ್ಟಣದ ಹೋಟೆಲ್‌ನಲ್ಲಿ ಅಂಗನವಾಡಿಗೆ ಸೇರಿದ ಮಸಾಲೆ ಪಾಕೆಟ್ ಪ್ರತ್ಯಕ್ಷವಾಗಿವೆ. ಅಂಗನವಾಡಿ ಫಲಾನುಭವಿಗಳು ಬಳಕೆ ಮಾಡಬೇಕಿದ್ದ ಮಸಾಲೆ ಪಾಕೆಟ್​ಗಳು ಹೊಟೇಲ್ ನಲ್ಲಿ ಬಳಕೆಯಾಗುತ್ತಿವೆ. ಇದು ಗೊತ್ತಿದ್ದರು ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲಾ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಕೊಪ್ಪಳ: ಹೊಟೇಲ್​ಗಳಲ್ಲಿ ಅಂಗನವಾಡಿ ಮಸಾಲೆ ಪಾಕೆಟ್​ಗಳು ಬಳಕೆ, ಕ್ರಮಕ್ಕೆ ಸ್ಥಳೀಯರ ಆಗ್ರಹ
ಹೊಟೇಲ್​ಗಳಲ್ಲಿ ಅಂಗನವಾಡಿ ಮಸಾಲೆ ಪಾಕೆಟ್​ಗಳು ಪತ್ತೆ
Follow us
| Updated By: ಆಯೇಷಾ ಬಾನು

Updated on: Oct 03, 2024 | 1:52 PM

ಕೊಪ್ಪಳ, ಅ.03: ಕೆಲ ದಿನಗಳ ಹಿಂದಷ್ಟೇ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡುರು ಗ್ರಾಮದಲ್ಲಿ ಅಂಗನವಾಡಿ ಮಕ್ಕಳಿಗೆ ನೀಡಬೇಕಾದ ಮೊಟ್ಟೆಗಳನ್ನು ಮಕ್ಕಳಿಗೆ ನೀಡಿ ಕಸಿದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೇ ಕಾರಟಗಿ ತಾಲೂಕಿನಲ್ಲಿ ಇದೀಗ ಅಂಗನವಾಡಿಯ ಮಸಾಲೆ ಪಾಕೆಟ್​ಗಳು ಹೋಟೆಲ್ ವೊಂದರಲ್ಲಿ ಪತ್ತೆಯಾಗಿದ್ದು, ತಾಲೂಕಿನಲ್ಲಿ ಕಾಳಸಂತೆಯಲ್ಲಿ ಅಂಗನವಾಡಿ ಆಹಾರ ಪದಾರ್ಥಗಳು (Anganwadi Food) ಮಾರಾಟ ವಾಗ್ತಿರೋ ಶಂಕೆಗೆ ಪುಷ್ಟಿ ನೀಡುತ್ತಿವೆ.

ಕಾರಟಗಿ ಪಟ್ಟಣದ ಹೋಟೆಲ್‌ನಲ್ಲಿ ಅಂಗನವಾಡಿಗೆ ಸೇರಿದ ಮಸಾಲೆ ಪಾಕೆಟ್ ಪ್ರತ್ಯಕ್ಷವಾಗಿವೆ. ಮಾತೃಪೂರ್ಣ ಯೋಜನೆಯಡಿ ಬಾಣಂತಿಯರು, ಗರ್ಭಿಣಿಯರು, ಮಕ್ಕಳಿಗೆ ವಿತರಿಸಿದ ಸಾಂಬಾರ್ ಪೌಡರ್ ಸೇರಿದಂತೆ ಅನೇಕ ಮಸಾಲೆ ಪಾಕೆಟ್​ಗಳು ಹೋಟೆಲ್ ನಲ್ಲಿ ಕಂಡುಬಂದಿವೆ. ಅಂಗನವಾಡಿ ಫಲಾನುಭವಿಗಳು ಬಳಕೆ ಮಾಡಬೇಕಿದ್ದ ಮಸಾಲೆ ಪಾಕೆಟ್​ಗಳು ಹೊಟೇಲ್ ನಲ್ಲಿ ಬಳಕೆಯಾಗುತ್ತಿವೆ.

ಇದನ್ನೂ ಓದಿ: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಕಷ್ಟ; ಇತ್ತ ಸಂಬಳವೂ ಇಲ್ಲ, ಮೊಟ್ಟೆ, ತರಕಾರಿಗೂ ಸ್ವಂತ ಹಣ ಹಾಕಿ ಕಂಗಾಲು

ಅಧಿಕಾರಿಗಳ ನಿರ್ಲಕ್ಷ್ಯದಿಂದ‌ ಹೊಟೇಲ್ ನಲ್ಲಿ ಮಸಾಲೆ ಪಾಕೆಟ್ ಬಳಕೆ ಆಗುವಂತಾಗಿದೆ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಟೇಲ್ ಗಳಲ್ಲಿ ತಯಾರಿಸುವ ತಿಂಡಿಗಳಿಗೆ ಅಂಗನವಾಡಿ ಮಸಾಲೆ ಬಳಕೆಯಾಗುತ್ತಿದೆ. ತಾಲೂಕಿನಲ್ಲಿ ಕಾಳ ಸಂತೆಯಲ್ಲಿ ಆಹಾರ ಧಾನ್ಯಗಳು, ಮಸಾಲೆ ಪಾಕೆಟ್ ಗಳು ಮಾರಟವಾಗುತ್ತಿವೆ. ಇದು ಗೊತ್ತಿದ್ದರು ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲಾ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