Crime News: ಬೈಕ್ ಮೇಲೆ ಬಂದು ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 06, 2022 | 4:06 PM

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದ್ದು, ಡೀಸೆಂಟ್ ಡ್ರೆಸ್​ನಲ್ಲಿ ಬಂದು ಮನೆಗಳನ್ನು ಪರಿಶೀಲನೆ ಮಾಡಿ ಕಳ್ಳತನ ಮಾಡಲಾಗಿತ್ತಿದೆ.

Crime News: ಬೈಕ್ ಮೇಲೆ ಬಂದು ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿ
ಸರ ದೋಚಿ ಕಳ್ಳರು ಪರಾರಿ
Follow us on

ವಿಜಯನಗರ: ಬೈಕ್ ಮೇಲೆ ಬಂದು ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿಯಾದಂತಹ ಘಟನೆ ಹೊಸಪೇಟೆಯ ಆಕಾಶವಾಣಿಯ ಮದಕರಿ ಶಾಲೆಯ ಮುಂಭಾಗದ ರಸ್ತೆಯಲ್ಲಿ ನಡೆದಿದೆ. ವಾಯು ವಿಹಾರ ಮುಗಿಸಿಕೊಂಡು ಮನೆಗೆ ಮರಳುವ ವೇಳೆ ಕೃತ್ಯವೆಸಗಲಾಗಿದೆ. ಶಾರದಾ ಕುರಂದವಾಡ್ ( 62 ) ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ. ಕಳ್ಳರು ಮಾಂಗಲ್ಯ ಸರ ಕಿತ್ತುಕೊಂಡು ಹೋದ ರಭಸಕ್ಕೆ ಗೃಹಿಣಿ ನೆಲಕ್ಕೆ ಬಿದಿದ್ದಾರೆ. ಕಳ್ಳರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಹೊಸಪೇಟೆ ಪಟ್ಟಣ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಸ್ಮಾರ್ಟ್ ಸಿಟಿಯಲ್ಲಿ ಸ್ಮಾರ್ಟ್ ಕಳ್ಳರು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದ್ದು, ಡೀಸೆಂಟ್ ಡ್ರೆಸ್​ನಲ್ಲಿ ಬಂದು ಮನೆಗಳನ್ನು ಪರಿಶೀಲನೆ ಮಾಡಿ ಕಳ್ಳತನ ಮಾಡಲಾಗಿತ್ತಿದೆ. ಸ್ಮಾರ್ಟ್ ಸಿಟಿಯಲ್ಲಿ ಸ್ಮಾರ್ಟ್ ಕಳ್ಳರು, ಹಗಲು ರಾತ್ರಿ ಇಲ್ಲದೆ ಏರಿಯಾದಲ್ಲಿ ಕಳ್ಳತನಗಳು ಆಗುತ್ತಿವೆ. ಮನೆಯೊಳಗೆ ಇದ್ದ ವಾಟರ್ ಸಂಪುವಿನ ಮೇಲೆ ಹಾಕಿದ ಕಪ್​ನ್ನು ಕಳ್ಳತನ ಮಾಡಲಾಗಿದೆ. ಹಾಗೂ ಮನೆಯೊಳಗೆ ಇದ್ದ ಗ್ಯಾಸ್ ಸಿಲಿಂಡರ್ ಬೀಗ ಹೊಡೆದು ಕಳ್ಳತನ ಮಾಡಲಾಗಿದೆ. ಮನೆಯ ಮುಂದೆ ವಾಕ್ ಮಾಡುತ್ತಾ ಸೈಕಲ್​ನ್ನು ಕಳ್ಳರು ಕದ್ದು ಹೋಗಿದ್ದಾರೆ. ಇನ್ನೂ ರಾತ್ರಿ ವೇಳೆ ಆಟೋದಲ್ಲಿ ಓರ್ವ ಯುವಕನಿಂದ ಕಳ್ಳತನ ಮಾಡಿದ್ದು, ಪೆಟ್ಟಿ ಅಂಗಡಿಯನ್ನು ಹೊಡೆದು ಕಳ್ಳತನ ಮಾಡಲಾಗಿದೆ. ಕಳ್ಳತನ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳ್ಳರ ಹಾವಳಿನಿಂದಾಗಿ ಬಿ,ಟಿ,ಎಂ, ಜನರು ಬೇಸತ್ತು ಹೋಗಿದ್ದಾರೆ.

ಮೂವತ್ತು ಸಾವಿರಕ್ಕೂ ಅಧಿಕ ಮೀನುಗಳ ಮಾರಣಹೋಮ

ಹಾಸನ: ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿದ್ದು, ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸಾವಪ್ಪಿರುವಂತಹ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮುದುಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಿರೆಕೆರೆಯಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಮೀನುಗಳ ಮಾರಣಹೋಮವಾಗಿದೆ. ಕೆರೆ ಟೆಂಡರ್ ಪಡೆದು ಎರಡು ಲಕ್ಷ ಮೀನಿನ ಮರಿಗಳನ್ನು ಬಿಟ್ಟಿದ್ದ ಗುತ್ತಿಗೆದಾರರು, ಮುದುಡಿ ತಾಂಡ್ಯ ಮತ್ತು ಹಲಗನಹಳ್ಳಿ ಗ್ರಾಮಸ್ಥರು ಗುತ್ತಿಗೆ ಪಡೆದು ಮೀನು ಸಾಕಾಣಿಕೆ ಮಾಡಿದ್ದರು. ಕಿಡಿಗೇಡಿಗಳು ರಾತ್ರಿ ಕೆರೆಗೆ ವಿಷ ಬೆರೆಸಿದ್ದು, ಕೆರೆ ದಡದಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಗುತ್ತಿಗೆದಾರ ಒತ್ತಾಯಿಸಿದ್ದಾರೆ. ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.