ವಿಜಯನಗರ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಶ್ವರಪ್ಪರನ್ನು ಅರೆಸ್ಟ್ ಮಾಡೋದು ತನಿಖಾಧಿಕಾರಿಗಳಿಗೆ ಬಿಟ್ಟಿದ್ದು. ನಾವು ಪೊಲೀಸರು ಆಗೋಕೆ ಆಗಲ್ಲ. ಜಾರ್ಜ್ ಅವರದು ಒಪನ್ ಆಗಿ ವಿಡಿಯೋದಲ್ಲಿ ಹೆಸರಿತ್ತು. ಆದ್ರೂ ಅಗರು FIR ಹೆಸರಲ್ಲಿ ಹಾಕಲಿಲ್ಲ. ಆದ್ರೆ ನಾವು ಅತ್ಯಂತ ಪ್ರಮಾಣಿಕ ಪಾರದರ್ಶಕ FIR ಹಾಕಿದ್ದೇವೆ. ಕೋರ್ಟ್ ಆದೇಶ ಬಂದ ಮೇಲೆ FIR ಹಾಕಿದ್ರೂ ಮುಚ್ಚಿಡೋ ಪ್ರಯತ್ನ ಮಾಡಿದ್ರು, ಆದ್ರೆ ನಾವು ಹಾಗೆ ಮಾಡಿಲ್ಲ. ನಾವು ಮುಚ್ಚಿಟ್ಟಿಲ್ಲ, ತನಿಖಾಧಿಕಾರಿಗಳು ತೀರ್ಮಾನ ಮಾಡ್ತಾರೆ. ಸಿದ್ದರಾಮಯ್ಯ ವಕೀಲರಿದ್ದಾರೆ ಅವರು ಯೋಚನೆ ಮಾಡಬೇಕು ಎಂದು ಕೆಎಸ್ ಈಶ್ವರಪ್ಪ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಮ್ಮ ದೇಶಕ್ಕೆ ಬಹಳ ದೊಡ್ಡ ಚರಿತ್ರೆ ಇದೆ. ಚ್ಯಾರಿತ್ರ್ಯ ನಮ್ಮ ನಡೆ ನುಡಿ ಇಂದ ರೂಪಗೊಳ್ಳುತ್ತದೆ. ನಮ್ಮ ನಡೆ ನುಡಿಗೆ ಬೇಕಾಗಿರೋದು, ಭಾಷೆ ಮತ್ತು ಸಂಸ್ಕೃತಿ. ಭಗವಂತ ಮಾನವ ಕುಲಕ್ಕೆ ಒಂದು ಶಕ್ತಿ ಕೊಟ್ಟಿದ್ದಾನೆ. ಅಭಿವ್ಯಕ್ತಿಗಾಗಿ ಭಾಷೆ ಬಹಳ ಮುಖ್ಯ. ಭಾಷೆಯಲ್ಲಿ ಸಂತೋಷ, ಸಂಭ್ರಮ, ಕಷ್ಟ ಕಾರ್ಪಣ್ಯ ಎಲ್ಲವೂ ಇದೆ. ಭಾಷೆ ಇಲ್ಲದ ಒಂದ ಕಾಲವೂ ಇತ್ತು. ಶಬ್ದಗಳಿಂದ ಸಂಪರ್ಕ ಇತ್ತು, ನಂತರ ಅಕ್ಷರ ಬಂತು. ಭಾಷೆಗೆ ಒಂದು ಅರ್ಥ ಬಂತು, ಅರ್ಥಕ್ಕೆ ಭಾವನೆ ಬಂತು, ಭಾಷೆ ಇಲ್ಲದೆ ಬದುಕೆ ಇಲ್ಲ. ನಾವು ಏನಾಗಿದ್ದೇವೆ, ಅದು ಭಾಷೆ ಇಂದ. ಗಡಿ ಮೀರಿ ಕನ್ನಡ ಇದೆ. ರಾಜ್ಯದಲ್ಲಿ ಅಭಿವೃದ್ಧಿ ಇಂದ ಬದುಕ ಬೇಕು ಅನ್ನೋ ಚಿಂತನೆ ಬಂದಿದ್ದು ಭಾಷೆಯಿಂದ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬಸವರಾಜ್ ಬೊಮ್ಮಾಯಿ ಭಾಷಣ ಮಾಡಿದ್ದಾರೆ.
ಹಳೆಗನ್ನಡ ಶುದ್ದ ಕನ್ನಡದಲ್ಲಿ ಬೈಗುಳ ಇಲ್ಲ ಈ ಬಗ್ಗೆ ಸಂಶೋಧನೆ ಮಾಡಿ: ಬೊಮ್ಮಾಯಿ
ಆದ್ರೆ ನಾವು ಈ ಮೂಲ ಬಿಟ್ಟಿದ್ದೇವೆ, ಹೀಗಾಗಿ ಮೌಲ್ಯ ಕಡಿಮೆಯಾಗಿದೆ. ಕನ್ನಡ ಭಾಷೆ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಬೇಕು. ಯಾವುದೇ ರಂಗದಲ್ಲಿ ಕನ್ನಡ ಅಳಿಯಬಾರದು. ನಾಗರೀಕತೆ, ಸಂಸ್ಕೃತಕ್ಕೂ ವ್ಯತ್ಯಾಸ ಗೊತ್ತಿಲ್ಲ. ನಾಗರೀಕತೆ ಇದೀಗ ಬೆಳದಿದೆ. ಮೊದಲು ಬೀಸೋ ಕಲ್ಲು ಹೋಗಿ ಮಿಕ್ಸಿ ಬಂದಿದೆ. ನಾಗರೀಕತೆ ಬೆಳದಂತೆ, ಸಂಸ್ಕೃತಿ ಕಳಚಿ ಬಿದ್ದಿದೆ. ನಮ್ಮ ಹತ್ರ ಇರೋದು ನಾಗರಿಕತೇ, ನಾವೇನಾಗಿದ್ದೇವೆ ಅನ್ಮೋದು ಸಂಸ್ಕೃತಿ. ವಿಶ್ವ ಭೂಪಟದಲ್ಲಿ ಕನ್ನಡಿಗರು ಎಲ್ಲಿ ಇರಬೇಕು ಅನ್ನೋದು ಸಂಶೋಧನೆ ಆಗಬೇಕು ಇದು ನನ್ನ ಆಶಯ. ಕನ್ನಡ ಬಹಳ ಶ್ರೀಮಂತ ಭಾಷೆ. ಕನ್ನಡವನ್ನು ಪ್ರೀತಿ ಮಾಡಬೇಕು. ಹಳೆಗನ್ನಡ ಶುದ್ದ ಕನ್ನಡದಲ್ಲಿ ಬೈಗುಳ ಇಲ್ಲ ಈ ಬಗ್ಗೆ ಸಂಶೋಧನೆ ಮಾಡಿ ಎಂದು ಬೊಮ್ಮಾಯಿ ಹೇಳಿದ್ದಾರೆ.
ಬರಗಾಲದ ಬದುಕಿನ ಬಗ್ಗೆ ಸಂಶೋಧನೆ ಆಗಬೇಕಿದೆ. ಪ್ರತಿ ಒಂದು ಪ್ರಸಂಗವೂ ಅಧ್ಯಯನಕ್ಕೆ ಅವಕಾಶ ಇದೆ. ಹಂಪಿ ವಿಶ್ವವಿದ್ಯಾಲಯ ಜೀವಂತಿಕೆ ಇರೋ ವಿಶ್ವವಿದ್ಯಾಲಯ. ನಾನು ಕನ್ನಡದ ಅಭಿಮಾನಿಯಾಗಿ ಇಲ್ಲಿಗೆ ಬಂದಿದ್ದೇನೆ, ಮುಖ್ಯಮಂತ್ರಿಯಾಗಿ ಬಂದಿಲ್ಲ. ಜಾನಪದ, ವಚನ ಸಾಹಿತ್ಯದಲ್ಲಿ ಕನ್ನಡ ಇದೆ. ವೈಚಾರಿಕ ಕನ್ನಡ, ವ್ಯವಹಾರಿಕ ಕನ್ನಡ ಇದೆ. ವಿದ್ಯಾರ್ಥಿಗಳ ಜೊತೆ ಸಂವಾದ ಮಾಡೋ ಆಸೆ ಇದೆ. ಕುಲಪತಿಗಳು ಏನೂ ಕೇಳಲ್ಲ ಅಂದೂ ಎಲ್ಲವನ್ನೂ ಕೇಳಿದ್ದಾರೆ. ಕುಲಪತಿಗಳು 80 ಕೋಟಿ ಬೇಡಿಕೆ ಇಟ್ಟಿದ್ದಾರೆ. ಎರಡು ಮೂರು ಹಂತಗಳಲ್ಲಿ ಎಲ್ಲವನ್ಮೂ ಪೂರೈಸುತ್ತೇನೆ. ಕಲ್ಯಾಣ ಕರ್ನಾಟಕದ ವಿಶೇಷ ಹಣ ನನ್ನ ಕಡೆ ಇತ್ತು. ನಾನು ಅಪೌಷ್ಟಿಕತೆ ಮಕ್ಕಳ ಯೋಜನೆಗೆ ಕೊಡಬೇಕಿತ್ತು ಅನ್ನೋ ಆಸೆ ಇತ್ತು. ಆದ್ರೆ ಕೂಡಲೇ ಇದೀಗ KKRDB ಇಂದ 20 ಕೋಟಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಬಂಡಾಯ ಸಾಹಿತ್ಯ ಅಂದ್ರೆ ತುಳಿತಕ್ಕೆ ಒಳಪಟ್ಟವರ ಧ್ವನಿ. ಬಂಡಾಯ ಸಾಹಿತ್ಯ ನಾನು ಸ್ವಾಗತ ಮಾಡ್ತೀನಿ. ಹಂಪಿಕನ್ನಡ ವಿಶ್ವವಿದ್ಯಾಲಯ ಕಾರ್ಯವ್ತಾಪ್ತಿ ದೊಡ್ಡದಾಗಬೇಕು. ಎಂಪಿ ಪ್ರಕಾಶ್ ಹೆಸರಲ್ಲಿ ಒಂದು ಸಂಶೋದನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಅದಕ್ಕೆ ನಾನು ವಿಶೇಷ ಅನುದಾನ ಕೊಡ್ತೀನಿ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಎಲ್ಲರೂ ಜೈಲಿನಲ್ಲಿ ಇರಬೇಕು: ನಳಿನ್ ಕುಮಾರ್ ಕಟೀಲ್
ಮೂರು ತಿಂಗಳಿಗೊಮ್ಮೆ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತೆ. ಮತಗಟ್ಟೆ ಆಧಾರದಲ್ಲಿ ಪಕ್ಷ ಸಂಘಟನೆ ಗಟ್ಟಿ ಮಾಡಬೇಕಿದೆ. ಮುಂದಿನ ದಿನ 150 ಸ್ಥಾನ ಗೆಲ್ಲಲು ಇಲ್ಲಿಂದಲೇ ಅಡಿಪಾಯ ಹಾಕಲಾಗುತ್ತದೆ ಎಂದು ಹೊಸಪೇಟೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಎಲ್ಲರೂ ಜೈಲಿನಲ್ಲಿ ಇರಬೇಕು. ಕಾಂಗ್ರೆಸ್ಸಿಗರನ್ನ ಜೈಲಿನಲ್ಲಿ ಇಡುವಂತೆ ಬೊಮ್ಮಾಯಿಗೆ ಕೇಳುವೆ. ನೈತಿಕ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. DySP ಗಣಪತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿದ್ದಾರೆ. ಕೆ.ಜೆ. ಜಾರ್ಜ್ ಹಲವು ದಿನಗಳ ನಂತರ ರಾಜೀನಾಮೆ ನೀಡಿದ್ರು. ಆರ್ಕಾವತಿ ಪ್ರಕರಣ, ಜಗನ್ನಾಥ ಶೆಟ್ಟಿ ಆಯೋಗದ ವರದಿ, ವಕ್ಫ್ ಬೋರ್ಡ್ ಅಕ್ರಮದ ಬಗ್ಗೆ ತನಿಖೆ ಮಾಡಿ. ಸಂತೋಷ್ ಕೇಸ್ನಲ್ಲಿ ಕಾಂಗ್ರೆಸ್ ನಡೆಯನ್ನ ನೋಡಿದ್ರೆ. ಈ ಕೇಸ್ ಹಿಂದೆ ಕಾಂಗ್ರೆಸ್ ನಾಯಕರು ಇದ್ದಾರೆ ಅನಿಸುತ್ತಿದೆ. ಸಂತೋಷ್ನನ್ನ ಕರೆದು ದೆಹಲಿಯಲ್ಲಿ ಸುದ್ದಿಗೋಷ್ಠಿ ಮಾಡಿದ್ರು. ಕೈ ನಾಯಕರು ಸಂತೋಷ್ಗೆ ಆತ್ಮವಿಶ್ವಾಸ ತುಂಬಬೇಕಿತ್ತು. ಸಂತೋಷ್ ಆತ್ಮಹತ್ಯೆಗೆ ಕಾಂಗ್ರೆಸ್‌ನವರ ಪ್ರೇರಣೆ ಇದೆ. ಕಾಂಗ್ರೆಸ್‌ಗೆ ಗ್ರಹಚಾರ ಹಿಡಿದಿದೆ. ಕಾಂಗ್ರೆಸ್‌ಗೆ ಒಂದು ರಚನಾತ್ಮಕ ತಂಡ ರಚನೆ ಮಾಡಲು ಆಗಿಲ್ಲ. ಸಿಎಂ ಕುರ್ಚಿಗಾಗಿ ಮ್ಯೂಸಿಕ್ ಚೇರ್ ಗೇಮ್ ನಡೆಯುತ್ತಿದೆ ಎಂದು ಹೊಸಪೇಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಸಿಡಿ ಹುಡುಕುವುದು ಅಡ್ಡ ದಾರಿ ಹಿಡಿಯುವುದೇ ಕೆಲಸ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಇದೇ ಕೆಲಸವಾಗಿದೆ. ಸಂತೋಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಎಲ್ಲವೂ ಬಯಲಾಗಲಿದೆ ಎಂದು ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಕಟೀಲು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಹೋರಾಟ ಮಾಡುವ ನೈತಿಕತೆ ಇಲ್ಲ: ಸಿಟಿ ರವಿ ಹೇಳಿಕೆ
ಕಾಂಗ್ರೆಸ್ ಪಕ್ಷಕ್ಕೆ ಹೋರಾಟ ಮಾಡುವ ನೈತಿಕತೆ ಇಲ್ಲ. ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು ಬೇಲ್ ಮೇಲೆ ಹೊರಗಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಹಗರಣ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಹೋರಾಟ ಮಾಡುವ ನೈತಿಕತೆ ಇಲ್ಲ. ಈಶ್ವರಪ್ಪ ರಾಜೀನಾಮೆ ನೀಡಿದರೂ ಹೋರಾಟದ ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಮಾನ ಮರ್ಯಾದೆ ಇಲ್ಲ. ಡಿ.ಕೆ ಶಿವಕುಮಾರ್ ಪ್ರಾಮಾಣಿಕ ವ್ಯಕ್ತಿ ಅಣ್ಣಾ ಹಜಾರೆಯಂತಿದ್ದಾರೆ. ಅಂತಹವರ ಬಾಯಿಯಲ್ಲಿ ಇನ್ನೇನು ಬರೋಕೆ ಸಾಧ್ಯ. ಡಿಕೆಶಿಯಂಥಾ ಪ್ರಾಮಾಣಿಕ ವ್ಯಕ್ತಿ ಯಾರಾದ್ರೂ ಇದ್ದಾರಾ? ಎಂದು ಡಿಕೆಶಿ ವಿರುದ್ಧ ಬಿಜೆಪಿ ನಾಯಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಕೆಎಸ್ ಈಶ್ವರಪ್ಪ ಮನೆಗೆ ವಿವಿಧ ಸ್ವಾಮೀಜಿಗಳು ಭೇಟಿ
ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರ ಜತೆಗಿನ ಮೃತ ಸಂತೋಷ್ ಪಾಟೀಲ್ ಫೋಟೋಗಳು ವೈರಲ್
Published On - 2:08 pm, Sat, 16 April 22