ಡಿಸೆಂಬರ್​ಗೆ ಕೊರೊನಾ 3ನೆಯ ಅಲೆ; ಜನ ಇನ್ನೂ ‘ನಮಗೆ ಬ್ಯಾಡಾ ಕೊರೊನಾ ಲಸಿಕೆ’ ಅಂತಿದ್ದಾರೆ- ಎಚ್ಚರಿಕೆ ಇರಲಿ

ಪರಿಸ್ಥಿತಿ ಹೀಗಿರುವಾಗ ಮಂಡ್ಯ ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳದೆ ಜನ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಮನೆ ಬಾಗಿಲಿಗೆ ಬಂದ ಆರೋಗ್ಯ ಸಿಬ್ಬಂದಿಯ ಜತೆ ಅಸಭ್ಯ ವರ್ತನೆ ತೋರುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲ್ಲ, ಜ್ವರ ಬಂದ್ರೆ ಏನು ಮಾಡುವುದು? ಎಂದು ಪಿಳ್ಳೆ ನೆವ ಹೇಳುತ್ತಿದ್ದಾರೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ರೆ ಸಾಯೋದು ನಾವು. ಲಸಿಕೆ ಹಾಕಿಸಿಕೊಳ್ಳೋದು ಬಿಡೋದು ನಮ್ಮಿಷ್ಟ ಎಂದು ಮೊಂಡುತನ ತೋರುತ್ತಿದ್ದಾರೆ. ಇದು ಸರ್ವತಾ ಸಲ್ಲದು.

ಡಿಸೆಂಬರ್​ಗೆ ಕೊರೊನಾ 3ನೆಯ ಅಲೆ; ಜನ ಇನ್ನೂ ‘ನಮಗೆ ಬ್ಯಾಡಾ ಕೊರೊನಾ ಲಸಿಕೆ’ ಅಂತಿದ್ದಾರೆ- ಎಚ್ಚರಿಕೆ ಇರಲಿ
ಪ್ರಾತಿನಿಧಿಕ ಚಿತ್ರ


ಮಂಡ್ಯ: ಕೊನೆಗೂ ಕೊರೊನಾ ಸೋಂಕು ಮೂರನೆಯ ಆಟ ಶುರುವಿಟ್ಟುಕೊಂಡಿದೆ. ತಜ್ಞರು ಹೇಳಿದ್ದಂತೆ ಡಿಸೆಂಬರ್-ಜನವರಿ ವೇಳೆಗೆ ಕೊರೊನಾ ಮೂರನೆಯ ಅಲೆ ಧುತ್ತನೆ ಎದುರಾಗಿಬಿಟ್ಟಿದೆ. ಕರ್ನಾಟಕ ರಾಜ್ಯದಲ್ಲಿ ಕೊರೊನಾಗೆ ಬ್ರೇಕ್​ ಹಾಕಲು ವ್ಯಾಪಕ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದ್ದು, ಆಡಳಿತ ಹೈಅಲರ್ಟ್​ ಆಗಿ ದಿನದ ಆಗುಹೋಗುಗಳನ್ನು ಎಚ್ಚರಿಕೆಯಿಂದ ಗಿಸುತ್ತಿದೆ. ಯಾವುದೇ ಕ್ಷಣ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರಕ್ಕೆ ಸಿದ್ಧವಾಗಿದೆ. ಪರಿಸ್ಥಿತಿ ಹೀಗಿರುವಾಗ ಜನ ಇನ್ನೂ ಹೆಚ್ಚಿನ ಕಟ್ಟೆಚ್ಚರ ವಹಿಸಿ, ಸ್ವಯಂ ಸಿದ್ಧತೆ ನಡೆಸಿಕೊಳ್ಳುವುದು ಸ್ವಾಗತಾರ್ಹ. ಆದರೆ ಇನ್ನೂ ಅಲ್ಲಲ್ಲಿ ಕೊರೊನಾ ಲಸಿಕೆ ನಮಗೆ ಬ್ಯಾಡಾ ಎನ್ನುತ್ತಿದ್ದಾರೆ. ಕೆಲ ವಿದೇಶಗಳಲ್ಲಿ ಜನ ಹೀಗೇ ನಮಗೆ ಬ್ಯಾಡ ಲಸಿಕೆ, ನಮಗೆ ಬ್ಯಾಡಾ ಎಂದು ಬೊಂಬಡಾ ಹೊಡೆಯುತ್ತಿರುವ ಹೊತ್ತಿನಲ್ಲಿಯೇ ಕೊರೊನಾ ಮೂರನೆಯ ಅಲೆ ನುಸುಳಿದ್ದು, ಅಲ್ಲಿನ ಜನ ಹೈರಾಣವಾಗುತ್ತಿದ್ದಾರೆ. ಇಂತಹ ದುರ್ಭರ ಪರಿಸ್ಥಿತಿಗಳು ಎದುರಿಗೇ ಇರುವಾಗ ಯಾವ ಪುರುಷಾರ್ಥಕ್ಕೆ ಲಸಿಕೆ ಬೇಡ ಅನ್ನಬೇಕು? ಜನ ಸ್ವಲ್ಪ ಆಲೋಚಿಸುವುದು ಒಳಿತು.

ಪರಿಸ್ಥಿತಿ ಹೀಗಿರುವಾಗ ಮಂಡ್ಯ ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳದೆ ಜನ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಮನೆ ಬಾಗಿಲಿಗೆ ಬಂದ ಆರೋಗ್ಯ ಸಿಬ್ಬಂದಿಯ ಜತೆ ಅಸಭ್ಯ ವರ್ತನೆ ತೋರುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲ್ಲ, ಜ್ವರ ಬಂದ್ರೆ ಏನು ಮಾಡುವುದು? ಎಂದು ಪಿಳ್ಳೆ ನೆವ ಹೇಳುತ್ತಿದ್ದಾರೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ರೆ ಸಾಯೋದು ನಾವು. ಲಸಿಕೆ ಹಾಕಿಸಿಕೊಳ್ಳೋದು ಬಿಡೋದು ನಮ್ಮಿಷ್ಟ ಎಂದು ಮೊಂಡುತನ ತೋರುತ್ತಿದ್ದಾರೆ. ಇದು ಸರ್ವತಾ ಸಲ್ಲದು. ಸಾರ್ವತ್ರಿಕ ಹಿತದೃಷ್ಟಿಯಿಂದ ಲಸಿಕೆ ಹಾಕಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಜನರ ವರ್ತನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಬೇಸರ ಮಿಶ್ರಿತ ದನಿಯಲ್ಲಿ ಕಿವಿಮಾತು ಹೇಳುತ್ತಿದ್ದಾರೆ.

ರಾಜ್ಯದಲ್ಲಿ ಒಮಿಕ್ರಾನ್ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮದ ಮಧ್ಯೆ ಲಸಿಕೆ ಹಾಕಿಸಿಕೊಳ್ಳಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಂಡ್ಯ ಜಿಲ್ಲೆಯಲ್ಲಿ ಕೆಲ ಜನರು ಅವಾಜ್ ಹಾಕುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವಂತೆ ಆರೋಗ್ಯ ಸಿಬ್ಬಂದಿ ಮನವಿ ಮಾಡಿದ್ರು ಬೇಜವಾಬ್ದಾರಿತನ ತೋರುತ್ತಿದ್ದಾರೆ. ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮನೆ ಬಾಗಿಲಿಗೆ ಬಂದ ಸಿಬ್ಬಂದಿಗಳ ಜೊತೆ ಜನರ ಅಸಭ್ಯ ವರ್ತನೆ ಕಂಡುಬಂದಿದೆ. ಲಸಿಕೆ ಹಾಕಿಸಿಕೊಳ್ಳಲ್ಲ, ಜ್ವರ ಬಂದ್ರೆ ಏನ್ಮಾಡೋದು, ಲಸಿಕೆ ಹಾಕಿಸಿಕೊಳ್ಳದಿದ್ರೆ ಸಾಯೋದು ನಾವು. ಲಸಿಕೆ ಹಾಕಿಸಿಕೊಳ್ಳೋದು ಬಿಡೋದು ನಮ್ಮಿಷ್ಟ ಎಂದು ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಈವರೆಗೆ 15 ಸಾವಿರ ಜನ ಲಸಿಕೆ ಪಡೆದಿಲ್ಲ: ಡಿಹೆಚ್​ಒ ಧನಂಜಯ್ಯ

