ವೀಕೆಂಡ್ ಕರ್ಪ್ಯೂನಿಂದ ವ್ಯಾಪಾರ ವಿಲ್ಲದೆ ಅಜ್ಜಿಯ ಪರದಾಟ; ಟಿವಿ9 ವರದಿ ಕಂಡು ಸಹಾಯಕ್ಕೆ ಮುಂದಾದ ಬಳ್ಳಾರಿ ನಿವಾಸಿ
ಬಳ್ಳಾರಿ ಬಸ್ ನಿಲ್ದಾಣದ ಮುಂಭಾಗ ಹಣ್ಣಿನ ವ್ಯಾಪಾರ ಮಾಡುತ್ತಿರುವ ಸಂಧ್ಯಾಬಾಯಿ, ಮುಂಜಾನೆ ಇಂದ ಕೂತರು ವ್ಯಾಪಾರ ಆಗಿಲ್ಲ ಎಂದು ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದರು. ಇವರ ನೋವನ್ನು ಆಲಿಸಿದೆ ತಾಜುದ್ದೀನ್ 15 ಕೆ.ಜಿ ಅಕ್ಕಿ, 2 ಕೆ.ಜಿ.ತೊಗರಿಬೇಳೆ, ಒಳ್ಳೆಎಣ್ಣೆ, ಸಕ್ಕರೆ ಸೇರಿ ಒಂದು ತಿಂಗಳಿಗೆ ಬೇಕಾಗಿರುವ ರೇಷನ್ ನೀಡಿದ್ದಾರೆ.
ಬಳ್ಳಾರಿ: ಕೊರೊನಾ ಮೂರನೇ ಅಲೆ ಮತ್ತು ಒಮಿಕ್ರಾನ್ (Omicron) ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದೆ. ಆದರೆ ಕೊರೊನಾ ಮೊದಲ ಅಲೆ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಜಾರಿಗೆ ತಂದ ಲಾಕ್ಡೌನ್ನಿಂದಾಗಿ (Lockdown) ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಇನ್ನೂ ಕೂಡ ಜನರು ಇದರಿಂದ ಹೊರಬಂದಿಲ್ಲ. ಹೀಗಿರುವಾಗಲೇ ಮತ್ತೆ ವಿಕೆಂಡ್ ಕರ್ಫ್ಯೂ (Weekend curfew) ಜಾರಿಯಾಗಿದೆ. ಸದ್ಯ ಇದರಿಂದ ಬೀದಿ ಬದಿ ವ್ಯಾಪಾರಿಗಳ ವಹಿವಾಟಿಗೆ ಮತ್ತೆ ಕೊಡಲಿ ಏಟು ಬಿದ್ದಂತೆ ಆಗಿದೆ. ಅದರಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಾರವಿಲ್ಲದೆ ಅಜ್ಜಿ ಪರದಾಟ ನಡೆಸುವಂತಾಗಿದ್ದು, ಇದನ್ನು ಟಿವಿ9ನಲ್ಲಿ ವರದಿ ಮಾಡಲಾಗಿತ್ತು. ಇದನ್ನು ನೋಡಿದ ಬಳ್ಳಾರಿ ನಗರದ ನಿವಾಸಿ ತಾಜುದ್ದೀನ್ ಅಜ್ಜಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಅಜ್ಜಿಯ ಕಷ್ಟ ಅರಿತ ತಾಜುದ್ದೀನ್ ಒಂದು ತಿಂಗಳಿಗೆ ಆಗುವಷ್ಟು ರೇಷನ್ ನೀಡಿದ್ದಾರೆ. ಬಳ್ಳಾರಿ ಬಸ್ ನಿಲ್ದಾಣದ ಮುಂಭಾಗ ಹಣ್ಣಿನ ವ್ಯಾಪಾರ ಮಾಡುತ್ತಿರುವ ಸಂಧ್ಯಾಬಾಯಿ, ಮುಂಜಾನೆ ಇಂದ ಕೂತರು ವ್ಯಾಪಾರ ಆಗಿಲ್ಲ ಎಂದು ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದರು. ಇವರ ನೋವನ್ನು ಆಲಿಸಿದೆ ತಾಜುದ್ದೀನ್ 15 ಕೆ.ಜಿ ಅಕ್ಕಿ, 2 ಕೆ.ಜಿ.ತೊಗರಿಬೇಳೆ, ಒಳ್ಳೆಎಣ್ಣೆ, ಸಕ್ಕರೆ ಸೇರಿ ಒಂದು ತಿಂಗಳಿಗೆ ಬೇಕಾಗಿರುವ ರೇಷನ್ ನೀಡಿದ್ದಾರೆ.
