ಬಾಗಲಕೋಟೆ: ಇಂದು ಬಾದಾಮಿ ಪ್ರವಾಸದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬಾದಾಮಿ (Badami) ತಾಲೂಕಿನ ಮುತ್ತಲಗೇರಿಯಲ್ಲಿ ಸರ್ಕಾರಿ ಪ್ರೌಢ ಶಾಲಾ ಕಟ್ಟಡದ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಸಿದ್ದರಾಮಯ್ಯ ಎಡವಟ್ಟೊಂದು ಮಾಡಿದ್ದಾರೆ. ಭೂಮಿ ಪೂಜೆ ಮಾಡುವಾಗ ಕಾಲಿನಲ್ಲಿದ್ದ ಶೂ (Shoe) ತೆಗೆದಿಲ್ಲ. ಶೂ ಧರಿಸಿಯೇ ಭೂಮಿ ಪೂಜೆ ಮಾಡಿದ್ದಾರೆ. ಸಿದ್ಧರಾಮಯ್ಯ ಬೆಂಬಲಿಗರು ಕೂಡಾ ಶೂ ಧರಿಸಿಯೇ ಭೂಮಿ ಪೂಜೆ ನೆರವೇರಿಸಿದ್ದಾರೆ.
ಸಿದ್ಧರಾಮಯ್ಯನವರಿಗೆ ವಿದ್ಯಾರ್ಥಿಗಳು ಹೂವಿನ ಸುರಿಮಳೆ ಸುರಿಸಿ ಸ್ವಾಗತ ಕೋರಿದರು. ಈ ವೇಳೆ ಸಿದ್ದು ಮಕ್ಕಳತ್ತ ಹಸನ್ಮುಖದಿಂದ ಕೈ ಬೀಸಿದರು.
ಬಾದಾಮಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಿಂದ ಜನರ ಸಮಸ್ಯೆ ಬಗೆಹರಿಯಲ್ಲ. ಉಸ್ತುವಾರಿ ಸಚಿವರಾಗಿದ್ದವರು ಅವರ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಜಿಲ್ಲಾ ಉಸ್ತುವಾರಿಗಳ ಮಾತನ್ನು ಯಾರೂ ಕೇಳುವುದಿಲ್ಲ. ಯಾಕಂದ್ರೆ ಇವರು ಕಮಿಷನ್ ಮೇಲೆ ನಿಂತುಬಿಟ್ಟಿದ್ದಾರೆ. ಹೀಗಾಗಿ ಉಸ್ತುವಾರಿಗಳ ಮಾತನ್ನು ಯಾರೂ ಕೇಳೋದಿಲ್ಲ ಅಂತ ಹೇಳಿದರು.
ಬಾದಾಮಿಯಿಂದ ಸ್ಪರ್ಧಿಸಲು ಬೆಂಬಲಿಗರು ಒತ್ತಾಯಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಗೆ ಇನ್ನೂ ಒಂದು ಕಾಲು ವರ್ಷ ಇದೆ, ನೋಡೋಣ. ನಾನು ಈಗಲೇ ಏನೂ ಹೇಳಲಾಗಲ್ಲ. 5-6 ಕಡೆ ಚುನಾವಣೆಗೆ ನಿಲ್ಲುವಂತೆ ನನ್ನನ್ನ ಕರೆಯುತ್ತಿದ್ದಾರೆ. ಅವರನ್ನೆಲ್ಲ ಕೇಳಿ ಚುನಾವಣೆ ಹತ್ತಿರ ಬಂದಾಗ ಹೇಳುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಯಾವಾಗಲೂ ಚುನಾವಣೆ ಎದುರಿಸಲು ಸಿದ್ಧ. ಜಿಲ್ಲಾ, ತಾಲೂಕು ಪಂಚಾಯಿತಿ, ವಿಧಾನಸಭೆ ಚುನಾವಣೆಗೂ ರೆಡಿ ಇದ್ದೀವಿ. ಪಕ್ಷ, ಕಾರ್ಯಕರ್ತರು ಚುನಾವಣೆ ಎದುರಿಸಲು ತಯಾರಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ರೂಮಾಲು ಕಿತ್ತೆಸೆದ ಸಿದ್ದರಾಮಯ್ಯ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಾತರಕಿಯಲ್ಲಿ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ವೇಳೆ ವ್ಯಕ್ತಿಯೊಬ್ಬರು ರೂಮಾಲು ತೊಡಿಸಲು ಬಂದರು. ಸಿಟ್ಟಿನಿಂದ ಅರ್ಧ ತೊಡಿಸಿದ್ದ ರೂಮಾಲನ್ನು ಸಿದ್ದರಾಮಯ್ಯ ಕಿತ್ತೆಸೆದಿದ್ದಾರೆ. ಬೇಡ ಅಂದ್ರೂ ರೂಮಾಲು ಸುತ್ತಲು ಬಂದಾಗ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ.
ಇದನ್ನೂ ಓದಿ
‘ಆರ್ಆರ್ಆರ್’ ನಿರ್ಮಾಪಕನ ಖಾತೆಯಿಂದ ಪ್ರಭಾಸ್ಗೆ ವರ್ಗಾವಣೆ ಆಯ್ತು 50 ಕೋಟಿ ರೂಪಾಯಿ?
ತಡರಾತ್ರಿ 2ಗಂಟೆಗೆ ವ್ಯಾಯಾಮ ಮಾಡುತ್ತಿದ್ದ ಮಗನನ್ನು ತಡೆದ ತಾಯಿ; ಮರುಕ್ಷಣವೇ ಆಕೆಯನ್ನು ಹೊಡೆದು ಕೊಂದ ಪುತ್ರ
Published On - 11:59 am, Tue, 25 January 22