ಬಳ್ಳಾರಿ: ಜಿಲ್ಲಾಡಳಿತದ ಎಡವಟ್ಟಿನಿಂದ ವಿದ್ಯಾರ್ಥಿಗಳು (Students) ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಏಕಾಏಕಿ ಹಾಸ್ಟೆಲ್ಗಳನ್ನ (Hostels) ಬಂದ ಮಾಡಿದ ಹಿನ್ನೆಲೆ ದಿಕ್ಕು ತೋಚದೆ ನೂರಾರು ವಿದ್ಯಾರ್ಥಿಗಳು ಬೀದಿಯಲ್ಲಿ ಅಲೆದಾಟ ನಡೆಸುತ್ತಿದ್ದಾರೆ. ಹಾಸ್ಟೆಲ್ಗಳಲಿದ್ದ ಕೆಲ ವಿದ್ಯಾರ್ಥಿಗಳು ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಲಾಡ್ಜ್ಗಳ ಮೊರೆ ಹೋಗಿದ್ದಾರೆ. ಸದ್ಯ ಇಂದು (ಜ.16) ವೀಕೆಂಡ್ ಕರ್ಫ್ಯೂ (Weekend Curfew) ಹಿನ್ನೆಲೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ಕೆಲ ವಿದ್ಯಾರ್ಥಿಗಳು ಏನು ಮಾಡಬೇಕೆಂದು ತೋಚದೆ ಬೀದಿಯಲ್ಲಿ ಅಲೆಯುತ್ತಿದ್ದಾರೆ.
ಬಳ್ಳಾರಿಯಲ್ಲಿ ಪ್ರತ್ಯೇಕ ಗೈಡ್ಲೈನ್ಸ್ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಪ್ರತ್ಯೇಕ ಮಾರ್ಗಸೂಚಿ ಜಾರಿಗೊಳಿಸಿದೆ. ಜನವರಿ 31ರವರೆಗೆ ಮಾರ್ಗಸೂಚಿ ಜಾರಿಯಲ್ಲಿರುತ್ತದೆ. ಜಿಲ್ಲೆಯಲ್ಲಿ ರಾತ್ರಿ 8 ಗಂಟೆಯಿಂದ ಮುಂಜಾನೆ 6ರವರೆಗೆ ನೈಟ್ ಕರ್ಫ್ಯೂ ಜಾರಿ ಇರುತ್ತದೆ. ರಾತ್ರಿ 8ರಿಂದ ಮುಂಜಾನೆ 6ರವರೆಗೆ ಎಲ್ಲವೂ ಬಂದ್ ಆಗುತ್ತವೆ. ದೇವಸ್ಥಾನ, ಚರ್ಚ್, ಮಸೀದಿ ಎಲ್ಲ ಬಂದ್ ಮಾಡುವಂತೆ ಜಿಲ್ಲಾಡಳಿತ ಆದೇಶ ನೀಡಿದೆ. ಯಾವುದೇ ರೀತಿ ಪ್ರಾರ್ಥನೆ, ಪೂಜೆ ಮಾಡಲು ಅವಕಾಶವಿಲ್ಲ. ರಂಗಮಂದಿರ ಸೇರಿದಂತೆ ಖಾಸಗಿ ಪಾರ್ಟಿಗೆ ಅವಕಾಶ ಇಲ್ಲ. ಮದುವೆ ಸಮಾರಂಭಗಳಿಗೆ ಕೇವಲ 50 ಜನರಿಗೆ ಅವಕಾಶ ನೀಡಿದ್ದು, ಗ್ರಾಮೀಣ ಭಾಗದಲ್ಲಿ 1-10ನೇ ತರಗತಿವರೆಗೆ ಶಾಲ್ ಬಂದ್ ಮಾಡಲಾಗಿದೆ.
ಹೊರ ರಾಜ್ಯದಿಂದ ಬಳ್ಳಾರಿಗೆ ಬಂದ ನೂರಾರು ವಿದ್ಯಾರ್ಥಿಗಳು ಹರಿಯಾಣದಿಂದ ಬಳ್ಳಾರಿಗೆ ನೂರಾರು ವಿದ್ಯಾರ್ಥಿಗಳ ಆಗಮಿಸಿದ್ದಾರೆ. ಕೊವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದೆ ಬಳ್ಳಾರಿಗೆ ಆಗಮಿಸಿದ್ದು, ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕೇವಲ 2 ಡೋಸ್ ಲಸಿಕೆ ಪಡೆದ ಸರ್ಟಿಫಿಕೆಟ್ ಮಾತ್ರ ವಿದ್ಯಾರ್ಥಿಗಳ ಬಳಿ ಇದೆ. ಆದರೆ ಕೊವಿಡ್ ನೆಗೆಟಿವ್ ರಿಪೋರ್ಟ್ ಇಲ್ಲ. ನರ್ಸಿಂಗ್ ಎಕ್ಸಾಂ ಇದೆ ಅಂತ ವಿದ್ಯಾರ್ಥಿಗಳು ಬಂದಿದ್ದಾರೆ. ಸದ್ಯ ವಿದ್ಯಾರ್ಥಿಗಳು ಲಾಡ್ಜ್‌ಗಳಲ್ಲಿ ತಂಗಿದ್ದಾರೆ.
ಇದನ್ನೂ ಓದಿ
ಗದಗ ರಾಜೀವ್ ಗಾಂಧಿ ಆಯುರ್ವೇದ ಕಾಲೇಜಿನಲ್ಲಿ 30 ವಿದ್ಯಾರ್ಥಿಗಳಿಗೆ ಕೊರೊನಾ! ಹರಿಯಾಣದಿಂದ ಬಳ್ಳಾರಿಗೆ ಬಂದ ನೂರಾರು ವಿದ್ಯಾರ್ಥಿಗಳು
Covid 19: ದೇಶದಲ್ಲಿ ಒಂದೇ ದಿನ 2,71,202 ಕೊರೊನಾ ಪ್ರಕರಣಗಳು ದಾಖಲು; ಸೋಂಕಿನಿಂದ 314 ಜನರ ಸಾವು
Published On - 12:32 pm, Sun, 16 January 22