ರಾಮುಲು ಆಸಕ್ತಿ ವಹಿಸಿ ರಾಯಲ್ ವೃತ್ತದಲ್ಲಿ ಆರಂಭಿಸಿದ್ದ ಲೆಬೆನಾನ್ ಕ್ಲಾಕ್ ಟವರ್ ನಿರ್ಮಾಣಕ್ಕೆ ಕಾಂಗ್ರೆಸ್​​ ಸರ್ಕಾರದಿಂದ ಬ್ರೇಕ್

| Updated By: ಸಾಧು ಶ್ರೀನಾಥ್​

Updated on: Jul 20, 2023 | 1:14 PM

ಮಾಜಿ ಸಚಿವ ಬಿ ಶ್ರೀರಾಮುಲು ಆಸಕ್ತಿವಹಿಸಿ ಆರಂಭಿಸಿದ್ದ ಕ್ಲಾಕ್ ಟವರ್ ಕಾಮಗಾರಿಗೆ ಕಾಂಗ್ರೆಸ್​​ ಸರ್ಕಾರ ಇದೀಗ ಬ್ರೇಕ್ ಹಾಕಿ ಕಾಮಗಾರಿಯನ್ನ ಅರ್ಧಕ್ಕೆ ಸ್ಥಗಿತಗೊಳಿಸಿದೆ. ಅವೈಜ್ಞಾನಿಕ ಕಾಮಗಾರಿ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆಧಾರದ ಮೇರೆಗೆ ನೂತನ ಸರ್ಕಾರ ಕ್ಲಾಕ್ ಟವರ್ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದೆ.

ರಾಮುಲು ಆಸಕ್ತಿ ವಹಿಸಿ ರಾಯಲ್ ವೃತ್ತದಲ್ಲಿ ಆರಂಭಿಸಿದ್ದ ಲೆಬೆನಾನ್ ಕ್ಲಾಕ್ ಟವರ್ ನಿರ್ಮಾಣಕ್ಕೆ ಕಾಂಗ್ರೆಸ್​​ ಸರ್ಕಾರದಿಂದ ಬ್ರೇಕ್
ಕ್ಲಾಕ್ ಟವರ್ ನಿರ್ಮಾಣಕ್ಕೆ ಕಾಂಗ್ರೆಸ್​​ ಸರ್ಕಾರದಿಂದ ಬ್ರೇಕ್
Follow us on

ಅದು ವಿದೇಶಿ ಮಾದರಿಯ ಟವರ್. 100 ಅಡಿಗೂ ಎತ್ತರದ ಆ ಕ್ಲಾಕ್ ಟವರ್ ನಿರ್ಮಾಣಕ್ಕಾಗಿ ಈಗಾಗಲೇ ಕೋಟಿ ಕೋಟಿ ಅನುದಾನ ಬಿಡುಗಡೆಯಾಗಿದೆ. ಆದ್ರೆ ಆ ಕ್ಲಾಕ್ ಟವರ್ ನಿರ್ಮಾಣ ಕಾಮಗಾರಿ ಮಾತ್ರ ಅರ್ಧಕ್ಕೆ ಸ್ಥಗಿತಗೊಂಡಿದೆ. ಹೊಸ ಸರ್ಕಾರ ಬರುವ ಮುನ್ನ ಜೋರಾಗಿ ನಡೆಯುತ್ತಿದ್ದ ಕಾಮಗಾರಿ ಇದೀಗ ಏಕಾಎಕಿ ಸ್ಥಗಿತಗೊಂಡಿದೆ. ಅಷ್ಟಕ್ಕೂ ಆ ಟವರ್ ನಿರ್ಮಾಣ ಕಾಮಗಾರಿ ನಿಂತಿದ್ಯಾಕೆ. ವಿದೇಶಿ ಮಾದರಿಯ ಕ್ಲಾಕ್ ಟವರ್ (Lebanon Clock Tower) ನಿರ್ಮಾಣಕ್ಕೆ ಅಡ್ಡಿಯಾಗಿದಾದ್ರು ಯಾಕೆ ಅನ್ನೋ ಸ್ಟೋರಿ ಇಲ್ಲಿದೆ ನೋಡಿ. ಫೋಟೋದಲ್ಲಿ ಕಂಗೊಳಿಸುತ್ತಿರುವ ಕ್ಲಾಕ್ ಟವರ್. ವಿದೇಶಿ ಮಾದರಿಯ ಈ ಟವರ್ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತ. ಬಾನಂಗಳದೆತ್ತರಕ್ಕೆ ಕಟ್ಟುತ್ತಿರುವ ಕ್ಲಾಕ್ ಟವರ್ ಕಾಮಗಾರಿಗೆ ಬ್ರೇಕ್. 7 ಕೋಟಿ ರೂ ವೆಚ್ಚದ ವಿದೇಶಿ ಮಾದರಿಯ ಕ್ಲಾಕ್ ಟವರ್ ಕಾಮಗಾರಿ ಅರ್ಧಕ್ಕೆ ಸ್ಥಗಿತ. ಅರ್ಧ ನಿರ್ಮಾಣವಾಗಿ ಸ್ಥಗಿತಗೊಂಡಿರುವ ಗಡಿಯಾರ ಗೋಪುರ. ಯೆಸ್! ಗಣಿ ನಾಡು ಬಳ್ಳಾರಿಯಲ್ಲಿ ನಿರ್ಮಾಣವಾಗುತ್ತಿರುವ ಗಡಿಯಾರ ಗೋಪುರ ಅರ್ಧಕ್ಕೆ ಸ್ಥಗಿತವಾಗಿರುವ ದೃಶ್ಯಗಳಿವು (Ballari City Municipal Corporation).

