2022ರಲ್ಲಿ ನೀವು ಹೆಚ್ಚು ಲಾಂಗ್​ ವೀಕೆಂಡ್​ಗಳನ್ನು ಪಡೆಯಬಹುದು: ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ವರ್ಷದ ಸಣ್ಣ ತಿಂಗಳಾದರೂ ಈ ಬಾರಿ ಹೆಚ್ಚು ರಜೆಯನ್ನು ಫೆಬ್ರವರಿ ತಿಂಗಳು ನಿಮಗೆ ನೀಡುತ್ತದೆ. ಹೌದು ಫೆ. 28ರಂದು ಒಂದು ದಿನ ನೀವು ಎಕ್ಸ್ಟಾ ರಜೆಯನ್ನು ಪಡೆದರೆ ಒಟ್ಟು 4 ದಿನಗಳ ಲಾಂಗ್​ ರಜೆಯನ್ನು ನೀವು ಪಡೆಯಬಹುದು.

2022ರಲ್ಲಿ ನೀವು ಹೆಚ್ಚು ಲಾಂಗ್​ ವೀಕೆಂಡ್​ಗಳನ್ನು ಪಡೆಯಬಹುದು: ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Jan 14, 2022 | 2:34 PM

ಕೆಲಸದ ಒತ್ತಡ, ವರ್ಕ್​ ಫ್ರಾಂ ಹೋಮ್​ನಿಂದ ನೀವು ಬೇಸತ್ತು, ಒಂದು ದಿನ ರಜೆ ಸಿಕ್ಕಿದ್ದರೆ ಸಾಕಪ್ಪ ಎನ್ನುವ ಸ್ಥಿತಿ ಇತ್ತೀಚೆಗೆ ಸಾಮಾನ್ಯವಾಗಿದೆ.  ಕೊರೋನಾ ನಡುವೆ ಮನೆಯಲ್ಲೆ ಬಂಧಿಯಾಗಿ ದಿನದ ಹೆಚ್ಚು ಕಾಲ ಕೆಲಸದಲ್ಲೇ ಇರುವವರಿಗೆ ಈ ವರ್ಷ ಕೊಂಚ ನೆಮ್ಮದಿ ಕೊಡಬಹುದು ಯಾಕೆಂದರೆ 2022ರಲ್ಲಿ ನಿಮಗೆ ವೀಕೆಂಡ್​ ದೀರ್ಘವಾಘಿಸ ಸಿಗುತ್ತದೆ. ಅರೇ ಇದೇನು ಅಂತೀರಾ,  ಹೌದು 2022ರಲ್ಲಿ ವೀಕೆಂಡ್​ಗಳಲ್ಲಿ ನೀವು ಹೆಚ್ಚಿನ ರಜಾದಿನಗಳನ್ನು ಪಡೆಯಬಹುದು. ನೀವು ಟ್ರಾವೆಲ್ ಪ್ರಿಯರಾಗಿದ್ದರೆ ಈ ವರ್ಷ ನಿಮ್ಮ ಪಾಲಿಗೆ ಅದ್ಭುತವಾಗಿರುತ್ತದೆ. ಈ ವರ್ಷ ಎಲ್ಲ ತಿಂಗಳಿನಲ್ಲಿಯೂ ವೀಕೆಂಡ್​ ಗೆ ಹೊಂದಿಯಾಗುವಂತೆ ಹಬ್ಬಗಳು, ಸರ್ಕಾರಿ ರಜಾದಿನಗಳು ಬಂದಿವೆ ಹೀಗಾಗಿ ನೀವು ಲಾಂಗ್​ ವೀಕೆಂಡ್​ ಅವಧಿಯನ್ನು ಈ ವರ್ಷ ಪಡೆಯಬಹದು. ವೀಕೆಂಡ್​ ಪ್ಲಾನ್​ಗಳನ್ನು ಮಾಡುವ ಮೂಲಕ ಎಂಜಾಯ್​ ಆಡಬಹುದು. ಮಿನಿ ಪ್ಲಾನ್​ಗಳಿಗೆ 2022 ಉತ್ತಮ ವರ್ಷವಾಗಿದೆ ಎನ್ನಬಹುದು. ಹಾಗಾದರೆ ಯಾವ ಯಾವ ತಿಂಗಳಿನಲ್ಲಿ ದೀರ್ಘ ವೀಕೆಂಡ್​ಗಳನ್ನು ಪಡೆಯಬಹುದು ಎನ್ನುತ್ತೀರಾ ಇಲ್ಲಿದೆ ನೋಡಿ ಮಾಹಿತಿ.

