Hosapete: ಸಚಿವ ಆನಂದ್ ಸಿಂಗ್ ಪುತ್ರಿಯ ಅದ್ಧೂರಿ ಆರತಕ್ಷತೆಯಲ್ಲಿ ಕೃತಕ ಅರಮನೆ ಸೃಷ್ಟಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 10, 2022 | 10:07 AM

ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಪುತ್ರಿಯ ಅದ್ಧೂರಿ ಆರತಕ್ಷತೆ ನೆರವೇರಿದ್ದು, ಕೃತಕ ಅರಮನೆ ಸೃಷ್ಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ವಿಜಯನಗರ: ಜಿಲ್ಲೆಯ ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಪುತ್ರಿಯ ಅದ್ಧೂರಿ ಆರತಕ್ಷತೆ ನಡೆದಿದೆ. ನಗರದ ಭಟ್ರಹಳ್ಳಿ ಆಂಜನೇಯ ದೇಗುಲದ ಬಳಿ ಆರತಕ್ಷತೆಗಾಗಿ ಕೃತಕ ಅರಮನೆ ಸೃಷ್ಟಿಸಿರುವ ಸಚಿವ ಆನಂದ ಸಿಂಗ್. ಉತ್ತರ ಹಾಗೂ ದಕ್ಷಿಣ ಭಾರತದ ವಾಸ್ತುಶಿಲ್ಪದ ಶೈಲಿಯ ಐತಿಹಾಸಿಕ ಕೋಟೆ ಮಾದರಿಯ ವೇದಿಕೆಯನ್ನು ನಿರ್ಮಾಣ ಮಾಡಿದ್ದಾರೆ. 6 ಸಾವಿರಕ್ಕೂ ಅಧಿಕ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಇನ್ನು ಡಿ.5 ರಂದು ರಾಜಸ್ಥಾನದ ಜೈಪುರದ ಪಿಂಕ್ ಪ್ಯಾಲೇಸ್‌‌ನಲ್ಲಿ ಸಚಿವ ಆನಂದ ಸಿಂಗ್ ಪುತ್ರಿ ವೈಷ್ಣವಿ ಸಿಂಗ್ ಜೊತೆ ಯಶೋರಾಜ್ ಸಿಂಗ್ ಜಾಧೋನ್​ರವರ ಅದ್ದೂರಿ ವಿವಾಹವಾಗಿತ್ತು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