AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಅಂತಾರಾಜ್ಯ ಕಳ್ಳ ಬಂಧನ; 16 ಲಕ್ಷ ಮೌಲ್ಯದ 21 ಬೈಕ್‌ಗಳು ವಶಕ್ಕೆ, ಸಾಲಬಾಧೆಯಿಂದ ದಂಪತಿ ನೇಣಿಗೆ ಶರಣು

ಜನರಿಗೆ ಹಣ ವಂಚಿಸಿ ಆಂಧ್ರಕ್ಕೆ ಎಸ್ಕೇಪ್ ಆಗಿದ್ದ ವಂಚಕ ಪಾಪಣ್ಣ ಅಲಿಯಾಸ್ ರೆಡ್ಡಿಯನ್ನು ದೂರಿನ ಮೆರೆಗೆ ವಶಕ್ಕೆ ಪಡೆಯಲಾಗಿದೆ. ಜಮೀನು ಮತ್ತು ಕಲ್ಯಾಣ ಮಂಟಪ ಮತ್ತು ಅಂಗಡಿ ಮುಂಗಟ್ಟುಗಳ ಬಳಿ ತನಿಖೆ ನಡೆಸಲಾಗಿದೆ.

Crime News: ಅಂತಾರಾಜ್ಯ ಕಳ್ಳ ಬಂಧನ; 16 ಲಕ್ಷ ಮೌಲ್ಯದ 21 ಬೈಕ್‌ಗಳು ವಶಕ್ಕೆ, ಸಾಲಬಾಧೆಯಿಂದ ದಂಪತಿ ನೇಣಿಗೆ ಶರಣು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jan 13, 2022 | 5:18 PM

Share

ಬೆಂಗಳೂರು: ಚೀಟಿ‌ ಹೆಸರಲ್ಲಿ ಹಣ ಕಟ್ಟಿದ ಜನರಿಗೆ ಮೋಸವಾದ ಘಟನೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಪಾಪಣ್ಣ ಅಲಿಯಾಸ್ ರೆಡ್ಡಿ ಎಂಬುವನಿಂದ ನಡೆದಿದೆ. ಸಾವಿರಾರು ರೂಪಾಯಿ ಹಣ ಕಟ್ಟಿದ್ರೆ ಲಕ್ಷ ಲಕ್ಷ ಬೆಲೆಯ ಗಿಪ್ಟ್ ಸಿಗುತ್ತೆ ಅಂತ ವಂಚನೆ ಮಾಡಲಾಗಿದೆ. ನೂರಾರು ಜನರಿಂದ ಒಂದು ಕೋಟಿಗೂ ಅಧಿಕ ಹಣಕಟ್ಟಿಸಿಕೊಂಡು ಉಂಡೆನಾಮ ಹಾಕಲಾಗಿದೆ. ಮೋಸ ಹೋದವರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಹಣ ಕಟ್ಟಿರೂ ಚೀಟಿ ಹಿಡಿದು 150 ಕ್ಕೂ ಅಧಿಕ ಜನರಿಂದ ದೂರು ನೀಡಲಾಗಿದೆ. ಕಷ್ಟಪಟ್ಟು ಕಟ್ಟಿರೋ ಹಣ ಕೊಡಿಸಿ ಅಂತ ದೂರು ನೀಡಿದ್ದಾರೆ. ಜನರ ಹಣದಿಂದ ಆಂಧ್ರದಲ್ಲಿ ಕಲ್ಯಾಣ ಮಂಟಪ, ಅಂಗಡಿ ಮುಂಗಟ್ಟು ಮತ್ತು ಜಮೀನು ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಜನರಿಗೆ ಹಣ ವಂಚಿಸಿ ಆಂಧ್ರಕ್ಕೆ ಎಸ್ಕೇಪ್ ಆಗಿದ್ದ ವಂಚಕ ಪಾಪಣ್ಣ ಅಲಿಯಾಸ್ ರೆಡ್ಡಿಯನ್ನು ದೂರಿನ ಮೆರೆಗೆ ವಶಕ್ಕೆ ಪಡೆಯಲಾಗಿದೆ. ಜಮೀನು ಮತ್ತು ಕಲ್ಯಾಣ ಮಂಟಪ ಮತ್ತು ಅಂಗಡಿ ಮುಂಗಟ್ಟುಗಳ ಬಳಿ ತನಿಖೆ ನಡೆಸಲಾಗಿದೆ.

