ಹಂಪಿ ಉತ್ಸವದಲ್ಲಿ ಕುಡಿದ ಮತ್ತಿನಲ್ಲಿ ಯುವಕರ ಪುಂಡಾಟ

ಬಳ್ಳಾರಿ: ಹೊಸಪೇಟೆ ತಾಲೂಕಿನ ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಲಾಟೆಯಾಗಿದೆ. ಮದ್ಯದ ನಶೆಯಲ್ಲಿ ಇದ್ದ ಯುವಕರು ತಮ್ಮ ಶರ್ಟ್‌ ಬಿಚ್ಚಿ ತೂರಾಡುತ್ತಾ ಗಲಾಟೆ ಮಾಡಿದ್ದಾರೆ. ಬ್ಯಾರಿಕೇಡ್‌ಗಳನ್ನು ತಳ್ಳಿ ವೇದಿಕೆಯತ್ತ ನುಗ್ಗಲು ಯತ್ನ ಮಾಡಿದ್ದಾರೆ. ಹಾಗಾಗಿ ನಶೆಯಲ್ಲಿದ್ದವರನ್ನು ನಿಯಂತ್ರಿಸಲು ಲಘು ಲಾಠಿಚಾರ್ಜ್ ನಡೆದಿದೆ. ಉತ್ಸವದಲ್ಲಿ ಸಿಂಗರ್ ನೀತಿ ಮೋಹನ್ ಹಾಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ. ಜೋಶ್​ಗೆ ಮೈಮೇಲಿನ ಬಟ್ಟೆ ಬಿಚ್ಚಿ ತೂರಾಡುತ್ತ ಕುಳಿದಾಡಿದ್ದಾರೆ ಇದರಿಂದ ಮುಂದೆ ಕುಳಿತಿದ್ದ ಯುವತಿ ಮಹಿಳೆಯರಿಗೆ ಇರಿಸುಮುರಿಸಾಗಿದೆ. ಬ್ಯಾರಿಕೇಡ್‌ಗಳನ್ನು ತಳ್ಳಿ ವೇದಿಕೆಯತ್ತ ನುಗ್ಗಲು ಕೆಲ […]

ಹಂಪಿ ಉತ್ಸವದಲ್ಲಿ ಕುಡಿದ ಮತ್ತಿನಲ್ಲಿ ಯುವಕರ ಪುಂಡಾಟ
ಸಾಧು ಶ್ರೀನಾಥ್​

Updated on: Jan 12, 2020 | 7:34 AM

ಬಳ್ಳಾರಿ: ಹೊಸಪೇಟೆ ತಾಲೂಕಿನ ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಲಾಟೆಯಾಗಿದೆ. ಮದ್ಯದ ನಶೆಯಲ್ಲಿ ಇದ್ದ ಯುವಕರು ತಮ್ಮ ಶರ್ಟ್‌ ಬಿಚ್ಚಿ ತೂರಾಡುತ್ತಾ ಗಲಾಟೆ ಮಾಡಿದ್ದಾರೆ. ಬ್ಯಾರಿಕೇಡ್‌ಗಳನ್ನು ತಳ್ಳಿ ವೇದಿಕೆಯತ್ತ ನುಗ್ಗಲು ಯತ್ನ ಮಾಡಿದ್ದಾರೆ. ಹಾಗಾಗಿ ನಶೆಯಲ್ಲಿದ್ದವರನ್ನು ನಿಯಂತ್ರಿಸಲು ಲಘು ಲಾಠಿಚಾರ್ಜ್ ನಡೆದಿದೆ.

ಉತ್ಸವದಲ್ಲಿ ಸಿಂಗರ್ ನೀತಿ ಮೋಹನ್ ಹಾಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ. ಜೋಶ್​ಗೆ ಮೈಮೇಲಿನ ಬಟ್ಟೆ ಬಿಚ್ಚಿ ತೂರಾಡುತ್ತ ಕುಳಿದಾಡಿದ್ದಾರೆ ಇದರಿಂದ ಮುಂದೆ ಕುಳಿತಿದ್ದ ಯುವತಿ ಮಹಿಳೆಯರಿಗೆ ಇರಿಸುಮುರಿಸಾಗಿದೆ. ಬ್ಯಾರಿಕೇಡ್‌ಗಳನ್ನು ತಳ್ಳಿ ವೇದಿಕೆಯತ್ತ ನುಗ್ಗಲು ಕೆಲ ಯುವಕರು ಪ್ರಯತ್ನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲ ಯುವಕರನ್ನು ವಶಕ್ಕೆ ಪಡೆದಿದ್ದಾರೆ.

Published On - 7:31 am, Sun, 12 January 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us