ನಾನು 40 ವರ್ಷಗಳಿಂದ ಹಣ್ಣಿನ ವ್ಯಾಪಾರ ಮಾಡುತ್ತಿದ್ದೇನೆ. ಇವತ್ತು ಮುಂಜಾನೆ ಇಂದ ಕುತರೂ 100 ರೂಪಾಯಿ ವ್ಯಾಪಾರ ಆಗಿರಲಿಲ್ಲ. ಮಕ್ಕಳಿದ್ರೂ ನೋಡಲ್ಲ. ನಾನೇ ದುಡಿದು ನಾನೇ ತಿನಬೇಕು. ಟಿವಿ9 ನವರು ಬಂದು ಹೋಗಿದ್ರು, ಇದೀಗ ತಾಜುದ್ದೀನ್ ಅಕ್ಕಿ, ಬೇಳೆ ತಂದಿದ್ದಾರೆ. ಅವರು ಖುಷಿಯಾಗಿರಲಿ, ದೇವರು ಚೆನ್ನಾಗಿಟ್ಟಿರಲಿ. ಬಹಳ ಕಷ್ಟ ಆಗಿತ್ತು. ನಮಗೆ ದೇವರ ತರಹ ಬಂದು ರೇಷನ್ ಕೊಟ್ಟಿದ್ದಾರೆ. ನಾನು ಮೊಮ್ಮಕ್ಕಳು ಎಲ್ಲರೂ ಊಟ ಮಾಡುತ್ತೀ ವಿಎಂದು ಸಂಕಷ್ಟಕ್ಕೆ ಸಿಲುಕಿದ ಅಜ್ಜಿ ಸಂಧ್ಯಾಬಾಯಿ ಅಭಿಪ್ರಾಯಪಟ್ಟಿದ್ದಾರೆ.
ವೀಕೆಂಡ್ ಕರ್ಪ್ಯೂ ಹಿನ್ನಲೆ ಹಣ್ಣಿನ ವ್ಯಾಪಾರಿ ಅಜ್ಜಿ ಸಂಕಷ್ಟವನ್ನು ನಾನು ಟಿವಿ9 ನಲ್ಲಿ ನೋಡಿದೆ. ಅಜ್ಜಿ ಸಂಕಷ್ಟ ಕೇಳಿ ಮನಸ್ಸು ಕರಗಿ ನಾನು ಸಹಾಯ ಮಾಡುತ್ತಿದ್ದೇನೆ. ಕಳೆದ ಎರಡು ಬಾರಿ ಲಾಕ್ಡೌನ್ ಅವಧಿಯಲ್ಲಿ ಬಡವರಿಗೆ ಸಹಾಯ ಮಾಡಿದ್ದೇನೆ. ಈ ಬಾರಿ ಮೊದಲ ಸಲ ಟಿವಿ9 ವರದಿ ನೋಡಿ ಅಜ್ಜಿಗೆ ಸಹಾಯ ಮಾಡುತ್ತಿದ್ದು, ಒಂದು ತಿಂಗಳಿಗೆ ಅಗೋ ಅಷ್ಟು ರೇಶನ್ ಕೊಡಿಸುತ್ತಿದ್ದೇನೆ. ಲಾಕ್ಡೌನ್ ಹಾಗೂ ಕರ್ಪ್ಯೂನಿಂದ ಅನೇಕ ಜನ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ಅವರಿಗೆ ಸಹಾಯ ಮಾಡಬೇಕು. ಅಲ್ಲದೆ ಕೊರೊನಾ ಹೆಚ್ಚಳ ಇರುವ ಜಿಲ್ಲೆಯಲ್ಲಿ ಮಾತ್ರ ವೀಕೆಂಡ್ ಕರ್ಪ್ಯೂ ಅಥವಾ ಲಾಕ್ಡೌನ್ ಮಾಡಬೇಕು. ಅಜ್ಜಿಗೆ ಸುಮಾರು 2000 ರೂಪಾಯಿ ಅಕ್ಕಿ, ತೊಗರಿ ಬೇಳೆ, ಅಡುಗೆ ಎಣ್ಣೆ, ಸಕ್ಕರೆ ಕೊಡಿಸಿದ್ದೇನೆ ಎಂದು ಸಹಾಯ ಮಾಡಿದ ತಾಜುದ್ದೀನ್ ತಿಳಿಸಿದ್ದಾರೆ.
ಇದನ್ನೂ ಓದಿ: 2022ರಲ್ಲಿ ನೀವು ಹೆಚ್ಚು ಲಾಂಗ್ ವೀಕೆಂಡ್ಗಳನ್ನು ಪಡೆಯಬಹುದು: ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
Weekend Curfew: ಕರ್ನಾಟಕದಲ್ಲಿ 2ನೇ ವಾರದ ವೀಕೆಂಡ್ ಕರ್ಫ್ಯೂ: ರಸ್ತೆಗಳಿದ ಪೊಲೀಸರಿಂದ ಅಂಗಡಿ, ಮುಂಗಟ್ಟು ಬಂದ್
Published On - 1:32 pm, Sat, 15 January 22