ಬಳ್ಳಾರಿ: ಜಿಲ್ಲೆಯಲ್ಲಿ ಬಹುತೇಕ ತಾಂಡಾಗಳಿದ್ದು, ಇಂದಿಗೂ ಇಲ್ಲಿನ ಅನೇಕರು ಗುಳೆ ಹೋಗುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಆವರಿಸಿದ್ದು, ಲಸಿಕೆ ( vaccine) ತೆಗೆದುಕೊಳ್ಳುವ ಬಗ್ಗೆ ಜಾಗೃತಿ ಎಲ್ಲರಿಗೂ ಅಗತ್ಯ. ಅದರಲ್ಲೂ ಗುಳೆ ಹೋಗುವ ಜನರಿರುವ ಬಳ್ಳಾರಿ, ವಿಜಯನಗರದಲ್ಲಂತ್ತು ಇದೊಂದು ಸವಾಲು. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಜನ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ ಆರೋಗ್ಯ ಅಧಿಕಾರಿಗಳ ಶ್ರಮದಿಂದ ಲಸಿಕೆ ಪಡೆಯುವಲ್ಲಿ ಬಳ್ಳಾರಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.
ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಯಲ್ಲಿ ಆರೋಗ್ಯ ಅಧಿಕಾರಿಗಳ ಶ್ರಮ ಇದೀಗ ಲಸಿಕೆಯಲ್ಲಿ ಯಶಸ್ಸು ಕಾಣಲು ಕಾರಣವಾಗಿದೆ. ಹೌದು ಇಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಜನನಿಭಿಡ ಪ್ರದೇಶದಲ್ಲಿ ಅಧಿಕಾರಿಗಳು ಭೇಟಿ ನೀಡಿ ಲಸಿಕೆ ಹಾಕುತ್ತಿದ್ದಾರೆ. ಹೌದು ಮದುವೆ ಕಾರ್ಯಕ್ರಮ, ಜನ ಗುಳೆ ಹೋಗೋ ಸಮಯದಲ್ಲಿ ಆರೋಗ್ಯ ಅಧಿಕಾರಿಗಳು ಲಸಿಕೆ ಹಾಕುತ್ತಿದ್ದಾರೆ. ಈ ಮೊದಲು 22 ನೇ ಸ್ಥಾನದಲ್ಲಿದ್ದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಇದೀಗ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿಯೇ ಮೊದಲನೇ ಸ್ಥಾನದಲ್ಲಿದೆ.
ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ತಮಟಿ ಎಂಬ ಹಳ್ಳಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ತಡರಾತ್ರಿಯೂ ವಾಕ್ಸಿನ್ ಹಾಕಿದ್ದಾರೆ. ಹೌದು ಇಲ್ಲಿನ ಜನ ಗುಳೆ ಹೋಗುತ್ತಾರೆ ಎಂಬ ಕಾರಣಕ್ಕೆ ತಡರಾತ್ರಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಅದರಲ್ಲೂ ದುಡಿಯುವುದಕ್ಕೆ ಬೇರೆ ಬೇರೆ ಊರುಗಳಿಗೆ ಹೋಗುವ ಇಲ್ಲಿನ ಜನ ಲಸಿಕೆಗೆ ಹಿಂದೇಟು ಹಾಕಿದ್ದರು. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ತಡರಾತ್ರಿ ಲಸಿಕೆ ಹಾಕಲು ಮುಂದಾಗಿದ್ದಾರೆ. ಇನ್ನು ಟ್ರ್ಯಾಕ್ಟರ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಜನರಿಗೆ ಟ್ರ್ಯಾಕ್ಟರ್ನ ಟ್ರಾಲಿ ಮೇಲೆ ನಿಂತು ಆರೋಗ್ಯ ಇಲಾಖೆ ಸಿಬ್ಬಂದಿ ವ್ಯಾಕ್ಸಿನ್ ಹಾಕಿರುವ ಅನೇಕ ಉದಾಹರಣೆಗಳು ಕೂಡ ಇವೆ.
ಬಳ್ಳಾರಿ ಜಿಲ್ಲೆಯಲ್ಲಿ ದಾಖಲೆಗಳ ಪ್ರಕಾರ ಒಟ್ಟು 34,27,211 ಲಕ್ಷ ಜನ ಲಸಿಕೆ ಪಡೆದಿದ್ದಾರೆ. ಹೀಗಾಗಿ ನಿನ್ನೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಬಳ್ಳಾರಿ ನಾಲ್ಕನೇ ಸ್ಥಾನದಲ್ಲಿದೆ.
