Sign In

By signing in or creating an account, you agree with Associated Broadcasting Company's Terms & Conditions and Privacy Policy.

Serial theft: ತುಳಸಿಗೇರಿ ಗ್ರಾಮದ 7 ಮನೆಗಳಲ್ಲಿ ಸರಣಿ ಕಳ್ಳತನ; ನಗದು, ಚಿನ್ನಾಭರಣ, ಬೆಳ್ಳಿ ವಸ್ತುಗಳ ದೋಚಿ ಪರಾರಿ

Series theft: ರಾತ್ರಿ ಮನೆಗಳ ಕೀಲಿ ಮುರಿದು ಒಳ ನುಗ್ಗಿ ಮನೆಯಲ್ಲಿರುವ ತಿಜೋರಿ ದೋಚಿ ಪರಾರಿಯಾಗಿದ್ದಾರೆ. ಅಲ್ಲದೇ ಕೆಲ ಬಟ್ಟೆಗಳನ್ನು ಮನೆಯ ಬಳಿ ಎಸೆದು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಲಾದಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Serial theft: ತುಳಸಿಗೇರಿ ಗ್ರಾಮದ 7 ಮನೆಗಳಲ್ಲಿ ಸರಣಿ ಕಳ್ಳತನ; ನಗದು, ಚಿನ್ನಾಭರಣ, ಬೆಳ್ಳಿ ವಸ್ತುಗಳ ದೋಚಿ ಪರಾರಿ
ಮನೆಯಿಂದ ಹೊರಗೆ ಮತ್ತು ಒಳಗೆ ಎಸೆದಿರುವ ಬಟ್ಟೆಗಳು
Follow us
sandhya thejappa
|

Updated on:Feb 15, 2021 | 3:14 PM

ಬಾಗಲಕೋಟೆ: ತುಳಸಿಗೇರಿ ಗ್ರಾಮದ 7 ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ನಗದು, ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ. ನಿಂಗಪ್ಪ ದಿವಟಗಿ, ಹನುಮಂತಪ್ಪ ಸೊಕನಾದಗಿ, ಸೋಮವ್ವ, ಗೋವಿಂದಪ್ಪ ದಾಸರ, ಜಯದೇವ ಎಂಬುವವರ ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳಲ್ಲಿ ಕಳ್ಳತನ ನಡೆದಿದೆ. ಸ್ಥಳಕ್ಕೆ ಕಲಾದಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಡರಾತ್ರಿ ಮನೆಗಳ ಕೀಲಿ ಮುರಿದು ಒಳಗೆ ನುಗ್ಗಿ ಮನೆಯಲ್ಲಿರುವ ತಿಜೋರಿ ದೋಚಿ ಪರಾರಿಯಾಗಿದ್ದಾರೆ. ಅಲ್ಲದೇ ಕೆಲ ಬಟ್ಟೆಗಳನ್ನು ಮನೆಯ ಬಳಿ ಎಸೆದು ಹೋಗಿದ್ದಾರೆ ಎಂದು ತಿಳಿದುಬಂದಿದೆ. ನಿಂಗಪ್ಪ ದಿವಟಗಿ ಎಂಬುವರ ಮನೆಯಲ್ಲಿದ್ದ 17 ಸಾವಿರ ರೂ, ಒಂದು ಬೆಳ್ಳಿ ಆರತಿ ತಟ್ಟೆ ಕಳ್ಳತನವಾಗಿದೆ.

ಜಯದೇವ ಎಂಬುವರ ಮನೆಯಲ್ಲಿ ಸುಮಾರು 25 ಸಾವಿರ ರೂ. ಮತ್ತು ಮೂರು ತೊಲೆ ಬೆಳ್ಳಿ ಆಭರಣ ಕಳ್ಳತನವಾಗಿದ್ದು, ಇತರೆ ಮನೆಗಳಲ್ಲಿ ಹಣ ಆಭರಣ ದೋಚಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹುಲ್ಲಿನ ಗೊಣಬೆ ಹತ್ತಿರ ಎಸೆದಿರುವ ಕೆಲವು ಚೀಟಿಗಳು

ವಸ್ತುಗಳನ್ನು ಎಸೆದಿರುವುದು

ಇದನ್ನೂ ಓದಿ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ರೈತರ ಆತ್ಮಹತ್ಯೆ

Published On - 11:39 am, Mon, 15 February 21