ಬಳ್ಳಾರಿ: ಜಿಲ್ಲಾಧಿಕಾರಿ ವಿರುದ್ಧ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದ ವ್ಯಕ್ತಿಗೆ ಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಕ್ಕೆ ನುಗ್ಗಿದ್ದ ಮೊಸಳೆ ಸೆರೆ ಹಿಡಿಯದಿದ್ದರೆ ಕೇಸ್ ಹಾಕ್ತೇನೆ ಅಂತ ಅಮರೇಶ್ ಎಂಬುವವರು ಬಳ್ಳಾರಿ ಡಿಸಿ ಪವನ್ ಕುಮಾರ್ಗೆ ಮೆಸೇಜ್ ಹಾಕಿದ್ದರು. ವಾರ್ನಿಂಗ್ ಮೆಸೇಜ್ ಮಾಡಿದ್ದ ವ್ಯಕ್ತಿಗೆ ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡಿದ್ದು, ತರಾಟೆ ಆಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಳೂರು ನಿವಾಸಿ ಅಮರೇಶ್ ಗ್ರಾಮಕ್ಕೆ ನುಗ್ಗಿದ್ದ ಮೊಸಳೆಯನ್ನು ಸೆರೆ ಹಿಡಿಯಬೇಕು. ಇಲ್ಲದಿದ್ದರೆ ಕೇಸ್ ಹಾಕುತ್ತೇನೆ ಅಂತ ಬಳ್ಳಾರಿ ಡಿಸಿಗೆ ವಾರ್ನಿಂಗ್ ಮೆಜೇಜ್ ಹಾಕಿದ್ದರು. ಬಳಿಕ ಕರೆ ಮಾಡಿದಾಗ ಅಮರೇಶ್ಗೆ ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಚ್ಚಗೆ ಮಲಗಿತ್ತು ಮೊಸಳೆ
ರಾಜ್ಯದಲ್ಲಿ ಸದ್ಯ ರೈತರು ಫುಲ್ ಬ್ಯುಸಿ ಆಗಿದ್ದಾರೆ. ಮಳೆ ಸ್ಪಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದಂತೆ ರೈತರು ಭತ್ತದ ಕಟಾವಿಗೆ ಮುಂದಾಗಿದ್ದಾರೆ. ಮಳೆಯಿಂದ ಪಾರಾದ ಅಷ್ಟೊ ಇಷ್ಟೋ ಭತ್ತವನ್ನಾದರೂ ಕಟಾವು ಮಾಡೋಣ ಅಂತ ರೈತರು ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಈ ವೇಳೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಂದಿಹಳ್ಳಿಯ ಭತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಗಾಬರಿಗೊಂಡಿದ್ದಾರೆ. ಕಾರಣ ಮೊಸಳೆ ಪ್ರತ್ಯಕ್ಷವಾಗಿದೆ.
ಮೊಸಳೆ ಭತ್ತದ ಗದ್ದೆಯಲ್ಲಿ ಬೆಚ್ಚಗೆ ಅಡಗಿ ಕುಳಿತಿತ್ತು. ಭತ್ತ ಕಟಾವು ಮಾಡುವ ವೇಳೆ ಮೊಸಳೆ ಕಂಡಿದೆ. ಕಟಾವು ಯಂತ್ರದ ಚಾಲಕ ಮೊಸಳೆಯನ್ನು ನೋಡಿ ಗಾಬರಿಗೊಂಡಿದ್ದಾನೆ. ಜನರನ್ನು ಕಂಡು ಮೊಸಳೆ ಕೂಡಾ ಸ್ವಲ್ಪ ಸಮಯ ಗಾಬರಿಯಾಗಿತ್ತು. ನಂತರ ಮೊಸಳೆ ಕಂಡು ಬೆಚ್ಚಿಬಿದ್ದ ರೈತರು ಮೊಸಳೆಯನ್ನು ನದಿಯತ್ತ ಓಡಿಸಿದರು.
ಇದನ್ನೂ ಓದಿ
ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಭೇಟಿ ಹಿನ್ನೆಲೆ; ರಸ್ತೆ ಬದಿಯಲ್ಲಿದ್ದ ಮಸೀದಿಗೆ ಕೇಸರಿ ಬಣ್ಣದಿಂದ ಪೇಂಟಿಂಗ್ !
ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ಗೆ ಆಸ್ಟ್ರೇಲಿಯಾದಿಂದಲೂ ರಾಜತಾಂತ್ರಿಕ ಬಹಿಷ್ಕಾರ; ಕ್ರೀಡಾಪಟುಗಳಿಗೆ ಇಲ್ಲ ನಿರ್ಬಂಧ