#Ballari Health workers go extra mile to ensure 100% vaccination. @NewIndianXpress @XpressBengaluru @KannadaPrabha @santwana99 @ramupatil_TNIE @Amitsen_TNIE @CMofKarnataka @DHFWKA @BallariHfwo @RealNandiniKR @mla_sudhakar @chetanabelagere @BellaryNamma @NammaKalyana @AnandSinghBS pic.twitter.com/MtZo6PofED
— @Kiran_TNIE (@KiranTNIE1) December 24, 2021
ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಲಸಿಕೆ ಕಾರ್ಯಕ್ರಮಕ್ಕೆ ಆಧ್ಯತೆ
ಬಳ್ಳಾರಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಲಸಿಕೆ ಕಾರ್ಯಕ್ರಮ ಅನುಷ್ಠಾನ ಮಾಡಲು ಜಾಸ್ತಿ ಶ್ರಮ ಹಾಕಿದೆ. ಇಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮದುವೆ ಕಾರ್ಯಕ್ರಮ ಇರಬಹುದು, ಜಮೀನಿನಲ್ಲಿ ಕೆಲಸ ಮಾಡವ ಜನರು ಹಾಗೂ ಗುಳೆ ಹೋಗುವ ಜನರನ್ನು ಹುಡುಕಿ ಹುಡುಕಿ ಲಸಿಕೆ ಹಾಕುತ್ತಿದ್ದಾರೆ. ಮನೆ ಮನೆಗೆ ತೆರಳಿ ಲಸಿಕೆ ಹಾಕಿಸುತ್ತಿದ್ದಾರೆ. ಕೆಲವು ಕಡೆ ಲಸಿಕೆಗೆ ನಾನಾ ಕಾರಣ ಹೇಳಿ ಲಸಿಕೆ ಪಡೆಯಲು ಹಿಂದೇಟು ಹಾಕಿದರೂ, ಮೊದಲ ಡೋಸ್ ಪಡೆದು, ಎರಡನೇ ಡೋಸ್ ಪಡೆಯದೇ ಕೆಲವರು ಬಳ್ಳಾರಿ ಜಿಲ್ಲೆ ಬಿಟ್ಟು ಬೇರೆ ಕಡೆ ದುಡಿಯುವುದಕ್ಕೆ ಹೊರಟಿದ್ದರೂ, ಸಂಡೂರು ತಾಲೂಕಿನಲ್ಲಿ ಗುಳೆ ಹೋಗುವ ಸಮಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಅವರನ್ನು ಮಾತಾಡಿಸಿ ಲಸಿಕೆ ಬಗ್ಗೆ ಮಾಹಿತಿ ಪಡೆದು, ಎರಡನೇ ಡೋಸ್ ಲಸಿಕೆ ಹಾಕಿದ್ದಾರೆ.
ನಾವು ಸದ್ಯ ಲಸಿಕೆ ಹಾಕುವುದರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದೇವೆ. ಇದು ಖುಷಿಯ ವಿಚಾರ. ಇದಕ್ಕೆಲ್ಲ ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮ ಕಾರಣ. ಜೊತೆಗೆ ಕೆಲ ಕಡೆ ಲಸಿಕೆಗೆ ವಿರೋಧ ಮಾಡುತ್ತಿದ್ದಾರೆ. ನೆಪ ಹೇಳುತ್ತಿದ್ದಾರೆ. ಆದರೆ, ನೂರಕ್ಕೆ ನೂರು ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಡಿಎಚ್ಓ ಡಾ. ಜನಾರ್ದನ ಹೇಳಿದ್ದಾರೆ.
ಇದನ್ನೂ ಓದಿ:
ಡಿಸೆಂಬರ್ಗೆ ಕೊರೊನಾ 3ನೆಯ ಅಲೆ; ಜನ ಇನ್ನೂ ‘ನಮಗೆ ಬ್ಯಾಡಾ ಕೊರೊನಾ ಲಸಿಕೆ’ ಅಂತಿದ್ದಾರೆ- ಎಚ್ಚರಿಕೆ ಇರಲಿ
Published On - 11:36 am, Fri, 24 December 21