ಮಂಡ್ಯ ಜಿಲ್ಲೆಯಲ್ಲಿ ಈವರೆಗೆ 15 ಸಾವಿರ ಜನ ಲಸಿಕೆ ಪಡೆದಿಲ್ಲ. ಲಸಿಕೆ ಪಡೆಯದ ಊರುಗಳನ್ನು ಗುರುತಿಸಿ, ಲಸಿಕೆ ನೀಡಲಾಗುತ್ತಿದೆ ಎಂದು ಮಂಡ್ಯ ನಗರದಲ್ಲಿ ಡಿಹೆಚ್​ಒ ಡಾ. ಧನಂಜಯ್ಯ ಹೇಳಿದ್ದಾರೆ. ಲಸಿಕೆ ಹಾಕಿಸಿಕೊಳ್ಳಿ ಅಂದ್ರೆ ಸಿಬ್ಬಂದಿಗೆ ಆವಾಜ್​ ಹಾಕ್ತಿದ್ದಾರೆ. ಅಂತಹವರ ಮನವೊಲಿಕೆ ಮಾಡಿ ವ್ಯಾಕ್ಸಿನ್ ನೀಡಲಾಗುತ್ತಿದೆ. 12.30 ಲಕ್ಷ ಜನರಿಗೆ ಮೊದಲ ಡೋಸ್ ಲಸಿಕೆ ನೀಡಿಕೆಯಾಗಿದೆ. 9,05,581 ಜನರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ 13.42 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಡಿಹೆಚ್​ಒ ಧನಂಜಯ್ಯ ತಿಳಿಸಿದ್ದಾರೆ.

ಕೊವಿಡ್ ರೂಪಾಂತರಿ ‘ಒಮಿಕ್ರಾನ್’ ಆತಂಕದಿಂದ ಅಲರ್ಟ್, ಚೆಕ್​ಪೋಸ್ಟ್​ಗಳಲ್ಲಿ ಕಟ್ಟೆಚ್ಚರ ವಹಿಸಲು ಸಚಿವ ಸೋಮಶೇಖರ್ ಸೂಚನೆ :

ಮೈಸೂರು: ಕೊವಿಡ್ ರೂಪಾಂತರಿ ‘ಒಮಿಕ್ರಾನ್’ ಆತಂಕದಿಂದ ಅಲರ್ಟ್ ಆಗಿದ್ದು, ಚೆಕ್​ಪೋಸ್ಟ್​ಗಳಲ್ಲಿ ಕಟ್ಟೆಚ್ಚರ ವಹಿಸಲು ಮೈಸೂರಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೊರ ರಾಜ್ಯಗಳಿಂದ ಬರುವವರಿಗೆ ಟೆಸ್ಟ್ ಕಡ್ಡಾಯ ಮಾಡಿ. ಚೆಕ್​ಪೋಸ್ಟ್​ಗಳಲ್ಲಿ ದಿನದ 24 ಗಂಟೆ ಶಿಫ್ಟ್​ಗಳಲ್ಲಿ ಕೆಲಸ ನಡೆಯಲಿದೆ. ಖುದ್ದು ತೆರಳಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. ಕೇರಳದಿಂದ ಆಗಮಿಸಿರುವವರ ಮೇಲೆ ನಿಗಾ ವಹಿಸಬೇಕು. ಪ್ರವಾಸಿ ಸ್ಥಳಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಕೇರಳ ವಿದ್ಯಾರ್ಥಿಗಳಿಗೆ ಪ್ರತಿ 16 ದಿನಕ್ಕೊಮ್ಮೆ ಟೆಸ್ಟ್ ನಡೆಸಬೇಕು. ನೆಗೆಟಿವ್ ರಿಪೋರ್ಟ್ ಬಂದ 7 ದಿನದ ಬಳಿಕ ಮತ್ತೆ ಟೆಸ್ಟ್ ನಡೆಸಬೇಕು ಎಂದು ಸಚಿವ ಸೋಮಶೇಖರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Vaccine Highdrama: ಮನೆ ಬಾಗಿಲಿಗೆ ಬಂದ ಸಿಬ್ಬಂದಿ ಜತೆ ಜನರ ಅಸಭ್ಯ ವರ್ತನೆ|Tv9kannada

Published On - 9:32 am, Mon, 29 November 21

Click on your DTH Provider to Add TV9 Kannada