AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ಭಾಗದಲ್ಲಿ ಮಾತೃಭಾಷೆಗೆ ಅಧೋಗತಿ, ಆಂಧ್ರದ ಆಂಗ್ಲ ಪ್ರೀತಿಯಿಂದ ಕನ್ನಡಕ್ಕೆ ಫಜೀತಿ

ಬಳ್ಳಾರಿ: ಆ ಹಳ್ಳಿಗಳು ಆಂಧ್ರದಲ್ಲಿದ್ರೂ ಅಲ್ಲಿ ಕನ್ನಡದ ಬಗ್ಗೆ ಪ್ರೀತಿ ಇದೆ. ಆದ್ರೆ ಅಲ್ಲಿಯ ಕನ್ನಡ ಮಾಧ್ಯಮ ಶಾಲೆಗಳನ್ನ ಮುಚ್ಚಲು ಜಗನ್‌ ಸರ್ಕಾರ ಮುಂದಾಗಿದೆ. ಆಂಧ್ರ ಸರ್ಕಾರದ ಅದೊಂದು ಹೆಜ್ಜೆ ಕನ್ನಡ ಮಕ್ಕಳಿಗೆ ಶಾಕ್‌ ನೀಡಿದೆ. ಕನ್ನಡ ಬೆಳಸಿ.. ಕನ್ನಡ ಉಳಿಸಿ.. ಹೀಗೆ ಕನ್ನಡದ ಬಗ್ಗೆ ಕನ್ನಡಿಗರು, ಕರ್ನಾಟಕ ಸರ್ಕಾರ ಘೋಷಣೆ ಕೂಗುತ್ತಾ ಇದ್ರೆ ಅತ್ತ ಬೆಳಗಾವಿಯಲ್ಲಿ ಮಹಾರಾಷ್ಟ್ರದವರು ಕಾಲು ಕೆದರುತ್ತಿದ್ದಾರೆ. ಮರಾಠಿಗರ ಕಿರಿಕ್‌ ಜತೆಗೆ ಈಗ ಆಂಧ್ರದಿಂದಲೂ ರಾಜ್ಯಕ್ಕೆ ಶಾಕ್‌ ಎದುರಾಗಿದೆ. ಗಡಿಭಾಗದ ಕನ್ನಡ ಶಾಲೆಗಳಿಗೆ […]

ಗಡಿ ಭಾಗದಲ್ಲಿ ಮಾತೃಭಾಷೆಗೆ ಅಧೋಗತಿ, ಆಂಧ್ರದ ಆಂಗ್ಲ ಪ್ರೀತಿಯಿಂದ ಕನ್ನಡಕ್ಕೆ ಫಜೀತಿ
ಸಾಧು ಶ್ರೀನಾಥ್​
|

Updated on:Jan 27, 2020 | 3:11 PM

Share

ಬಳ್ಳಾರಿ: ಆ ಹಳ್ಳಿಗಳು ಆಂಧ್ರದಲ್ಲಿದ್ರೂ ಅಲ್ಲಿ ಕನ್ನಡದ ಬಗ್ಗೆ ಪ್ರೀತಿ ಇದೆ. ಆದ್ರೆ ಅಲ್ಲಿಯ ಕನ್ನಡ ಮಾಧ್ಯಮ ಶಾಲೆಗಳನ್ನ ಮುಚ್ಚಲು ಜಗನ್‌ ಸರ್ಕಾರ ಮುಂದಾಗಿದೆ. ಆಂಧ್ರ ಸರ್ಕಾರದ ಅದೊಂದು ಹೆಜ್ಜೆ ಕನ್ನಡ ಮಕ್ಕಳಿಗೆ ಶಾಕ್‌ ನೀಡಿದೆ.

ಕನ್ನಡ ಬೆಳಸಿ.. ಕನ್ನಡ ಉಳಿಸಿ.. ಹೀಗೆ ಕನ್ನಡದ ಬಗ್ಗೆ ಕನ್ನಡಿಗರು, ಕರ್ನಾಟಕ ಸರ್ಕಾರ ಘೋಷಣೆ ಕೂಗುತ್ತಾ ಇದ್ರೆ ಅತ್ತ ಬೆಳಗಾವಿಯಲ್ಲಿ ಮಹಾರಾಷ್ಟ್ರದವರು ಕಾಲು ಕೆದರುತ್ತಿದ್ದಾರೆ. ಮರಾಠಿಗರ ಕಿರಿಕ್‌ ಜತೆಗೆ ಈಗ ಆಂಧ್ರದಿಂದಲೂ ರಾಜ್ಯಕ್ಕೆ ಶಾಕ್‌ ಎದುರಾಗಿದೆ. ಗಡಿಭಾಗದ ಕನ್ನಡ ಶಾಲೆಗಳಿಗೆ ಬೀಗ ಬೀಳೋ ಆತಂಕ ಶುರುವಾಗಿದೆ.

