ಅಪ್ಪು ಇಷ್ಟು ಬೇಗ ಯಾಕೆ ಹೋದ್ರು ಗೊತ್ತಾ? ಅವ ಎಲ್ಲವನ್ನೂ ಬೇಗ ಮಾಡಿ ಮುಗಿಸ್ದ, ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾವುಕರಾದ ರಾಘವೇಂದ್ರ ರಾಜಕುಮಾರ್

ಮುಂದಿನ ಪಿಳಿಗೆಯವರು ಅಪ್ಪು ಪುತ್ಥಳಿ ಯಾಕೆ ಎಂದು ಕೇಳಿದರೆ ಅದಕ್ಕೆ ಮಾದರಿಯಾಗಿ ಅಪ್ಪು ಅಶಯಗಳೊಂದಿಗೆ ಅಭಿಮಾನಿಗಳು ಹಾಗೂ ಸಂಘಸಂಸ್ಥೆಗಳು ಪರಿಸರ ಕಾಪಾಡುವುದು ಹಾಗೂ ಮಾನವೀಯ ಸಮಾಜ ಸೇವೆಯಲ್ಲಿ ಮಾದರಿಯಾಗಿರಬೇಕು ಎಂದು ನಟ ರಾಘವೇಂದ್ರ ರಾಜಕುಮಾರ್ ಹೇಳಿದರು.

ಅಪ್ಪು ಇಷ್ಟು ಬೇಗ ಯಾಕೆ ಹೋದ್ರು ಗೊತ್ತಾ? ಅವ ಎಲ್ಲವನ್ನೂ ಬೇಗ ಮಾಡಿ ಮುಗಿಸ್ದ, ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾವುಕರಾದ ರಾಘವೇಂದ್ರ ರಾಜಕುಮಾರ್
ರಾಘವೇಂದ್ರ ರಾಜಕುಮಾರ್
Follow us
TV9 Web
| Updated By: ಆಯೇಷಾ ಬಾನು

Updated on:Jun 05, 2022 | 10:52 PM

ವಿಜಯನಗರ: ನಗರದ ತಾಲೂಕು ಕಚೇರಿ ಸಮೀಪದಲ್ಲಿ ಅವರದೇ ಹೆಸರಿನ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣಗೊಳಿಸಲಾಗಿದೆ. ನಟ ರಾಘವೇಂದ್ರ ರಾಜಕುಮಾರ್ ತಮ್ಮ ತಮ್ಮನ ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮನನ್ನು ನೆನೆದು ಭಾವುಕರಾದ್ರು.

ಮುಂದಿನ ಪಿಳಿಗೆಯವರು ಅಪ್ಪು ಪುತ್ಥಳಿ ಯಾಕೆ ಎಂದು ಕೇಳಿದರೆ ಅದಕ್ಕೆ ಮಾದರಿಯಾಗಿ ಅಪ್ಪು ಅಶಯಗಳೊಂದಿಗೆ ಅಭಿಮಾನಿಗಳು ಹಾಗೂ ಸಂಘಸಂಸ್ಥೆಗಳು ಪರಿಸರ ಕಾಪಾಡುವುದು ಹಾಗೂ ಮಾನವೀಯ ಸಮಾಜ ಸೇವೆಯಲ್ಲಿ ಮಾದರಿಯಾಗಿರಬೇಕು ಎಂದು ನಟ ರಾಘವೇಂದ್ರ ರಾಜಕುಮಾರ್ ಹೇಳಿದರು. ಇದನ್ನೂ ಓದಿ: ಕರಣ್ ಜೋಹರ್ ಪಾರ್ಟಿ ಎಫೆಕ್ಟ್​; ಶಾರುಖ್​, ಕತ್ರಿನಾಗೆ ಕೊರೊನಾ ಪಾಸಿಟಿವ್

