ಕನಕಪುರ ಬಂಡೆಯ ಅರ್ಥ ತಿಳಿಸಿದ ಬೆಳಗಾವಿಯ ಜೈನ ಮುನಿಗಳು.. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಅಂದ್ರು!

| Updated By: ganapathi bhat

Updated on: Apr 05, 2022 | 1:06 PM

ಬೆಳಗಾವಿಯಲ್ಲಿ ನಿನ್ನೆ (ಮಾರ್ಚ್ 28) ಜೈನ ಮುನಿಗಳನ್ನು ಭೇಟಿಯಾಗಿದ್ದ ಕಾಂಗ್ರೆಸ್ ನಾಯಕನಿಗೆ, ನೀವು ಸಿಎಂ ಆಗ್ತೀರಿ ಎಂದು ಹಲಗಾ ಗ್ರಾಮದ ಬಾಲಾಲ ಆಚಾರ್ಯ ಸಿದ್ಧಸೇನಾ ಮುನಿಗಳು ಆಶೀರ್ವಚನ ಹೇಳಿದ್ದಾರೆ.

ಕನಕಪುರ ಬಂಡೆಯ ಅರ್ಥ ತಿಳಿಸಿದ ಬೆಳಗಾವಿಯ ಜೈನ ಮುನಿಗಳು.. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಅಂದ್ರು!
ಡಿಕೆಶಿ ಜೈನ ಮುನಿಗಳ ಆಶೀರ್ವಾದ ಪಡೆದರು
Follow us on

ಬೆಳಗಾವಿ: ಡಿ.ಕೆ. ಶಿವಕುಮಾರ್ ಅವರನ್ನು ಕನಕಪುರ ಬಂಡೆ ಎಂದು ಕರೆಯುತ್ತಾರೆ. ಬಂಡೆ ಅಂದ್ರೇನು? ಬಂಡೆ ಅಂದರೆ ಕಲ್ಲು. ಕಲ್ಲನ್ನು ಕಟೆದು ಕಟೆದು ಮೂರ್ತಿ ಮಾಡಲಾಗುತ್ತದೆ. ಹಾಗೆಯೇ ನೀವೂ ಕೂಡ. ವಿರೋಧಿಗಳು ಇದ್ದಷ್ಟೂ ನೀವು ಮೂರ್ತಿ ಆಗ್ತೀರಿ. ವಿರೋಧಿಗಳು ಹೆಚ್ಚಾದಂತೆ ನೀವು ಬೆಳೆಯುತ್ತೀರಿ. ಮುಖ್ಯಮಂತ್ರಿ ಆಗುತ್ತೀರಿ ಎಂದು ಜೈನ ಮುನಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಆಶೀರ್ವಾದ ಮಾಡಿದ್ದಾರೆ.

ಬೆಳಗಾವಿಯಲ್ಲಿ ನಿನ್ನೆ (ಮಾರ್ಚ್ 28) ಜೈನ ಮುನಿಗಳನ್ನು ಭೇಟಿಯಾಗಿದ್ದ ಕಾಂಗ್ರೆಸ್ ನಾಯಕನಿಗೆ, ನೀವು ಸಿಎಂ ಆಗ್ತೀರಿ ಎಂದು ಹಲಗಾ ಗ್ರಾಮದ ಬಾಲಾಲ ಆಚಾರ್ಯ ಸಿದ್ಧಸೇನಾ ಮುನಿಗಳು ಆಶೀರ್ವಚನ ಹೇಳಿದ್ದಾರೆ. ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶಿವಕುಮಾರ್ ಬೆಳಗಾವಿಗೆ ತೆರಳಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಚುನಾವಣೆಯ ಸಿದ್ದತೆಯಲ್ಲಿ ತೊಡಗಿಕೊಂಡಿದ್ದಾರೆ.

ನನಗೆ ಎಲ್ಲಾ ಧರ್ಮದಲ್ಲಿಯೂ ನಂಬಿಕೆ ಇದೆ
ನನಗೆ ಎಲ್ಲಾ ಧರ್ಮದಲ್ಲಿಯೂ ನಂಬಿಕೆ ಇದೆ. ಜೈನ ಧರ್ಮಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಬಹಳ ನಂಟಿದೆ. ಹಸ್ತದ ಗುರುತು ಜೈನ ಧರ್ಮದ ಗುರುಗಳು ನೀಡಿದ್ದರು. ಜೈನ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಯುಪಿಎ ಸಮಯದಲ್ಲಿ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆಗೋದು ಮುಖ್ಯ ಅಲ್ಲ. ನನಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಮುಖ್ಯ. ನಮ್ಮ ಪಕ್ಷಕ್ಕೆ ಅವರ ಆಶೀರ್ವಾದ ಮುಖ್ಯ, ಪಡೆದಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಜೈನ ಮುನಿಗಳ ಆಶೀರ್ವಾದ ಪಡೆದು ಬಂದು ಮಾತನಾಡಿದ್ದಾರೆ.

Posted by Indian National Congress – Karnataka on Sunday, March 28, 2021

ಜೊತೆಗೆ, ಬೆಳಗಾವಿ ನಗರದ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್‌ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಾಥ್ ನೀಡಿದ್ದಾರೆ. ಎಲ್ಲ ವಿಘ್ನಗಳನ್ನು ನಿವಾರಣೆ ಮಾಡುವ ದೇವರು ವಿನಾಯಕ. ರಾಜ್ಯ, ರಾಷ್ಟ್ರದಲ್ಲಿ ವಿಘ್ನ ನಿವಾರಣೆಯಾಗಲಿ ಅಂತಾ ಪೂಜೆ ಮಾಡಿದ್ದೇವೆ. ನಮ್ಮ ಅಭ್ಯರ್ಥಿ ಗೆಲ್ಲಲಿ ಅಂತಾ ಪೂಜೆ ಮಾಡಿದ್ದೇವೆ. ವಿಜಯಕ್ಕೆ ನಾಯಕ ವಿನಾಯಕ ಅಂಥ ದೇವರಿಗೆ ಪೂಜೆ ಸಲ್ಲಿಸಿದ್ದೇನೆ.

ಬೆಲೆ ಏರಿಕೆಯಾಗಿ ರಾಜ್ಯದಲ್ಲಿ ಜನರಿಗೆ ದೊಡ್ಡ ತೊಂದರೆಯಾಗಿದೆ. ಎಲ್ಲ ವರ್ಗದ ಜನರು ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟ ನಿವಾರಣೆಯಾಗಬೇಕಿದೆ. ಅದನ್ನೇ ದೇವರಲ್ಲಿ ಪ್ರಾರ್ಥಿಸಿಕೊಂಡಿರುವೆ. ಉಪ ಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಿಗಲಿ ಅಂತಾ ಪ್ರಾರ್ಥಿಸಿದ್ದೇನೆ. ದೇಶದಲ್ಲಿ ಮಾಧ್ಯಮ ಮತ್ತು ಪ್ರಜಾಪ್ರಭುತ್ವ ಎರಡೂ ಉಳಿಯಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ, ಮಸ್ಕಿ ಕಡೆಗೆ ಪ್ರಚಾರಕ್ಕೆ ತೆರಳಿದ ಕಾಂಗ್ರೆಸ್ ದಂಡು

Published On - 4:16 pm, Mon, 29 March 21