ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯಗೆ ಬ್ಲ್ಯಾಕ್‌ಮೇಲ್ ಪ್ರಕರಣ: ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಅರೆಸ್ಟ್

ಆರೋಪಿ ಆನಂದ ಬೋಪಯ್ಯಗೆ ಕರೆ ಮಾಡಿ, ಹಣಕ್ಕೆ ಬೇಡಿಕೆ‌ಯಿಟ್ಟಿದ್ದ. ಬಂಧಿತ ಆರೋಪಿ ಆನಂದ್, ತುಮಕೂರು ಜಿಲ್ಲೆಯ ಕೊರಟಗೆರೆಯವನು. ಆರೋಪಿ ಆನಂದ್ ರೌಡಿ ಶೀಟರ್. ಎರಡು ಬಾರಿ ಕರೆ ಮಾಡಿ ಒಂದು ಕೋಟಿ ರೂ ನೀಡುವಂತೆ ಬೇಡಿಕೆಯಿಟ್ಟದ್ದ.

ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯಗೆ ಬ್ಲ್ಯಾಕ್‌ಮೇಲ್ ಪ್ರಕರಣ: ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಅರೆಸ್ಟ್
ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯಗೆ ಬ್ಲ್ಯಾಕ್‌ಮೇಲ್ ಪ್ರಕರಣ: ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಅರೆಸ್ಟ್

ಕೊಡಗು: ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯಗೆ ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಆನಂದ್ ಎಂಬಾತನನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬೋಪಯ್ಯಗೆ (Virajpet BJP MLA K.G. Bopaiah) ಕರೆ ಮಾಡಿ ಆಂಧ್ರಕ್ಕೆ ತೆರಳಿದ್ದ ಆರೋಪಿ ಆನಂದ ಬೆಂಗಳೂರಿಗೆ ವಾಪಸಾದಾಗ ಮಡಿಕೇರಿ ಪೊಲೀಸರ ತಂಡ ಆತನನ್ನು ಸೆರೆ ಹಿಡಿದಿದೆ.

ಆರೋಪಿ ಆನಂದ ಬೋಪಯ್ಯಗೆ ಕರೆ ಮಾಡಿ, ಹಣಕ್ಕೆ ಬೇಡಿಕೆ‌ಯಿಟ್ಟಿದ್ದ. ಬಂಧಿತ ಆರೋಪಿ ಆನಂದ್, ತುಮಕೂರು ಜಿಲ್ಲೆಯ ಕೊರಟಗೆರೆಯವನು. ಆರೋಪಿ ಆನಂದ್ ರೌಡಿ ಶೀಟರ್. ಎರಡು ಬಾರಿ ಕರೆ ಮಾಡಿ ಒಂದು ಕೋಟಿ ರೂ ನೀಡುವಂತೆ ಬೇಡಿಕೆಯಿಟ್ಟದ್ದ. ತಪ್ಪಿದ್ದಲ್ಲಿ ಎಸಿಬಿ ರೇಡ್ (Anti-Corruption Bureau -ACB) ಆಗುತ್ತೆ ಎಂದೂ ಬೆದರಿಕೆಯೊಡ್ಡಿದ್ದ ಆರೋಪಿ ಆನಂದ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಡಿಜಿ ಗೆ ವೀರಾಜಪೇಟೆಯ ಬಿಜೆಪಿ ಶಾಸಕ ಮತ್ತು ಮಾಜಿ‌ ಸ್ಪೀಕರ್ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದ್ದರು.

ಎರಡು ಕೋಟಿ ಮೌಲ್ಯದ ವಾಚ್ ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್ ಮಾಡಿದ ಇಂದಿರಾನಗರ ಪೊಲೀಸರು
ಬೆಂಗಳೂರು: ಐಶಾರಾಮಿ ವಾಚ್ಗಳನ್ನು ಕಳ್ಳತನ ಮಾಡ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದಿರಾನಗರದಲ್ಲಿರುವ ವಾಚ್ ಅಂಗಡಿಗಳಲ್ಲಿ ಕೋಟ್ಯಾಂತರ ರೂ ಬೆಲೆ ಬಾಳುವ ವಾಚ್ಗಳನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಓಸಿ ಅಖ್ತರ್ ಬಂಧಿತ ಆರೋಪಿ.