ಹೊಸಪೇಟೆಯಲ್ಲಿ ನಟ ದಿವಂಗತ ಪುನೀತ್ ರಾಜಕುಮಾರ್ ಅವರ 7.4 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಭಾನುವಾರ ಅನಾವರಣಗೊಳಿಸಿ ಮತನಾಡಿದ ಅವರು, ಅಭಿಮಾನಿಗಳಾದ ನಾವುಗಳು ಮೊದಲು ಸಮಾಧಾನ ಮಾಡಿಕೊಳ್ಳಬೇಕು. ನಿಮ್ಮನ್ನು ಸಮಾಧಾನ ಮಾಡಿ ನಾನು ಕೂಡ ಸಮಾಧಾನ ಮಾಡಿಕೊಳ್ಳುವ ಎಂದು ಇಲ್ಲಿ ಬಂದಿರುವೆ. ಈ ವೇದಿಕೆಯನ್ನು ಏನೆಂದು ಕರೆಯೋಣ? ಅಭಿಮಾನಿಗಳ ಹೆಮ್ಮೆಯ ವೇದಿಕೆ ಎಂದು ಕರಿಯೋಣ ಅಥವಾ ಹೆಮ್ಮೆಯ ವೇದಿಕೆ ಎಂದು ಕರಿಯೋಣ? ನೀವೇ ಹೇಳಿ. ಅಪ್ಪು ಹೇಳಿದರು ಹೊಸಪೇಟೆ ಜನ ನಮ್ಮನ್ನು ಕೈ ಬಿಡಲ್ಲ ಎಂದು, ನಾವು ಕೂಡ ನಿಮ್ಮ ಕೈ ಬಿಡಲ್ಲ. ನಿಮ್ಮೆಲ್ಲ ಒಂದು ಪ್ರಶ್ನೆ ಇದೆ ಅಪ್ಪು ಯಾಕೆ ಇಷ್ಟು ಬೇಗ ಹೋದರು ಎಂದು. ಅವರಿಗೆ ಎಲ್ಲಾ ಬೇಗನೇ ಆಯಿತು. ಶಾಲೆಗೆ ಹೋಗೊ ವಯಸ್ಸಿನಲ್ಲಿ ಸ್ಟೋಡಿಯೋಗೆ ಹೋದರು. ಪದ್ಯ ಹೇಳುವ ವಯಸ್ಸಿನಲ್ಲಿ ಹಾಡು ಹೇಳುತ್ತಿದ್ದರು. ಸಣ್ಣ ಪುಟ್ಟ ವೇದಿಕೆಯಲ್ಲಿ ಸನ್ಮಾನ ಮಾಡಿಸಿಕೊಳ್ಳುವ ವೇಳೆ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಎಲ್ಲಾವೂ ಬೇಗ ಆಯಿತು ಎಂದು ನಟ ರಾಘವೇಂದ್ರ ರಾಜಕುಮಾರ್ ಭಾವುಕರಾದರು.