ನಂದಗುಡಿ ಇನ್ಸಪೇಕ್ಟರ್ ರಂಗಸ್ವಾಮಿ ನೇತೃತ್ವದಲ್ಲಿ ತನಿಖೆ ಮಾಡಿದ್ದಾರೆ. ತನಿಖೆ ಕೈಗೊಳ್ತಿದ್ದಂತೆ ಮತ್ತಷ್ಟು ಜನರಿಂದ ವಂಚನೆ ಬಗ್ಗೆ ಪೊಲೀಸರಿಗೆ ದೂರು ಕೇಳಿಬಂದಿದೆ. ಈವರೆಗೂ 150 ಕ್ಕೂ ಅಧಿಕ‌ ಜನರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಎಲ್ಲರ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ಘಟನೆ ನಡೆದಿದೆ.

ಕಳ್ಳರನ್ನು ಹಿಡಿಯಲು ಸಹಕರಿಸಿದ ಟಿವಿ9ಗೆ ಧನ್ಯವಾದ: ಮಂಗಳೂರು ಪೊಲೀಸ್ ಕಮಿಷನರ್ ಕಳ್ಳರನ್ನು ಹಿಡಿಯಲು ಸಹಕರಿಸಿದ ಟಿವಿ9ಗೆ ಮಂಗಳೂರು ಪೊಲೀಸ್ ಕಮಿಷನರ್ ಧನ್ಯವಾದ ಹೇಳಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಹಿಡಿಯಲು ಸಹಕಾರ ನೀಡಲಾಗಿದೆ. ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿ ಬಳಿ ಕಳವು ಮಾಡಲಾಗಿತ್ತು. ಆಕ್ಷನ್ ಮೂಲಕ ಕಳವು ಮಾಡಿ ಪರಾರಿಯಾಗ್ತಿದ್ದವರ ಸೆರೆ ಹಿಡಿಯಲಾಗಿದೆ. ನೆಹರು ಮೈದಾನದಲ್ಲಿ ಮಲಗಿದ್ದ ವ್ಯಕ್ತಿ ಮೊಬೈಲ್, ಹಣ ಕಳವು ಮಾಡಿದ್ದ. ಇಬ್ಬರು ಆರೋಪಿಗಳು ಮೊಬೈಲ್, ಹಣ ಕದ್ದು ಪರಾರಿಯಾಗಿದ್ದರು. ಆರೋಪಿಯನ್ನು ಬೆನ್ನಟ್ಟಿದ್ದ ಮೊಬೈಲ್ ಕಳೆದುಕೊಂಡ ವ್ಯಕ್ತಿ. ಇದನ್ನು ಗಮನಿಸಿದ ಪೊಲೀಸ್ ಕಮಿಷನರ್ ಸೂಚನೆ ಮೇರೆಗೆ ತಕ್ಷಣವೇ ಓರ್ವ ಆರೋಪಿಯನ್ನು ಪೊಲೀಸರು ಹಿಡಿದಿದ್ದರು. ಬಳಿಕ 1 ಕಿಲೋಮೀಟರ್ ಓಡಿ ಪೊಲೀಸರು ಕಳ್ಳರ ಹಿಡಿದಿದ್ದರು. ಕಾರ್ಯಾಚರಣೆಗೆ ಸಾಥ್ ನೀಡಿದ ಟಿವಿ9ಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್​ ಧನ್ಯವಾದ ಹೇಳಿದ್ದಾರೆ.

ಉಡುಪಿ, ಕೊಪ್ಪಳದಲ್ಲಿ ಎಸಿಬಿ ದಾಳಿ; ಲಂಚ ಸ್ವೀಕಾರ ಆರೋಪದಲ್ಲಿ ಸರ್ಕಾರಿ ಅಧಿಕಾರಿಗಳು ಎಸಿಬಿ ಬಲೆಗೆ

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಗುರುಪ್ರಸಾದ್ ಬಳಿ 2.50 ಲಕ್ಷ ರೂ. ಪತ್ತೆ ಆಗಿದೆ. ಅಧಿಕಾರಿಗಳಾದ ನಯಿಮಾ ಸಯೀದ್, ಪ್ರಸಾದ್ ವಶಕ್ಕೆ ಪಡೆಯಲಾಗಿದೆ. ವಾಣಿಜ್ಯ ಉದ್ದೇಶಕ್ಕೆ ಪರವಾನಗಿ ನೀಡಲು ಲಂಚಸ್ವೀಕಾರ ಆರೋಪ ಕೇಳಿಬಂದಿತ್ತು. ಆದಿ ಉಡುಪಿಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ.