129 ರಾಡೋ ವಾಚ್, 29 ಲಾಂಜಿನ್, 13 ಒಮೇಗಾ ವಾಚ್ ಸೇರಿ ಎರಡು ಕೋಟಿ ಮೌಲ್ಯದ ವಾಚ್ಗಳನ್ನು ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ. ಇಂದಿರಾನಗರದ 100 ಫಿಟ್ ರಸ್ತೆಯಲ್ಲಿ ಶಾಮೋಯಿಲ್ ಎಂಬುವರು ಹಲವು ವರ್ಷಗಳಿಂದ ಸಿಮನ್ಸ್ ಟೈಮ್ಸ್ ಶಾಪ್ ಹೆಸರಿನಲ್ಲಿ‌ ದುಬಾರಿ ಮೌಲ್ಯದ ವಾಚ್ಗಳನ್ನು ಮಾರಾಟ ಮಾಡುತ್ತಿದ್ದರು. ಇದೇ ತಿಂಗಳ 4 ರಂದು ಅಂಗಡಿಗೆ ನುಗ್ಗಿದ್ದ ಅಖ್ತರ್ ರೋಲಿಂಗ್ ಶಟರ್ ಮುರಿದು ವಾಚ್ ದೋಚಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇನ್‌ಸ್ಪೆಕ್ಟರ್ ಹರೀಶ್, ಸಬ್ಇನ್ಸ್ಪೆಕ್ಟರ್ ಅಮರೇಶ್ ಜೇಗರಕಲ್‌ ನೇತೃತ್ವದಲ್ಲಿ‌ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಿಯಕರನಿಂದಲೇ ಪ್ರೇಯಸಿಯ ಮೇಲೆ ಅತ್ಯಾಚಾರ ಆರೋಪ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು
ಹುಬ್ಬಳ್ಳಿ: ಪ್ರೀತಿಯಲ್ಲಿ ಯಾವುದೇ ಕೆಟ್ಟ ಆಸೆಗಳಿರಲ್ಲ. ಅದೊಂದು ನಿಷ್ಕಲ್ಮಶ ಪವಿತ್ರ ಬಂಧನ ಎನ್ನತ್ತಾರೆ. ಆದ್ರೆ ಇಲ್ಲಿ ಪ್ರಿಯಕರನಿಂದಲೇ ಪ್ರೇಯಸಿಯ ಮೇಲೆ ಅತ್ಯಾಚಾರ ನಡೆದಿರುವ ಆರೋಪವೊಂದು ಕೇಳಿ ಬಂದಿದೆ. ಪ್ರೀತಿ, ಪ್ರೇಮ ಎಂಬ ಹೆಸರಲ್ಲಿ ಅಪ್ರಾಪ್ತೆಯನ್ನ ಪುಸಾಲಿಯಿಸಿ ಪ್ರಿಯಕರ ಅತ್ಯಾಚಾರ ಮಾಡಿರುವುದು ಬಯಲಾಗಿದೆ.

ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದ 17 ವರ್ಷದ ಅಪ್ರಾಪ್ತಳನ್ನು ಪ್ರೀತಿಸುತ್ತಿದ್ದ ಯುವಕ ಆಕೆಗೆ ಪುಸಲಾಯಿಸಿ ಜನವರಿ 10 ರಂದು ಮಧ್ಯಾಹ್ನ ನೇಕಾರ ನಗರ ಸೇತುವೆ ಸಮೀಪ ಕರೆಸಿಕೊಂಡಿದ್ದ. ಬಳಿಕ ಕಲಘಟಗಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತನ್ನ ಆಸೆಯನ್ನು ಬಿಚ್ಚಿಟ್ಟಿದ್ದ. ಈ ವೇಳೆ ಅಪ್ರಾಪ್ತೆ ವಿರೋಧ ವ್ಯಕ್ತಪಡಿಸಿದ್ದು ಒತ್ತಾಯಪೂರ್ವಕವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆಯ ತಾಯಿ ಆರೋಪ ಮಾಡಿದ್ದಾರೆ. ಸದ್ಯ ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Mekdatu Padayatre | ದೇವರಿಗೆ ಕೈ ಮುಗಿದು ಪಾದಯಾತ್ರೆಗೆ ಅಣಿಯಾದ ಡಿಕೆ ಸುರೇಶ್ | TV9 Kannada

Published On - 10:39 am, Thu, 13 January 22

Click on your DTH Provider to Add TV9 Kannada