Raghavendra Rajkumar gets emotional in Puneeth Rajkumar statue inauguration function in hospet vijayanagara ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪುನೀತ್ ಆಶಯಗಳನ್ನು ನಾವು ಪ್ರಪಂಚಕ್ಕೆ ಸಾರೋಣಾ ನನ್ನನು ಅವರು ಆಡಿಯೋ ಟೀಸರ್ ಬಿಡುಗಡೆ ಮಾಡಲು ಕಡೆಯುತ್ತಿದ್ದ ಅಪ್ಪು, ಅವರ ಪುತ್ಥಳಿಯನ್ನು ಬಿಡುಗಡೆ ಕರೆದಿದ್ದಿರಾ ನಾನು ಇರಬೇಕಾ? ನಿಮಗೆ ಸಂತೋಷ ಆಗಿದೆಯಾ? ಅವರು ಸಣ್ಣ ವಯಸ್ಸಿನಲ್ಲಿ ಎಲ್ಲವನ್ನು ಮಾಡಿ ಮುಗಿಸಿದ್ದಾರೆ. ಸಿನಿಮಾ ನೋಡೋಕೆ ಅಲ್ಲ, ಪುತ್ಥಳಿ ಕಟ್ಟೊಕೆ ಅಲ್ಲ. ಪರಿಸರ ದಿನಾಚರಣೆ ದಿನ ಅವರ ಪುತ್ಥಳಿ ಅನಾವರಣ ಮಾಡಿದ್ದೆವೆ. ಅವರ ಆಶಯಗಳು ಅರಣ್ಯ ಹಾಗೂ ಕಾಡು ಪ್ರಾಣಿಗಳನ್ನು ಕಾಪಾಡುವುದು. ಮಾನವೀಯತೆ ಸೇವೆ ಮಾಡುವುದು. ಅದರಂತೆ ಅವರ ಆಶಯಗಳನ್ನು ನಾವುಗಳು ಈಡೇರಿಸಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇಲ್ಲಿನ 3.5 ರಿಂದ 4 ಲಕ್ಷ ಜನಸಂಖ್ಯೆ ಇದ್ದಿರು, ಅದರಲ್ಲಿ ಅಪ್ಪು ಅಭಿಮಾನಿಗಳು 2.5 ಲಕ್ಷ ಜನರಿಲ್ವ, ಅದಂರತೆ ಪ್ರತಿಯೊಬ್ಬರು ಪರಿಸರ ದಿನಾಚರಣೆಯಲ್ಲಿ ಒಂದೊಂದು ಸಸಿ ನೆಟ್ಟರೆ 2.5 ಲಕ್ಷ ಮರ ಬೆಳೆಯುತ್ತದೆ. ಅದನ್ನೆ ಅಪ್ಪು ಅವರು ಹೇಳಲು ಬಂದಿದ್ದರು. ಆದರೆ ದೇವರು ಆ ಅವಕಾಶ ನೀಡಲಿಲ್ಲ. ತರ್ತು ಪರಿಸ್ಥಿತಿಯಲ್ಲಿ ಜನ ಅಪ್ಪು ಅಭಿಮಾನಿಗಳಿಗೆ ರಕ್ತ ಕೇಳಲು ಬರಬೇಕು. ಅಂತ ಸೇವೆ ಮಾಡಿದರೆ ಅಪ್ಪುಗೆ ಶಾಂತಿ ಸಿಗುತ್ತದೆ. ಅವರ ಆಶಯಗಳನ್ನು ಇದನ್ನು ಪ್ರಪಂಚಕ್ಕೆ ತಿಳಿಸಬೇಕಿದೆ. ಅವರ ಆಶಯಗಳನ್ನು ಪ್ರಪಂಚಕ್ಕೆ ತಿಳಿಸುವ ಕಾರ್ಯಕ್ಕೆ ನಮ್ಮನ್ನು ಸೇರಿಕೊಂಡು ಎಲ್ಲಾರೂ ಮಾದರಿಯಾಗಬೇಕಿದೆ ಎಂದರು. ಇದನ್ನೂ ಓದಿ: World Environment day 2022: ಬಾಲ್ಯದ ಶ್ರೀಮಂತ ನೈಸರ್ಗಿಕ ಜೀವನದ ಸವಿನೆನಪು

