ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಭಾಗದಲ್ಲಿಂದು ನಡೆದ ‘ಜೋಡೋ’ಯಾತ್ರೆಯಲ್ಲಿ(Bharat Jodo Yatra) ಕಾರ್ಯಕರ್ತರಿಗೆ ಕರೆಂಟ್ ಶಾಕ್ ಹೊಡೆದಿದೆ. ಕಬ್ಬಿಣದ ಪೈಪ್ನಲ್ಲಿ ಬಾವುಟ ಹಿಡಿದು ಹೋಗುವಾಗ ಕಬ್ಬಿಣದ ಪೈಪ್ಗೆ ವಿದ್ಯುತ್ ತಂತಿ ತಗುಲಿ ಐವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆಂಟ್ ಶಾಕ್ ಹೊಡೆದಿದೆ. ಆ್ಯಂಬುಲೆನ್ಸ್ನಲ್ಲಿ ಮೋಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯಕರ್ತರನ್ನು ಶಿಫ್ಟ್ ಮಾಡಲಾಗಿದೆ. ಆಸ್ಪತ್ರೆಗೆ ಶಾಸಕ ನಾಗೇಂದ್ರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಕಾರ್ಯಧ್ಯಕ್ಷ ಸಲೀಂ ಆಹಮ್ಮದ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ನಾವೆಲ್ಲ ಆರೋಗ್ಯವಾಗಿದ್ದೇವೆ ಕರೆಂಟ್ ಹೊಡೆದದ್ದು ನಿಜ ಆದ್ರೇ ಈಗ ಆರೋಗ್ಯವಾಗಿದ್ದೇವೆ ಎಂದು ಕರೆಂಟ್ ಹೊಡಿಸಿಕೊಂಡ ಕಾರ್ಯಕರ್ತ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಗೆ ಡಿಕೆಶಿ, ಸಿದ್ದರಾಮಯ್ಯ ನೆನಪಿಸಿಕೊಳ್ಳದಿದ್ರೆ ನಿದ್ದೆ ಬರಲ್ಲ
ಬಳ್ಳಾರಿ ತಾಲೂಕಿನ ಮೋಕಾದಲ್ಲಿ ಬಳ್ಳಾರಿ ಭಾರತ್ ಜೋಡೋ ಪಾದಯಾತ್ರೆ ವೇಳೆ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೆಪಿಗೆ ಡಿಕೆಶಿ, ಸಿದ್ದರಾಮಯ್ಯ ನೆನಪಿಸಿಕೊಳ್ಳದಿದ್ರೆ ನಿದ್ದೆ ಬರಲ್ಲ. ಜೆಪಿಯವರು ನಿತ್ಯ ನಮ್ಮಿಬ್ಬರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಐಕ್ಯತಾ ಯಾತ್ರೆಗೆ ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಬಿಜೆಪಿಯವರು ಈಗ ಜನಸ್ಪಂದನ ಯಾತ್ರೆ ಮಾಡ್ತಿದ್ದಾರೆ. ಅಂದರೆ ಬಿಜೆಪಿಗೆ ಇಷ್ಟು ದಿನ ಜನರ ಸ್ಪಂದನ ಇರಲಿಲ್ವಾ? ಜನ ಈ ಸರ್ಕಾರವನ್ನ ಕಿತ್ತೊಗೆಯುವ ಸಂಕಲ್ಪ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ನಿಶ್ಚಿತ ಎಂದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು
ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ ಕಾರ್ಯಕರ್ತರಿಗೆ ಪರಿಹಾರ
ಇನ್ನು ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಪರಿಹಾರ ಘೋಷಿಸಿದ್ದಾರೆ. ಆಸ್ಪತ್ರೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಐವರು ಕಾರ್ಯಕರ್ತರಿಗೆ ತಲಾ 1 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಬಳ್ಳಾರಿಯಲ್ಲಿ ನಿನ್ನೆ ಕಾಂಗ್ರೆಸ್ ಸಮಾವೇಶ ಸರ್ಕಸ್ ಥರ ಇತ್ತು
ಬಳ್ಳಾರಿ ನಗರದಲ್ಲಿ ಸಾರಿಗೆ ಖಾತೆ ಸಚಿವ ಶ್ರೀರಾಮುಲು ಕಾಂಗ್ರೆಸ್ ಸಮಾವೇಶಕ್ಕೆ ವ್ಯಂಗ್ಯವಾಡಿದ್ದಾರೆ. ಬಳ್ಳಾರಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಸಮಾವೇಶ ಸರ್ಕಸ್ ಥರ ಇತ್ತು. ಸಿದ್ದರಾಮಯ್ಯ ಸರ್ಕಸ್ ಕಂಪನಿಯ ಜೋಕರ್ ಥರ ಕಾಣ್ತಿದ್ರು. ಸಮಾವೇಶದಲ್ಲಿ ಅವರು ಉತ್ತರಕುಮಾರನ ರೀತಿ ಕಂಡು ಬಂದರು. ಪಿಎಂ ಮೋದಿ, ಅಮಿತ್ ಶಾ, ಬೊಮ್ಮಾಯಿ ಹೆಸರು ಪ್ರಸ್ತಾಪಿಸಿದ್ರು. ಮೂವರು ನಾಯಕರ ಹೆಸರು ಬಿಟ್ಟು ಮಾತನಾಡಲು ಬರಲಿಲ್ಲ. ಒಂದು ತರಹ ಚಕ್ರವ್ಯೂಹದಲ್ಲಿ ಸಿಲುಕಿದಂತೆ ಕಂಡು ಬಂದರು ಎಂದು ಬಳ್ಳಾರಿ ನಗರದಲ್ಲಿ ಸಾರಿಗೆ ಖಾತೆ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಪಾಪದ ಕೊಡ ತುಂಬಿ ತುಳುಕುತ್ತಿದೆ. ಮುಂದಿನ ಚುನಾವಣೆಯೇ ಅವರ ಕೊನೆಯ ಚುನಾವಣೆ ಆಗಲಿದೆ. ಸಿದ್ದರಾಮಯ್ಯನವರನ್ನು ಈ ಬಾರಿ ಜನರು ಮನೆಗೆ ಕಳಿಸುತ್ತಾರೆ. ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ ಶಕುನಿ ಇದ್ದಂತೆ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಫಿಟ್ನೆಸ್ ಪ್ರದರ್ಶನವಾಗುತ್ತಿದೆ: ಶೋಭಾ ಕರಂದ್ಲಾಜೆ
Published On - 12:57 pm, Sun, 16 October 22