ಇದು ಬಳ್ಳಾರಿಯ ಗಡಗಿ ಚೆನ್ನಪ್ಪ ವೃತ್ತ (Gadagi Chennappa Circle). ರಾಯಲ್ ವೃತ್ತವೆಂದೇ (Royal Circle) ಹೆಸರುವಾಸಿಯಾಗಿರುವ ಈ ಗಡಿಗಿ ಚೆನ್ನಪ್ಪ ಸರ್ಕಲ್ ಗೆ ಐತಿಹಾಸಿಕ ಇತಿಹಾಸವಿದೆ. 1964ರಲ್ಲೆ ಸ್ಪಾಪನೆಯಾದ ಗಡಗಿ ಚೆನ್ನಪ್ಪ ವೃತ್ತ ಸಾಕಷ್ಟು ಹೋರಾಟಗಳಿಗೆ ವೇದಿಕೆಯಾದ ಸ್ಥಳವಾಗಿದೆ. ಆದ್ರೆ 2008ರಲ್ಲಿ ಗಡಗಿ ಚೆನ್ನಪ್ಪ ವೃತ್ತದಲ್ಲಿನ ಗಡಿಯಾರ ಗೋಪುರವನ್ನ ಕೆಲ ದುಷ್ಕಮಿಗಳು ಧ್ವಂಸಗೊಳಿಸಿದ್ರು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಇದೇ ಸರ್ಕಲ್ ನಲ್ಲಿ ಕ್ಲಾಕ್ ಟವರ್ ನಿರ್ಮಿಸಿತ್ತು.