ನಮ್ಮ ತಂದೆ ಹೋದಾಗ ಅನಾಥ ಎಂದು ಅನಿಸಲಿಲ್ಲ. ಅಮ್ಮ ಹೋದಾಗ ತಬ್ಬಲಿ ಎಂದು ಅನಿಸಲಿಲ್ಲ. ಅಪ್ಪು ಹೋದಾಗ ಎರಡು ಅನಿಸಿತು. ಹೊಸಪೇಟೆಗೆ ನಾವು ಮತ್ತೆ ಮತ್ತೆ ಆಗಾಗ ಬರುತ್ತೇನೆ. ಅಭಿಮಾನಿಗಳು ಎಲ್ಲಿ ಕರಿತಾರೋ ಅಲ್ಲಿ ನಾನು ಬರುತ್ತೆನೆ. ಅಪ್ಪು ಆಶಯಗಳನ್ನು ಈಡೇರಿಸೊಣ ಎಂದರು. ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾತನಾಡಿ, ಪವರ್ ಸ್ಟಾರ್ ಅಪ್ಪು ಅವರ ಅಭಿಮಾನ ಹೊಸಪೇಟೆಯಲ್ಲಿ ಕಿಂಚ್ಚಿತ್ತು ಕಡಿಮೆಯಾಗಿಲ್ಲ. ಹೊಸಪೇಟೆಯಲ್ಲಿ ಅಪ್ಪುಗೆ ದೇವರು ಮಾಡಿದ್ದಿರಿ. ಅವರು ನಮ್ಮ ನೆನಪಲ್ಲೆ ಇರುವ ಅಪ್ಪು ನಮ್ಮಿಂದ ದೂರವಾಗಿಲ್ಲ. ಹೊಸಪೇಟೆ ಎಂದರೆ ಅಪ್ಪು ಅಡ್ಡ. ಅಪ್ಪು ಅಭಿಮಾನಿಗಳು ಪ್ರತಿಯೊಬ್ಬರು ಹೃದಯವಂತರು ಎಂದರು.

raghavendra rajkumar

ರಾಘವೇಂದ್ರ ರಾಜಕುಮಾರ್

ನಟ ಕೃಷ್ಣ ಅಜಯ್‌ರಾವ್ ಮಾತನಾಡಿ, ಅಪ್ಪು ಅವರು ಮನೆ ದೇವರಿದ್ದಂಗೆ, ರಾಜಕುಮಾರ್ ಮನೆತನದ ದೇವರಿದ್ದಂಗೆ. ನಾನು ಇದೇ ಊರಿನವನು ನನ್ನ ಊರಿನಲ್ಲಿ ಅಪ್ಪು ಪುತ್ಥಳಿ ಅನಾವರಣ ಮಾಡಿದ್ದಾರೆ. ರಾಜಕುಮಾರ್ ಕುಟುಂಬಕ್ಕೆ ಸ್ವಾಗತ ನೀಡಲು ಈ ಮಣ್ಣಿನಲ್ಲಿನ ನಾನೊಬ್ಬ ನಾಗರೀಕ. ಪುನೀತ್ ರಾಜ್‌ಕುಮಾರ್ ಅವರಷ್ಟು ಮಟ್ಟಕ್ಕೆ ಬೆಳೆಯದಿದ್ದರು ಅಲ್ಪನಾದರೂ ಸಾಧಿಸಲು ನಾವು ಪ್ರಯತ್ನಿಸೋಣ ಎಂದರು. ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಅನಾವರಣಗೊಳಿಸುತ್ತಿದ್ದಂತೆ ಮಂಗಳ ರಾಘವೇಂದ್ರ ಸೇರಿ ಇತರರು ಭಾವುಕರಾದರು. ಪುತ್ಥಳಿ ಅನಾವರಣಗೊಳಿಸುತ್ತಿದ್ದಂತೆ ಅಭಿಮಾನಿಗಳು ಘೋಷಣೆ ಕೂಗಿ ಕುಣಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸಿದರು. ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್, ಯುವ ನಾಯಕ ಸಿದಾರ್ಥಸಿಂಗ್, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹುಡಾಧ್ಯಕ್ಷ ಅಶೋಕ್ ಜೀರೆ ಇದ್ದರು. ಇದನ್ನೂ ಓದಿ: ಹೊಸಪೇಟೆಯಲ್ಲಿ ಪುನೀತ್ ಅಭಿಮಾನಿಗಳಿಂದ 7.4 ಅಡಿ ಎತ್ತರದ ಪುತ್ಥಳಿ ಅನಾವರಣ; ನೆಲಮುಟ್ಟಿ ನಮಸ್ಕರಿಸಿದ ರಾಘವೇಂದ್ರ ರಾಜಕುಮಾರ್

Published On - 10:40 pm, Sun, 5 June 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