ಅನೈತಿಕ ಸಂಬಂಧ ಅನುಮಾನ; ಲೀವಿಂಗ್ ರಿಲೇಷನ್‌ಶಿಪ್ನಲ್ಲಿದ್ದ ಪ್ರಿಯತಮೆ ಕೊಂದ ಆರೋಪಿ ಅರೆಸ್ಟ್
ಮೂರು ದಿನಗಳ ಹಿಂದೆ ಕೋಣನಕುಂಟೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಕೋಣನಕುಂಟೆಯ ಬೀರೇಶ್ವರ ನಗರದಲ್ಲಿ ಗಂಡನಿಲ್ಲದ ಮಂಜುಳಾ(35) ಜೊತೆ ಮಂಜುನಾಥ್ ಲೀವಿಂಗ್ ರಿಲೇಷನ್‌ಶಿಪ್ನಲ್ಲಿದ್ದ. ಮಂಜುಳಾಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧವಿರೋದಾಗಿ ಅನುಮಾನಿಸಿ ಆಕೆಯನ್ನು ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದ.
ಬೆಂಗಳೂರು: ಲೀವಿಂಗ್ ರಿಲೇಷನ್‌ಶಿಪ್ನಲ್ಲಿದ್ದ ಪ್ರಿಯತಮೆ ಮೇಲೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ. ಮಂಜುಳಾ ಕೊಲೆಯಾದವರು. ಸದ್ಯ ಘಟನೆ ಸಂಬಂಧ ಆರೋಪಿ ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮೂರು ದಿನಗಳ ಹಿಂದೆ ಕೋಣನಕುಂಟೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಕೋಣನಕುಂಟೆಯ ಬೀರೇಶ್ವರ ನಗರದಲ್ಲಿ ಗಂಡನಿಲ್ಲದ ಮಂಜುಳಾ(35) ಜೊತೆ ಮಂಜುನಾಥ್ ಲೀವಿಂಗ್ ರಿಲೇಷನ್‌ಶಿಪ್ನಲ್ಲಿದ್ದ. ಮಂಜುಳಾಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧವಿರೋದಾಗಿ ಅನುಮಾನಿಸಿ ಆಕೆಯನ್ನು ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದ. ಸದ್ಯ ಕೋಣನಕುಂಟೆ ಠಾಣೆ ಪೊಲೀಸರು ಆರೋಪಿ ಮಂಜುನಾಥ್ನನ್ನು ಬಂಧಿಸಿದ್ದಾರೆ.
ಹೆಂಡತಿ ಅಸ್ವಸ್ಥಳಾಗಿದ್ದಾಳೆ ಎಂದು ಜಯನಗರದ ಖಾಸಗಿ ಆಸ್ಪತ್ರೆಗೆ ಶವ ಕೊಂಡೊಯ್ದು ಆರೋಪಿ ಡ್ರಾಮ ಮಾಡಿದ್ದ. ಮಂಜುಳಾ ಮೃತಪಟ್ಟಿರೋದಾಗಿ ವೈದ್ಯರು ಕನ್ಫರ್ಮ್ ಮಾಡುತ್ತಿದ್ದಂತೆ. ಆಸ್ಪತ್ರೆ ಹೊರಗೆ ಆಟೋದಲ್ಲೇ ಶವ ಬಿಟ್ಟು ಮಂಜುನಾಥ್ ಪರಾರಿಯಾಗಿದ್ದ. ವೈದ್ಯರ ಮಾಹಿತಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೋಣನಕುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಮಂಜುನಾಥ್ ಈ ಹಿಂದೆ ಮಳವಳ್ಳಿಯಲ್ಲಿ ಗಲಾಟೆ ಮಾಡ್ಕೊಂಡು ಜೈಲಿಗೆ ಹೋಗಿ ಬಂದಿದ್ದ. ಬೆಂಗಳೂರಿಗೆ ಬಂದು ಕಂಬಿ ಕೆಲಸ ಮಾಡ್ತಿದ್ದ. ಮೃತ ಮಂಜುಳಾಗೆ ಮದುವೆಯಾಗಿದ್ದು ಗಂಡ 2 ವರ್ಷಗಳ ಹಿಂದೆ ಕಾಣೆಯಾಗಿದ್ದ. ಆರೋಪಿ ಮಂಜುನಾಥ್ಗೆ ಲಕ್ಷ್ಮೀ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಇತ್ತು. ಅಲ್ಲದೆ ಮಂಜುಳಾ ಕೂಡ ಲಕ್ಷ್ಮಿಯ ಮನೆಗೆ ಆಗಾಗ ಬರ್ತಿದ್ದ ಕಾರಣ ಪರಿಚಯವಾಗಿತ್ತು. ಬಳಿಕ ಮಂಜುಳಾಳ ಮನವೊಲಿಸಿ ಬಾಡಿಗೆ ಮನೆ ಮಾಡಿ ಜೊತೆಗಿರಲಾಂಭಿಸಿದ್ದರು. ಮಂಜುಳಾಗೆ ಮದ್ಯಪಾನದ ಚಟ ಇತ್ತು. ಬಾಡಿಗೆ ಮನೆ ಮಾಡಿದ 15 ದಿನದಲ್ಲೇ ಅನುಮಾನ ಮೂಡಲಾರಂಭಿಸಿತ್ತು. ಮಂಜುಳಾಗೆ ಬೇರೆ ಸಂಬಂಧವಿರುವ ಬಗ್ಗೆ ಅನುಮಾನ ಬಂದು ಕಳೆದ ಗುರುವಾರ ರಾತ್ರಿ ಇದೇ ವಿಚಾರವಾಗಿ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿತ್ತು.