ಕೊಪ್ಪಳ: ಕಟ್ಟಡ ಪರವಾನಗಿ ನೀಡಲು 6 ಸಾವಿರ ರೂ. ಲಂಚಕ್ಕೆ ಬೇಡಿಕೆ ಆರೋಪದಲ್ಲಿ ಲಂಚ ಸ್ವೀಕರಿಸುತ್ತಿದ್ದ ಪಿಡಿಒ, ಕಾರ್ಯದರ್ಶಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಡಿಒ ಶೇಖ್​​ಸಾಬ್, ಕಾರ್ಯದರ್ಶಿ ನೂರ್​ಉಲ್ಲಕ್ ಬಲೆಗೆ ಬಿದ್ದಿದ್ದಾರೆ. ವಿಜಯ್​​ ಕುಮಾರ್​ನಿಂದ ಲಂಚ ಸ್ವೀಕರಿಸುವಾಗ ಎಸಿಬಿ ದಾಳಿ ನಡೆಸಲಾಗಿದೆ. ಕೊಪ್ಪಳ ಎಸಿಬಿ ಎಸ್​ಪಿ ಶ್ರೀಹರಿಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಜಪ್ತಿ, ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ

ಶಿವಮೊಗ್ಗ: ಗೋಂಧಿ ಚಟ್ಟನಹಳ್ಳಿಯ ಹಳೇ ರೈಸ್ ಮಿಲ್ ಬಳಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 195 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಲಾರಿ ಚಾಲಕ ಇರ್ಫಾನ್ ಎಂಬಾತನನ್ನು​​ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ: ಚಿಂತಾಮಣಿಯ ಖಾಸಗಿ ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಗೋವಿಂದರಾಜ್, ಅಮೀರ್ ಸಾಬ್, ಮನ್ಸೂರ್ ಬಂಧಿಸಲಾಗಿದೆ. 3 ಲಕ್ಷ ರೂಪಾಯಿ ಮೌಲ್ಯದ 8 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

ಬಳ್ಳಾರಿ: ಸಿರುಗುಪ್ಪ ಪೊಲೀಸರಿಂದ ಅಂತಾರಾಜ್ಯ ಕಳ್ಳ ಬಂಧನ; 16 ಲಕ್ಷ ಮೌಲ್ಯದ 21 ಬೈಕ್‌ಗಳು ವಶ

ಸಿರುಗುಪ್ಪ ಪೊಲೀಸರಿಂದ ಅಂತಾರಾಜ್ಯ ಕಳ್ಳನನ್ನು ಬಂಧಿಸಲಾಗಿದೆ. ಆಂಧ್ರ ಮೂಲದ ಲತೀಫ್ (25) ಬಂಧನ ಮಾಡಲಾಗಿದೆ. ಬಂಧಿತನಿಂದ 16 ಲಕ್ಷ ಮೌಲ್ಯದ 21 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸಿರುಗುಪ್ಪ ಪೊಲೀಸರ ಭರ್ಜರಿ ಕಾರ್ಯಾಚರಣೆ ಅಂತರರಾಜ್ಯ ಬೈಕ್ ಕಳ್ಳನ ಬಂಧನವಾಗಿದೆ. ಬಳ್ಳಾರಿ, ರಾಯಚೂರು, ಬೆಂಗಳೂರು ಹಾಗೂ ಆಂಧ್ರದ ವಿವಿಧ ಜಿಲ್ಲೆಯಲ್ಲಿ ಕಳ್ಳತನ ಮಾಡಿದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಬೈಕ್ ಮಾಲೀಕ ನೀಡಿದ ಮಾಹಿತಿ ಮೇರೆಗೆ ಆರೋಪಿ ಬಂಧಿಸಲಾಗಿದ್ದು ಸಿರುಗುಪ್ಪ ಪೊಲೀಸ್ ಠಾಣೆ ಕೇಸ್ ದಾಖಲು ಮಾಡಲಾಗಿದೆ.

ಶಿವಮೊಗ್ಗ: ಸಾಲಬಾಧೆಯಿಂದ ಮನನೊಂದು ದಂಪತಿ ನೇಣಿಗೆ ಶರಣು

ಸಾಲಬಾಧೆಯಿಂದ ಮನನೊಂದು ದಂಪತಿ ನೇಣಿಗೆ ಶರಣಾದ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಪೂರಲುಕೊಪ್ಪ ಗ್ರಾಮದ ಮನೆಯಲ್ಲಿ ನಡೆದಿದೆ. ದಂಪತಿ ಮಂಜುನಾಥ (46), ಉಷಾ (43) ಎಂಬವರು ನೇಣಿಗೆ ಶರಣಾಗಿದ್ದಾರೆ. ಅಡಕೆ ಕೃಷಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲಮಾಡಿದ್ದ ದಂಪತಿ ಮನನೊಂದು ಸಾವನ್ನಪ್ಪಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Crime News: ಮಗುವನ್ನು ಕೊಂದು ದಂಪತಿ ಆತ್ಮಹತ್ಯೆ, ಕಳ್ಳತನ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಇಬ್ಬರು ಮಹಿಳೆಯರು

ಇದನ್ನೂ ಓದಿ: Crime News: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆಗೆ ಯತ್ನ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?