ಆಂಧ್ರದ ‘ಇಂಗ್ಲಿಷ್‌’ ಪ್ರೀತಿ.. ಕನ್ನಡಕ್ಕೆ ಫಜೀತಿ! ರಾಜ್ಯದಲ್ಲಿ ಅದೆಷ್ಟೋ ಕನ್ನಡ ಶಾಲೆಗಳು ಮುಚ್ಚಿದ್ರೂ ಆಂಧ್ರದಲ್ಲಿ ಇಂದಿಗೂ ಕನ್ನಡ ಶಾಲೆಗಳಿವೆ. ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಂತಿರೋ ಗಡಿಭಾಗದ ಶಾಲೆಗಳಲ್ಲಿ ಮಕ್ಕಳು ಕನ್ನಡದಲ್ಲೇ ಕಲಿಯುತ್ತಿದ್ದಾರೆ. ಆಂಧ್ರದಲ್ಲಿ ಬರೋಬ್ಬರಿ 79 ಕನ್ನಡ ಮಾಧ್ಯಮ ಶಾಲೆಗಳಿವೆ. ಆದ್ರೆ ಆಂಧ್ರ ಸರ್ಕಾರದ ಇಂಗ್ಲಿಷ್‌ ಪ್ರೀತಿ ಕನ್ನಡ ಶಾಲೆಗಳಿಗೆ ಫಜೀತಿ ತಂದಿದೆ. ಅಂದಹಾಗೆ. ಬರುವ ಶೈಕ್ಷಣಿಕ ವರ್ಷದಿಂದ ಆಂಧ್ರದಲ್ಲಿ ಪ್ರಾಥಮಿಕ ಹಂತದಲ್ಲಿ ಎಲ್ಲಾ ಶಾಲೆಗಳನ್ನ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನಾಗಿ ಬದಲಿಸಲು ಜಗನ್‌ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಆಂಧ್ರ ಸರ್ಕಾರ ಬಿಇಓ ಮೂಲಕ ಡಿಕ್ಲರೇಷನ್ ಪತ್ರವನ್ನು ಆಯಾ ಗ್ರಾಮ ಪಂಚಾಯಿತಿ, ಎಸ್‌ಡಿಎಂಸಿ ಹಾಗೂ ಪಾಲಕರಿಗೆ ಕಳುಹಿಸಿದೆ. ನಿಮಗೆ ಆಂಗ್ಲ ಮಾಧ್ಯಮ ಬೇಕೋ..? ತೆಲುಗು ಮಾಧ್ಯಮ ಬೇಕು ಅಂತಾ ಕೇಳಿದೆ. ಯಾವುದೆ ಹೆಚ್ಚು ಒಮ್ಮತ ಬರುತ್ತೋ ಆ ಮಾಧ್ಯಮದಲ್ಲೇ ಶಾಲೆ ನಡೆಸಲಾಗುತ್ತೆ. ಆದ್ರೆ ಕನ್ನಡದ ಬಗ್ಗೆ ಯಾವುದೇ ಅಭಿಪ್ರಾಯವನ್ನೇ ಕೇಳಿಲ್ಲ.

ಇನ್ನು ಆಂಧ್ರದ ಅನಂತಪುರ, ಕರ್ನೂಲು ಜಿಲ್ಲೆಯಲ್ಲಿ ಅತಿ ಹೆಚ್ಚು ಕನ್ನಡ ಶಾಲೆಗಳಿದ್ದು, ಇಲ್ಲಿ ಕನ್ನಡ ಮಾಧ್ಯಮದಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಆದರೆ ಹೊಸ ನಿಯಮದ ಪ್ರಕಾರ ಇಂಗ್ಲಿಷ್‌ ಅಥವಾ ತೆಲುಮ ಮಾಧ್ಯಮಕ್ಕೆ ಮಾತ್ರ ಅವಕಾಶ ಇದೆ. ಹೀಗಾಗಿ ಕನ್ನಡಿಗರು ಅನಿವಾರ್ಯವಾಗಿ ಒಂದನ್ನ ಆಯ್ಕೆ ಮಾಡಿಕೊಳ್ಳಲೇ ಬೇಕಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಇನ್ನಾದ್ರೂ ಗಮನ ಹರಿಸಿ ಕನ್ನಡ ಶಾಲೆಗಳ ಉಳಿವಿಗೆ ಪ್ರಯತ್ನಿಸಬೇಕಿದೆ.

ಒಟ್ನಲ್ಲಿ ರಾಜ್ಯ ವಿಭಜನೆ ವೇಳೆ ಹಲವು ಹಳ್ಳಿಗಳು ಆಂಧ್ರಕ್ಕೆ ಸೇರಿದ್ರೂ ಇಂದಿಗೂ ಕನ್ನಡವೇ ಅಲ್ಲಿ ಉಸಿರಾಗಿದೆ. ಕನ್ನಡವೇ ಕಲಿಕೆಯ ಮಾಧ್ಯಮವಾಗಿದೆ. ಶತಮಾನ ಪೂರೈಸಿರೋ ಹಲವು ಕನ್ನಡ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ.

Published On - 3:09 pm, Mon, 27 January 20