ಜನವರಿ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಸಂಕ್ರಾಂತಿ ಹಬ್ಬವಿದೆ. ಜ.14ರಂದು ಆಚರಿಸುವ ಈ ಹಬ್ಬ ಈ ಬಾರಿ ಶುಕ್ರವಾರ ಬಂದಿದೆ ಹೀಗಾಗಿ ವರ್ಷದ ಮೊದಲ ತಿಂಗಳಿನಲ್ಲಿಯೇ 3 ದಿನಗಳ ಸುದೀರ್ಘ ರಜೆಯನ್ನು ನೀವು ಪಡೆಯಬಹುದು.

ಫೆಬ್ರವರಿ ವರ್ಷದ ಸಣ್ಣ ತಿಂಗಳಾದರೂ ಈ ಬಾರಿ ಹೆಚ್ಚು ರಜೆಯನ್ನು ಫೆಬ್ರವರಿ ತಿಂಗಳು ನಿಮಗೆ ನೀಡುತ್ತದೆ. ಹೌದು ಫೆ. 28ರಂದು ಒಂದು ದಿನ ನೀವು ಎಕ್ಸ್ಟಾ ರಜೆಯನ್ನು ಪಡೆದರೆ ಒಟ್ಟು 4 ದಿನಗಳ ಲಾಂಗ್​ ರಜೆಯನ್ನು ನೀವು ಪಡೆಯಬಹುದು. ಫೆ.26 ಶನಿವಾರ ಬಂದಿದೆ. ಹೀಗಾಗಿ ಈ ವೀಕೆಂಡ್​ನಲ್ಲಿ 28ಕ್ಕೆ ರಜೆ ಹಾಕಿದರೆ ಮಾ.1 ರಂದು ಮಾಹಾಶಿವರಾತ್ರಿ ಇರುವ ಕಾರಣ ಒಂದು ದಿನ ಹೆಚ್ಚು ರಜೆ ಸಿಗುತ್ತದೆ. ಆದ್ದರಿಂದ 4 ದಿನ ಸುದೀರ್ಘ ರಜೆ ನಿಮಗೆ ಸಿಗುತ್ತದೆ.

ಮಾರ್ಚ್​ ಮಾರ್ಚ್​ 1 ರಂದು ಮಹಾಶಿವರಾತ್ರಿ ದಿನ ಒಂದೇ ದಿನ ರಜೆ ಇದೆ. ಹಾಗೆಂದು ಬೇಸರ ಬೇಡ. ಮಾ. 18 ರಂದು ಹೋಳಿ ಹುಣ್ಣೆಮೆ ಶುಕ್ರವಾರ ಇದೆ. ಹೀಗಾಗಿ ಅಲ್ಲಿ 3 ದಿನಗಳ ಸಣ್ಣ ಗ್ಯಾಪ್​ ನಿಮ್ ಕೆಲಸದ ಒತ್ತಡಕ್ಕೆ ಸಿಲುಕುತ್ತದೆ.

