ಬಳ್ಳಾರಿ: ಅಧಿವೇಶನದಲ್ಲಿ ನಿನ್ನೆ ಕಾಂಗ್ರೆಸ್ ಒತ್ತಾಯದ ಬೆನ್ನಲ್ಲೇ ಸಂಡೂರು ತಹಶಿಲ್ದಾರ್ ಎತ್ತಂಗಡಿಯಾಗಿದ್ದಾರೆ. ತಹಶಿಲ್ದಾರ್ ಹೆಚ್ ಜಿ ರಶ್ಮಿ ಎತ್ತಂಗಡಿ ಜೊತೆಗೆ ಅವರ ಮೇಲಿನ ಆರೋಪದ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಸಂಡೂರು ಶಾಸಕ ಇ. ತುಕಾರಾಂ (e tukaram) ಅವರು ಕಚೇರಿಗೆ ಹೋದರೆ ತಮಗೆ ಗೌರವ ಕೊಡಲ್ಲ ಎಂದು ಆರೋಪ ಮಾಡಿದ್ದರು. ಶಾಸಕ ತುಕಾರಾಂ ನಿನ್ನೆ ರಶ್ಮಿ ವಿರುದ್ದ ಅಧಿವೇಶನದಲ್ಲಿ ಹಕ್ಕುಚುತಿ (Breach of privilege) ಮಂಡಿಸಿದ್ದರು. ನಿನ್ನೆ ಅಧಿವೇಶನದಲ್ಲಿ ತಹಶೀಲ್ದಾರ್ ರಶ್ಮಿಯವರನ್ನ (sandur tahsildar hg rashmi) ಅಮಾನತ್ತು ಮಾಡುವಂತೆಯೂ ಕಾಂಗ್ರೆಸ್ ಶಾಸಕರು ಒತ್ತಾಯಿಸಿದ್ದರು.
ಸದನದ ಗದ್ದಲದ ಬೆನ್ನಲ್ಲೇ ಸರ್ಕಾರ ಸಂಡೂರು ತಹಶಿಲ್ದಾರ್ ವರ್ಗಾವಣೆ ಮಾಡಿದೆ. ನಿನ್ನೆಯೇ ಅವರನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಆದೇಶ ಮಾಡಿದ್ದಾರೆ. ವರ್ಗಾವಣೆ ಬಳಿಕ ಸ್ಥಳ ನಿಯೋಜನೆ ಮಾಡದೇ ಬೆಂಗಳೂರಿನಲ್ಲಿರುವ ಬಹುಮಹಡಿ ಕಟ್ಟಡದಲ್ಲಿರುವ ಕಂದಾಯ ಇಲಾಖೆಯ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ರಶ್ಮಿ ಸ್ಥಾನಕ್ಕೆ ಪ್ರಭಾರಿ ತಹಶಿಲ್ದಾರ್ ಆಗಿ ವಿಶ್ವಜೀತ್ ಮೆಹತಾ ಅವರನ್ನು ನೇಮಕ ಮಾಡಲಾಗಿದೆ. ತಹಶಿಲ್ದಾರ್ ರಶ್ಮಿ ಮೇಲೆ ಸಂಡೂರು ಶಾಸಕ ತುಕಾರಾಂ ಮಾಡಿದ ಆರೋಪಗಳ ತನಿಖೆ ನಡೆದಿದೆ. ಕಲಬುರಗಿ ಪ್ರಾದೇಶಿಕ ಆಯುಕ್ತರನ್ನ ತನಿಖಾಧಿಕಾರಿಯಾಗಿ ನೇಮಿಸಿ ಆದೇಶ ಮಾಡಲಾಗಿದೆ. ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೆ ಸಮಗ್ರ ತನಿಖೆ ಮಾಡಿ ವರದಿ ಕೊಡುವಂತೆ ಸರ್ಕಾರ ಸೂಚನೆ ನೀಡಿದೆ.
ಇದನ್ನೂ ಓದಿ:
ಪ್ರಪಂಚದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಬಿಜೆಪಿಯದ್ದು, ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಣೆ
Published On - 8:35 am, Thu, 16 December 21