Coronavirus: ಬೆಂಗಳೂರು ಅಪಾರ್ಟ್​ಮೆಂಟ್ ನಿವಾಸಿಗಳಿಗೆ ಕೊರೊನಾ ಮಾರ್ಗಸೂಚಿ ಬಿಡುಗಡೆ, ಕೊಪ್ಪಳ ಗವಿಮಠ ಜಾತ್ರೆ ರದ್ದು

Covid19 Guidelines: 7 ದಿನಗಳ ಕಾಲ ಕಂಟೇನ್ಮೆಂಟ್ ಜೋನ್​ ಎಂದು ಘೋಷಣೆ ಮಾಡಬೇಕು. ಅಪಾರ್ಟ್​ಮೆಂಟ್​ನ ಎಲ್ಲ ನಿವಾಸಿಗಳಿಗೆ ಕೊವಿಡ್ ಟೆಸ್ಟ್ ಮಾಡಿಸಬೇಕು ಎಂದು ಬಿಬಿಎಂಪಿಯಿಂದ ಅಪಾರ್ಟ್​ಮೆಂಟ್ ನಿವಾಸಿಗಳಿಗೆ ಗೈಡ್​ಲೈನ್ಸ್ ಬಿಡುಗಡೆ ಮಾಡಲಾಗಿದೆ.

Coronavirus: ಬೆಂಗಳೂರು ಅಪಾರ್ಟ್​ಮೆಂಟ್ ನಿವಾಸಿಗಳಿಗೆ ಕೊರೊನಾ ಮಾರ್ಗಸೂಚಿ ಬಿಡುಗಡೆ, ಕೊಪ್ಪಳ ಗವಿಮಠ ಜಾತ್ರೆ ರದ್ದು
ಸಾಂದರ್ಭಿಕ ಚಿತ್ರ


ಬೆಂಗಳೂರು: ಬೆಂಗಳೂರು ನಗರದಲ್ಲಿ ಅಪಾರ್ಟ್​ಮೆಂಟ್ ನಿವಾಸಿಗಳಿಗೆ ಕೊರೊನಾ ಗೈಡ್​ಲೈನ್ಸ್ ಬಿಡುಗಡೆ ಮಾಡಲಾಗಿದೆ. ಅದರಂತೆ ಮೂವರಿಗೆ ಕೊರೊನಾ ದೃಢಪಟ್ಟರೆ ಕಂಟೇನ್ಮೆಂಟ್ ಜೋನ್​ ಮಾಡಬೇಕು. ಇಡೀ ಅಪಾರ್ಟ್​ಮೆಂಟ್ ಕಂಟೇನ್ಮೆಂಟ್ ಎಂದು ಘೋಷಣೆ ಮಾಡಬೇಕು. 7 ದಿನಗಳ ಕಾಲ ಕಂಟೇನ್ಮೆಂಟ್ ಜೋನ್​ ಎಂದು ಘೋಷಣೆ ಮಾಡಬೇಕು. ಅಪಾರ್ಟ್​ಮೆಂಟ್​ನ ಎಲ್ಲ ನಿವಾಸಿಗಳಿಗೆ ಕೊವಿಡ್ ಟೆಸ್ಟ್ ಮಾಡಿಸಬೇಕು ಎಂದು ಬಿಬಿಎಂಪಿಯಿಂದ ಅಪಾರ್ಟ್​ಮೆಂಟ್ ನಿವಾಸಿಗಳಿಗೆ ಗೈಡ್​ಲೈನ್ಸ್ ಬಿಡುಗಡೆ ಮಾಡಲಾಗಿದೆ.

ಕೊರೊನಾ ಹಿನ್ನೆಲೆ ಕೊಪ್ಪಳದ ಗವಿಮಠ ಜಾತ್ರೆ ರದ್ದು

ಕೊರೊನಾ ಹಿನ್ನೆಲೆ ಕೊಪ್ಪಳದ ಗವಿಮಠ ಜಾತ್ರೆ ರದ್ದು ಮಾಡಲಾಗಿದೆ. ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಖ್ಯಾತಿ ಪಡೆದ ಕೊಪ್ಪಳದ ಗವಿಮಠ ಜಾತ್ರೆಯನ್ನು ಕೊರೊನಾ ಹೆಚ್ಚಳ ಹಾಗೂ ಸರ್ಕಾರದ ನಿಯಮಾವಳಿಗಳ ಹಿನ್ನೆಲೆ ರದ್ದುಗೊಳಿಸಿ ಆದೇಶಿಸಲಾಗಿದೆ. ಸಾಂಪ್ರದಾಯಿಕ ವಿಧಿ ವಿಧಾನಗಳು ಮಾತ್ರ ನಡೆಯುತ್ತದೆ ಎಂದು ಗವಿಮಠದ ಆಡಳಿತ ಮಂಡಳಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ತುಮಕೂರು ಜಿಲ್ಲೆಯಲ್ಲಿ 70 ಪೊಲೀಸ್ ಸಿಬ್ಬಂದಿಗೆ ಸೋಂಕು

ತುಮಕೂರು ಜಿಲ್ಲೆಯಲ್ಲಿ 70 ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಈವರೆಗೆ ಓರ್ವ ಇನ್ಸ್‌ಪೆಕ್ಟರ್‌, ಸಬ್ ಇನ್ಸ್‌ಪೆಕ್ಟರ್‌, ಪೊಲೀಸ್ ಸಿಬ್ಬಂದಿ ಸೇರಿ 70 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಸೋಂಕಿತ ಎಲ್ಲಾ ಪೊಲೀಸ್ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಈ ಬಗ್ಗೆ ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮಾಧ್ಯಮದವರಿಗೂ ಬೂಸ್ಟರ್​ ಡೋಸ್​ ನೀಡಲು ನಿರ್ಧಾರ

ಮಾಧ್ಯಮದವರಿಗೂ ಬೂಸ್ಟರ್​ ಡೋಸ್​ ನೀಡಲು ನಿರ್ಧರಿಸಿದ್ದೇವೆ. ಮಾಧ್ಯಮದವರು ನಮ್ಮೊಟ್ಟಿಗೆ ಹಗಲುರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೊವಿಡ್ ಫ್ರಂಟ್ ಲೈನ್ ವಾರಿಯರ್ಸ್​ ಎಂಬ ಕಾರಣಕ್ಕೆ ಡೋಸ್​ ನೀಡಲು ನಿರ್ಧರಿಸಿದ್ದೇವೆ. ಮಾಧ್ಯಮದವರಿಗೆ ಮೊದಲ ಹಂತದಲ್ಲೇ ಬೂಸ್ಟರ್ ಡೋಸ್​ ಲಸಿಕೆ ನೀಡುತ್ತೇವೆ ಎಂದು ಸುಧಾಕರ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಜನರ ಆರೋಗ್ಯ ಗಮನದಲ್ಲಿಟ್ಟು ಪಾದಯಾತ್ರೆ ಸ್ಥಗಿತ, ಕೊರೊನಾ ಕಡಿಮೆಯಾದ ಬಳಿಕ ಮತ್ತೆ ಪಾದಯಾತ್ರೆ: ಡಿಕೆ ಶಿವಕುಮಾರ್

ಇದನ್ನೂ ಓದಿ: ಶಾಲೆ-ಕಾಲೇಜುಗಳಲ್ಲಿ ಕೊರೊನಾ ಸ್ಫೋಟ; ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆ

Published On - 4:16 pm, Thu, 13 January 22

Click on your DTH Provider to Add TV9 Kannada