ಜಿಂದಾಲ್ ಕಂಪನಿಯಲ್ಲಿ ನಾಪತ್ತೆಯಾಗಿದ್ದವ ಕಲ್ಲಿದ್ದಲ್ಲಿನಲ್ಲೇ ಕರಗಿ ಹೋದ
ಬಳ್ಳಾರಿ: ಜಿಂದಾಲ್ ಕಂಪನಿಯಲ್ಲಿ ಇದೇ ತಿಂಗಳ ಐದರಂದು ಸಿಬ್ಬಂದಿಯೊಬ್ರು ಕಣ್ಮರೆಯಾಗಿದ್ರು. ಅವ್ರ ಕುಟುಂಬಸ್ಥರು ಸಂಸ್ಥೆ ಎದುರು ದೊಡ್ಡ ಗಲಾಟೆ ಮಾಡಿದ್ರು. ಸಚಿವ ಶ್ರೀರಾಮುಲು ಕೂಡ ಸ್ಥಳಕ್ಕೆ ದೌಡಾಯಿಸಿ, ವ್ಯಕ್ತಿ ಹುಡುಕಾಟದ ಭರವಸೆ ಕೊಟ್ಟಿದ್ರು. ಅದ್ರೀಗ, ಕುಟುಂಬಸ್ಥರಿಗೆ ಆಘಾತವಾಗಿದೆ. ಯಾಕಂದ್ರೆ ನಾಪತ್ತೆಯಾಗಿದ್ದಾತ ಗುರುತೇ ಸಿಗದಂತೆ ಅಳಿಸಿಹೋಗಿದ್ದಾನೆ. ಜಿಂದಾಲ್ ಕಂಪನಿಯಲ್ಲಿ ನಾಪತ್ತೆಯಾಗಿದ್ದವ ಭಸ್ಮ: ಹೌದು.. ಬಳ್ಳಾರಿಯ ದೇವಿನಗರ ನಿವಾಸಿ ದುರ್ಗಣ್ಣ ಜಿಂದಾಲ್ನಲ್ಲಿ 13 ವರ್ಷದಿಂದ ಕೆಲಸ ಮಾಡ್ತಿದ್ರು. ಆದ್ರೆ, ಇದೇ ತಿಂಗಳ ಐದರಂದು, ನೈಟ್ ಶಿಫ್ಟ್ಗೆ ಅಂತ ಕೆಲಸಕ್ಕೆ ಹೋದವ್ರು […]
ಬಳ್ಳಾರಿ: ಜಿಂದಾಲ್ ಕಂಪನಿಯಲ್ಲಿ ಇದೇ ತಿಂಗಳ ಐದರಂದು ಸಿಬ್ಬಂದಿಯೊಬ್ರು ಕಣ್ಮರೆಯಾಗಿದ್ರು. ಅವ್ರ ಕುಟುಂಬಸ್ಥರು ಸಂಸ್ಥೆ ಎದುರು ದೊಡ್ಡ ಗಲಾಟೆ ಮಾಡಿದ್ರು. ಸಚಿವ ಶ್ರೀರಾಮುಲು ಕೂಡ ಸ್ಥಳಕ್ಕೆ ದೌಡಾಯಿಸಿ, ವ್ಯಕ್ತಿ ಹುಡುಕಾಟದ ಭರವಸೆ ಕೊಟ್ಟಿದ್ರು. ಅದ್ರೀಗ, ಕುಟುಂಬಸ್ಥರಿಗೆ ಆಘಾತವಾಗಿದೆ. ಯಾಕಂದ್ರೆ ನಾಪತ್ತೆಯಾಗಿದ್ದಾತ ಗುರುತೇ ಸಿಗದಂತೆ ಅಳಿಸಿಹೋಗಿದ್ದಾನೆ.
ಜಿಂದಾಲ್ ಕಂಪನಿಯಲ್ಲಿ ನಾಪತ್ತೆಯಾಗಿದ್ದವ ಭಸ್ಮ: ಹೌದು.. ಬಳ್ಳಾರಿಯ ದೇವಿನಗರ ನಿವಾಸಿ ದುರ್ಗಣ್ಣ ಜಿಂದಾಲ್ನಲ್ಲಿ 13 ವರ್ಷದಿಂದ ಕೆಲಸ ಮಾಡ್ತಿದ್ರು. ಆದ್ರೆ, ಇದೇ ತಿಂಗಳ ಐದರಂದು, ನೈಟ್ ಶಿಫ್ಟ್ಗೆ ಅಂತ ಕೆಲಸಕ್ಕೆ ಹೋದವ್ರು ಕಣ್ಮರೆಯಾಗಿದ್ರು. ಬಳಿಕ ಸಂಸ್ಥೆ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ರು. ಸಚಿವ ಶ್ರೀರಾಮುಲು ಕೂಡ ದುರ್ಗಣ್ಣನ ಪತ್ತೆ ಹಚ್ಚೋ ಭರವಸೆ ಕೊಟ್ಟಿದ್ರು. ಆದ್ರೀಗ, ದುರ್ಗಣ್ಣ ಮೃತಪಟ್ಟಿರುವ ಆಘಾತಕಾರಿ ವಿಷ್ಯ ಗೊತ್ತಾಗಿದೆ. ಅದು, ಕಂಪನಿಯ ಕೋಕ್ ಯುನಿಟ್ನಲ್ಲಿ.
ಕಂಪನಿಯ ಕೋಕ್ ಯುನಿಟ್ ಭಾರಿ ಪ್ರಮಾಣದ ಉಷ್ಣಾಂಶ ಇರುತ್ತೆ. ಆದ್ರೆ ಮುಂಜಾಗೃತ ಕ್ರಮವಿಲ್ಲದ ಕೋಕ್ ಯುನಿಟ್ನಲ್ಲಿ ದುರ್ಗಣ್ಣ ಬಿದ್ದಿದ್ದು, ಬೂದಿಯಾಗಿದ್ದಾನೆ. ಪೊಲೀಸರ ಪರಿಶೀಲನೆಯಲ್ಲಿ ಈ ಸಂಬಂಧ ಕೆಲ ಕುರುಹು ಪತ್ತೆಯಾಗಿದೆ. ಇದೀಗ, ಕುಟುಂಬಸ್ಥರು ಕಣ್ಣೀರು ಹಾಕ್ತಿದ್ಧಾರೆ.
ದುರ್ಗಣ್ಣ ಸಾವಿನ ಬೆನ್ನಿಗೆ ಕಂಪನಿಯಲ್ಲಿರೋ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಉದ್ಭವವಾಗಿದೆ. ಪೊಲೀಸರು ಕೂಡ ಈ ಕುರಿತು ತನಿಖೆ ನಡೆಸುತ್ತಿದ್ದು, ಕಂಪನಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ.