ಏಷ್ಯಾದ ಅತಿದೊಡ್ಡ ಕರಡಿ ಧಾಮದಲ್ಲಿ ಸಫಾರಿ ಆರಂಭ; ಪ್ರವಾಸಿಗರು ಫುಲ್ ಖುಷ್

ಏಷ್ಯಾದ ಅತಿದೊಡ್ಡ ಕರಡಿ ಧಾಮ ವಿಜಯನಗರ ಜಿಲ್ಲೆಯಲ್ಲಿದೆ. 82 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಧರೋಜಿ ಕರಡಿ ಧಾಮವಿದೆ. ಈ ಧಾಮದಲ್ಲಿ ಸುಮಾರು 120 ಕ್ಕೂ ಹೆಚ್ಚು ಕರಡಿಗಳಿವೆ.

ಏಷ್ಯಾದ ಅತಿದೊಡ್ಡ ಕರಡಿ ಧಾಮದಲ್ಲಿ ಸಫಾರಿ ಆರಂಭ; ಪ್ರವಾಸಿಗರು ಫುಲ್ ಖುಷ್
ಧರೋಜಿ ಕರಡಿ ಧಾಮದಲ್ಲಿ ಕರಡಿಗಳು

ಬಳ್ಳಾರಿ: ಸಾಮಾನ್ಯವಾಗಿ ಸಿಂಹ ಸಫಾರಿ, ಹುಲಿ ಸಫಾರಿ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ವಿಜಯನಗರ ಜಿಲ್ಲೆಯಲ್ಲಿ ಅಪರೂಪದ ಕರಡಿ ಸಫಾರಿ (Bear Safari) ಆರಂಭವಾಗುತ್ತಿದೆ. ವಿಜಯನಗರದಲ್ಲಿ ಏಷ್ಯಾ ಖಂಡದ ಅತಿದೊಡ್ಡ ಧರೋಜಿ ಕರಡಿ ಧಾಮ (Daroji Bear Sanctuary) ಈಗ ಪ್ರವಾಸಿಗರನ್ನು ಸೆಳೆಯಲು ಸಿದ್ಧವಾಗಿದೆ. ಕರಡಿ ಧಾಮದತ್ತ ಪ್ರವಾಸಿಗರನ್ನ ಸೆಳೆಯಲು ಅರಣ್ಯ ಇಲಾಖೆ ಈಗ ನಿರ್ಧರಿಸಿದ್ದು, ಕರಡಿ ಧಾಮಕ್ಕೆ ಬರುವ ಪ್ರವಾಸಿಗರು ಈಗ ಕರಡಿ ಸಫಾರಿಗೆ ಹೋಗಬಹುದಾಗಿದೆ.

ಏಷ್ಯಾದ ಅತಿದೊಡ್ಡ ಕರಡಿ ಧಾಮ ವಿಜಯನಗರ ಜಿಲ್ಲೆಯಲ್ಲಿದೆ. 82 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಧರೋಜಿ ಕರಡಿ ಧಾಮವಿದೆ. ಈ ಧಾಮದಲ್ಲಿ ಸುಮಾರು 120 ಕ್ಕೂ ಹೆಚ್ಚು ಕರಡಿಗಳಿವೆ. ಮೊದಲೆಲ್ಲಾ ಖಾಸಗಿಯಾಗಿ ಪ್ರವಾಸಿಗರಿಗೆ ಇಲ್ಲಿ ಒಳಗೆ ಹೋಗಲು ಅವಕಾಶ ಇತ್ತು. ಆದರೆ ಇನ್ನು ಮುಂದೆ ನಿಗದಿತ ಹಣ ನೀಡಿ ಜನರು ಕರಡಿ ಸಫಾರಿ ಮಾಡಬಹುದು.

ಇಲ್ಲಿ ಕೇವಲ ಕರಡಿಗಳು ಮಾತ್ರವಲ್ಲ. ವಿಶೇಷವಾದ ಹಕ್ಕಿಗಳನ್ನೂ ಸಹ ಕಾಣಬಹುದು. ಬಣ್ಣದ ಕಲ್ಲುಕೋಳಿ, ಕೌಜುಗ, ಗೀಜಗ, ಬುರ್ಲಿ ಹಕ್ಕಿಗಳು, ವಿವಿಧ ಬಗೆಯ ಹದ್ದುಗಳು, ಅಪರೂಪದ ಹಕ್ಕಿಯಾದ ಹಳದಿ ಗಂಟಲಿನ ಪಿಕಳಾರ ಸೇರಿದಂತೆ ಬಗೆ ಬಗೆಯ ಹಕ್ಕಿಗಳನ್ನೂ ಕಾಣಬಹುದು. ದಖನ್ ಪ್ರಸ್ಥಭೂಮಿಯ ಪ್ರದೇಶವಾದ ಇಂತಹ ಪ್ರದೇಶದಲ್ಲಿ ವಿಶೇಷವಾಗಿ ಕರಡಿ ಸಫಾರಿ ಆರಂಭಿಸಿರುವುದು ಶ್ಲಾಘನೀಯ ಅಂತ ಪ್ರಾಣಿಪ್ರಿಯರು ಹೇಳುತ್ತಿದ್ದಾರೆ.

ಪ್ರವಾಸಿಗರು ಸಿಂಹ, ಹುಲಿಗಳ ಸಫಾರಿಯಂತೆ ವಿಜಯನಗರದಲ್ಲಿ ಕರಡಿ ಸಫಾರಿಯನ್ನೂ ಕಣ್ತುಂಬಿಕೊಳ್ಳಬಹುದು. ಹತ್ತಿರದಲ್ಲಿಯೇ ವಿಶ್ವಪ್ರಸಿದ್ಧ ಹಂಪಿಯೂ ಇದ್ದು, ವಾಜಪೇಯಿ ಜಿಯಾಲಾಜಿಕಲ್ ಪಾರ್ಕ್ ಇದೆ. ಹಂಪಿಗೆ ಬರುವ ಪ್ರವಾಸಿಗರು ಕರಡಿ ಸಫಾರಿಗೆ ಹೋಗುವ ಅವಕಾಶ ಸಿಗುತ್ತದೆ.

ಇದನ್ನೂ ಓದಿ

Avani Lekhara: ಚಿನ್ನದ ಹುಡುಗಿ ಅವನಿಗೆ 3 ಕೋಟಿ ಬಹುಮಾನ ಘೋಷಣೆ; ಮಹೀಂದ್ರಾದಿಂದ ವಿಶೇಷ ಉಡುಗೊರೆ

ಪಂಜ್​ಶೀರ್​ ಪ್ರಾಂತ್ಯದ ಮೇಲೆ ಬೇರೆ ಬೇರೆ ದಿಕ್ಕುಗಳಿಂದ ದಾಳಿ ಮಾಡಿದ ತಾಲಿಬಾನ್​; ತಿರುಗಿಬಿದ್ದು ಹಿಮ್ಮೆಟ್ಟಿಸಿದ ಉತ್ತರ ಮೈತ್ರಿ ಪಡೆ

(bear safari has begun at Daroji Bear Sanctuary)

Read Full Article

Click on your DTH Provider to Add TV9 Kannada