ಸಿದ್ದರಾಮಯ್ಯ ಸರ್ಕಾರದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನಗರದ ಹೃದಯಭಾಗದಲ್ಲಿರುವ ರಾಯಲ್ ವೃತ್ತದಲ್ಲಿ ವಿದೇಶಿ ಮಾದರಿಯಲ್ಲಿ ಕ್ಲಾಕ್ ಟವರ್ ನಿರ್ಮಾಣಕ್ಕೆ ಮುಂದಾಗಿತ್ತು. 7 ಕೋಟಿ ರೂಪಾಯಿ ವೆಚ್ಚದಲ್ಲಿ ಲೆಬೆನಾನ್ ದೇಶದ ಮಾದರಿಯ ಕ್ಲಾಕ್ ಟವರ್ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಚಾಲನೆ ನೀಡಿತ್ತು. ಕಾಮಗಾರಿ ಸಹ ಭರದಿಂದ ಸಾಗಿತ್ತು. ಆದ್ರೆ ಕಾಮಗಾರಿ ಭರದಿಂದ ಸಾಗಿದ ವೇಳೆಯೇ ಕ್ಲಾಕ್ ಟವರ್ ನಿರ್ಮಾಣ ಕಾರ್ಯಕ್ಕೆ ವಿಘ್ನ ಎದುರಾಗಿದೆ. ಮಾಜಿ ಸಚಿವ ಬಿ ಶ್ರೀರಾಮುಲು ಆಸಕ್ತಿವಹಿಸಿ ಆರಂಭಿಸಿದ್ದ ಕ್ಲಾಕ್ ಟವರ್ ಕಾಮಗಾರಿಗೆ ಕಾಂಗ್ರೆಸ್​​ ಸರ್ಕಾರ ಇದೀಗ ಬ್ರೇಕ್ ಹಾಕಿ ಕಾಮಗಾರಿಯನ್ನ ಅರ್ಧಕ್ಕೆ ಸ್ಥಗಿತಗೊಳಿಸಿದೆ. ಅವೈಜ್ಞಾನಿಕ ಕಾಮಗಾರಿ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆಧಾರದ ಮೇರೆಗೆ ನೂತನ ಸರ್ಕಾರ ಕ್ಲಾಕ್ ಟವರ್ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿ ಅನುದಾನ ಬಿಡುಗಡೆಯನ್ನ ಸ್ಥಗಿತಗೊಳಿಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀರಾಮುಲು (Former Transport Minister and Ballari in-charge B. Sriramulu) ಸಾಕಷ್ಟು ಆಸಕ್ತಿವಹಿಸಿ ಕ್ಲಾಕ್ ಟವರ್ ನಿರ್ಮಾಣಕ್ಕೆ ಮುಂದಾಗಿದ್ದರು. ಆದ್ರೆ 7 ಕೋಟಿ ವೆಚ್ಚದಲ್ಲಿ ಸ್ಪಾಪನೆಯಾಗುತ್ತಿದ್ದ 120 ಅಡಿ ಎತ್ತರದ ಕ್ಲಾಕ್ ಟವರ್ ನಿರ್ಮಾಣ ಕಾಮಗಾರಿಯನ್ನ ನೂತನ ಕಾಂಗ್ರೇಸ ಸರ್ಕಾರ ತಡೆಹಿಡಿದಿದೆ. ಕ್ಲಾಕ್ ಟವರ್ ನಿರ್ಮಾಣ ಕಾಮಗಾರಿ ಅವೈಜ್ಲಾನಿಕವಾಗಿದೆ ಅನ್ನೋ ಕಾರಣ ನೀಡಿ ಇದೀಗ ಕಾಮಗಾರಿಯನ್ನ ಕಾಂಗ್ರೇಸ ಸರ್ಕಾರ ಸ್ಥಗಿತಗೊಳಿಸಿದೆ. ಕಾಂಗ್ರೆಸ್ ಸರ್ಕಾರದ ನಿರ್ಧಾರ ಇದೀಗ ಬಿಜೆಪಿ ನಾಯಕರ ಆಕ್ರೋಶಕ್ಕೂ ಕಾರಣವಾಗಿದೆ. ಹಿಂದಿನ ಸರ್ಕಾರ ಎಲ್ಲ ರೀತಿಯಾಗಿ ಪರಿಶೀಲನೆ ನಡೆಸಿ, ರಸ್ತೆ ಅಗಲೀಕರಣಗೊಳಿಸಿ ಕ್ಲಾಕ್ ಟವರ್ ನಿರ್ಮಾಣ ಮಾಡುತ್ತಿತ್ತು. ನೂತನ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ತಕ್ತಪಡಿಸಿದೆ. ಅಲ್ಲದೇ ಕ್ಲಾಕ್ ಟವರ್ ನಿರ್ಮಾಣವನ್ನ ಕೂಡಲೇ ಮುಂದುವರಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಶ್ರೀರಾಮುಲು ಹಠಕ್ಕೆ ಬಿದ್ದು ಆರಂಭಿಸಿದ್ದ ಕ್ಲಾಕ್ ಟವರ್ ನಿರ್ಮಾಣ ಕಾಮಗಾರಿಯನ್ನ ಇದೀಗ ಕಾಂಗ್ರೆಸ್ ಸರ್ಕಾರ ಅರ್ಧಕ್ಕೆ ಸ್ಥಗಿತಗೊಳಿಸಿರುವುದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ರೆ ರಸ್ತೆ ಅಗಲೀಕರಣ ಮಾಡದೇ, ಅವೈಜ್ಲಾನಿಕವಾಗಿ ಕ್ಲಾಕ್ ಟವರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳ್ತಿದ್ದಾರೆ.

ಹೀಗಾಗಿ ಸಾಕಷ್ಟು ಹೋರಾಟಗಳಿಗೆ ವೇದಿಕೆಯಾಗಿದ್ದ ಗಡಗಿ ಚೆನ್ನಪ್ಪ ವೃತ್ತದಲ್ಲಿನ ಕ್ಲಾಕ್ ಟವರ್ ನಿರ್ಮಾಣ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹೋರಾಟಕ್ಕೆ ಕಾರಣವಾದ್ರೆ ಜನಸಾಮಾನ್ಯರು ರಾಯಲ್ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಪರದಾಡುವಂತಾಗಿದೆ. ಇನ್ನಾದ್ರು ಕ್ಲಾಕ್ ಟವರ್ ಕಾಮಗಾರಿಯ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಟ್ರಾಫಿಕ್ ಜಾಮ್ ಸಮಸ್ಯೆಯನ್ನ ಪರಿಹರಿಸಲು ಮುಂದಾಗಲಿ ಅನ್ನೋದು ಬಳ್ಳಾರಿ ಜನರ ಆಶಯವಾಗಿದೆ.

ಬಳ್ಳಾರಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:13 pm, Thu, 20 July 23