ಆರೋಪಿ ಮಂಜುನಾಥ್ ಜಗಳದ ವೇಳೆ ಮಂಜುಳಾಗೆ ಹಲ್ಲೆ ಮಾಡಿದ್ದ. ಪಕ್ಕೆಲುಬು, ತೊಡೆ ಮುರಿದು ಆಂತರಿಕ ರಕ್ತಸ್ರಾವದಿಂದ ಮಂಜುಳಾ ಮೃತಪಟ್ಟಿದ್ದಳು. ನಂತರ ಆಕೆ ಸಾವನ್ನಪ್ಪಿದ್ದು ಗೊತ್ತಾಗಿಯೇ ಶವಕ್ಕೆ ಸ್ನಾನ ಮಾಡಿಸಿ ಬಟ್ಟೆ ಬದಲಿಸಿ ಆಸ್ಪತ್ರೆಗೆ ಕರೆದೊಯ್ದು ಡ್ರಾಮ ಮಾಡಿದ್ದ.
ಪ್ರಿಯಕರನಿಂದಲೇ ಪ್ರೇಯಸಿಯ ಮೇಲೆ ಅತ್ಯಾಚಾರ ಆರೋಪ ಹುಬ್ಬಳ್ಳಿ: ಪ್ರೀತಿಯಲ್ಲಿ ಯಾವುದೇ ಕೆಟ್ಟ ಆಸೆಗಳಿರಲ್ಲ. ಅದೊಂದು ನಿಷ್ಕಲ್ಮಶ ಪವಿತ್ರ ಬಂಧನ ಎನ್ನತ್ತಾರೆ. ಆದ್ರೆ ಇಲ್ಲಿ ಪ್ರಿಯಕರನಿಂದಲೇ ಪ್ರೇಯಸಿಯ ಮೇಲೆ ಅತ್ಯಾಚಾರ ನಡೆದಿರುವ ಆರೋಪವೊಂದು ಕೇಳಿ ಬಂದಿದೆ. ಪ್ರೀತಿ, ಪ್ರೇಮ ಎಂಬ ಹೆಸರಲ್ಲಿ ಅಪ್ರಾಪ್ತೆಯನ್ನ ಪುಸಾಲಿಯಿಸಿ ಪ್ರಿಯಕರ ಅತ್ಯಾಚಾರ ಮಾಡಿರುವುದು ಬಯಲಾಗಿದೆ.
ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದ 17 ವರ್ಷದ ಅಪ್ರಾಪ್ತಳನ್ನು ಪ್ರೀತಿಸುತ್ತಿದ್ದ ಯುವಕ ಆಕೆಗೆ ಪುಸಲಾಯಿಸಿ ಜನವರಿ 10 ರಂದು ಮಧ್ಯಾಹ್ನ ನೇಕಾರ ನಗರ ಸೇತುವೆ ಸಮೀಪ ಕರೆಸಿಕೊಂಡಿದ್ದ. ಬಳಿಕ ಕಲಘಟಗಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತನ್ನ ಆಸೆಯನ್ನು ಬಿಚ್ಚಿಟ್ಟಿದ್ದ. ಈ ವೇಳೆ ಅಪ್ರಾಪ್ತೆ ವಿರೋಧ ವ್ಯಕ್ತಪಡಿಸಿದ್ದು ಒತ್ತಾಯಪೂರ್ವಕವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆಯ ತಾಯಿ ಆರೋಪ ಮಾಡಿದ್ದಾರೆ. ಸದ್ಯ ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Mekedatu Padayatra: ಪಾದಯಾತ್ರೆ ಮೊಟಕುಗೊಳಿಸಿದ ಕಾಂಗ್ರೆಸ್; ಹೈಕಮಾಂಡ್ ಆದೇಶಕ್ಕೆ ತಲೆಬಾಗಿದ ರಾಜ್ಯ ನಾಯಕರು
Published On - 12:39 pm, Thu, 13 January 22