ಬಳ್ಳಾರಿ, ಮಾರ್ಚ್.10: ಹೊಲದಲ್ಲಿ ಚಿರತೆ ದಾಳಿಗೆ 21 ಕುರಿಗಳು (Goat) ಮೃತಪಟ್ಟ ಘಟನೆ ಬಳ್ಳಾರಿ ತಾಲೂಕಿನ ಸಂಜೀವತಾಯನಕೋಟೆ ಗ್ರಾಮದ ಬಳಿ ನಡೆದಿದೆ. ತಡ ರಾತ್ರಿ ಚಿರತೆಯೊಂದು ಹೊಲಕ್ಕೆ ನುಗ್ಗಿದ್ದು ಹಟ್ಟಿಹಾಕಿ ನಿಲ್ಲಿಸಿದ್ದ 21 ಕುರಿಗಳನ್ನ ಸಾಯಿಸಿ 2 ಕುರಿ ಹೊತ್ತೊಯ್ದಿದೆ. ರೈತ ಸಣ್ಣ ತಿಮ್ಮಪ್ಪ ಎಂಬುವವರ 21 ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಾದನಹಟ್ಟಿಯಲ್ಲಿ ರೈಲಿಗೆ ಸಿಲುಕಿ ಮಹಿಳೆ ಶ್ರೀನಿಧಿ ಸಾವಿನ ಕೇಸ್ಗೆ ಹೊಸ ತಿರುವು ಸಿಕ್ಕಿದ್ದು, ಪತಿ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಎಂದು ಆರೋಪಿಸಲಾಗಿದೆ. ಪತಿ ಮನೆ ಎದುರೇ ಶ್ರೀನಿಧಿ ಶವಸಂಸ್ಕಾರಕ್ಕೆ ಸಂಬಂಧಿಕರು ಮುಂದಾಗಿದ್ರು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾದನಹಟ್ಟಿ ಗ್ರಾಮದಲ್ಲಿ, ಶ್ರೀನಿಧಿ ಪತಿ ಶ್ರೀರಾಮ್, ಕುಟುಂಬ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಜಲು ತೆರಳಿದ್ದ ಯುವಕ ನೀರು ಪಾಲಾಗಿರೋ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣದಲ್ಲಿ ನಡೆದಿದೆ. ಕಂಡಕೆರೆ ಗ್ರಾಮದ 24 ವರ್ಷದ ಶರತ್ ಮೃತಪಟ್ಟಿದ್ದು, ಸ್ನೇಹಿತರೊಂದಿಗೆ ನದಿಗೆ ಈಜಲು ತೆರಳಿದ್ದಾಗ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಬಿಸಿಲಿನ ತಾಪಮಾನ ಏರುತ್ತಿದಂತೆ ಬಡವರ ಫ್ರಿಡ್ಜ್ಗೆ ಭಾರಿ ಡಿಮ್ಯಾಂಡ್, ಬೀದರ್ನಲ್ಲಿ ಮಡಿಕೆಗಾಗಿ ಸರತಿ ಸಾಲಿನಲ್ಲಿ ನಿಂತ ಜನ
ಆಟೋ ಮಗುಚಿಬಿದ್ದು 8 ತಿಂಗಳ ಹಸುಗೂಸು ಸಾವನ್ನಪ್ಪಿದ್ದಕ್ಕೆ ಸಿಡಿದೆದ್ದ ಗ್ರಾಮಸ್ಥರು, ಪ್ರತಿಭಟನೆ ನಡೆಸಿದ್ದಾರೆ.
ರಸ್ತೆಗೆ ಬಂದ ಜಿಂಕೆ ತಪ್ಪಿಸಲು ಹೋಗಿ ಆಟೋ ಪಲ್ಟಿಯಾಗಿತ್ತು. ಈ ವೇಳೆ 8 ತಿಂಗಳ ಹಸುಗೂಸು ಅನುರಾಗ್ರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮಗು ಸಾವಿಗೆ ಅರಣ್ಯ ಇಲಾಖೆಯೇ ಕಾರಣ ಅಂತಾ ಕಿಡಿಕಾರಿದ ಸ್ಥಳೀಯರು, ಪ್ರತಿಭಟನೆ ನಡೆಸಿದ್ರು.
ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ರಾಯಚೂರು ನಗರದಲ್ಲಿ ಮಹಿಮ್ಮುದ್ ಹುಸೇನ್ ಎಂಬುವವರ ಮನೆಯಲ್ಲಿ, ಗಾಯಾಳು ಮೆಹಾಮನ್ ಟ್ಯೂಷನ್ ಹೇಳ್ತಿಕೊಡ್ತಿದ್ಲು. ಅದೇ ಮನೆಯಲ್ಲಿ ಆಕೆಯ ತಾಯಿ ಜುಲ್ಲಾಕಾ ಬೇಗಂ ಕೆಲಸ ಮಾಡ್ತಿದ್ರು. ಈ ವೇಳೆ ಮಾಲೀಕರ ಡೈಮಂಡ್ ನಕ್ಲೇಸ್ & ಚಿನ್ನವನ್ನ ಕಳ್ಳತನ ಮಾಡಿದ್ದಾಗಿ ಮೆಹಾಮನ್ ಪೊಲೀಸರ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾಳೆ. ಕದ್ದಿರೋ ಡೈಮಂಡ್ ನಕ್ಲೇಸ್ ಬಾಯ್ ಫ್ರೆಂಡ್ ಗೆ ಕೊಟ್ಟಿದ್ದೆ. ಆದ್ರೆ ಆತ ವಂಚಿಸಿದ್ದರಿಂದ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ರಾಯಚೂರು ಪೊಲೀಸರ ಬಳಿ ಹೇಳಿದ್ದಾಳೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