ಏಪ್ರಿಲ್​ ವರ್ಷದ 4 ನೇ ತಿಂಗಳಿನಲ್ಲಿ  ನೀವು ನಾಲ್ಸು ದಿನಗಳ ಸುದೀರ್ಘ ರಜೆ ಪಡೆಯಬಹುದು. ಏಪ್ರಿಲ್​ 14 ರಿಂದ ಆರಂಭವಾದ ರಜೆ ಏ.17ರವರೆಗೆ ಪಡೆಯಬಹುದು. ಏಕೆಂದರೆ ಏ.14 ರಂದು ಅಂಬೇಡ್ಕರ್​ ಜಯಂತಿಯಿದ್ದು. ಏ. 15 ರಂದು ಶುಕ್ರವಾರ ಗುಡ್​ ಪ್ರೈಡೇ  ಹೀಗಾಗಿ ಅಲ್ಲಿ ನಿಮಗೆ  ವೀಕೆಂಡ್​ ದೊರೆಯುವುದರಿಂದ 4 ದಿನ ರಜೆ ಸಿಗುತ್ತದೆ.

ಮೇ ಮೇ ತಿಂಗಳು ನಿಮಗೆ ಔಟಿಂಗ್​ ಹೋಗಲು ಉತ್ತಮವಾದ ತಿಂಗಳಾಗಿದೆ.ಮೇ 2 ರಂದು ಒಂದು ದಿನ ರಜೆ ಪಡೆದರೆ ನೀವು 4 ದಿನ ಸುದೀರ್ಘ ರಜೆ ಪಡೆಯಬಹುದು.  ಎಪ್ರಿಲ್​ 30ರಿಂದ ಆರಂಭವಾಗಿ ಮೇ 3 ರಂದು ದ್​ ಮಿಲಾದ್​ ವರೆಗೆ ರಜೆ ಇದೆ. ಇನ್ನು ಮೇ 14 ಶನಿವಾರ ಬಂದಿದೆ. ಮೇ 16 ರಂದು ಬುದ್ಧ ಪೌರ್ಣಮಿ ಇರುವುದರಿಂದ ಇಲ್ಲಿ 3 ದಿನಗಳ ರಜೆ ಪಡೆಯಬಹುದು. ಹೀಗಾಗಿ ಮೇ ತಿಂಗಳು ನಿಮಗೆ ಭರಪೂರ ರಜೆಯನ್ನು ನೀಡುತ್ತದೆ.

ಜೂನ್​ ಜೂನ್​ ತಿಂಗಳಿನಲ್ಲಿ ಯಾವುದೇ ದೀರ್ಘಾವಧಿ ರಜೆಗಳು ಇಲ್ಲ.

ಜುಲೈ ಜುಲೈನಲ್ಲಿ  1 ನೇ ತಾರೀಕು ಶುಕ್ರವಾರ ಬಂದಿದೆ. ಜುಲೈ 1 ರಂದು ರಥ ಯಾತ್ರೆ ಇರುವುದರಿಂದ ನೀವು ರಜೆ ಪಡೆಯಬಹುದು. ಅದರ ಮುಂದಿನ 2 ದಿನ ಶನಿವಾರ ಹಾಗೂ ಭಾನುವಾರ ಬಂದಿದ್ದರಿಂದ 3 ದಿನಗಳ ಸುದೀರ್ಘ ರಜೆ ಪಡೆಯಬಹುದು.

ಅಗಸ್ಟ್​ ಈ ತಿಂಗಳು ರಜೆ ದಿನಗಳನ್ನೇ ಹೆಚ್ಚು ಹೊತ್ತು ತಂದಿದೆ ಎಂದರೆ ತಪ್ಪಲ್ಲ. ಆಗಸ್ಟ್​ 12 ರಂದು ಒಂದು ದಿನ ರಜೆ ಪಡೆದರೆ 11 ರಿಂದ 5 ದಿನ ಸುದೀರ್ಘ ರಜೆಯನ್ನು ನೀವು ಪಡೆಯಬಹುದು.  ರಕ್ಷಾಬಂಧನ, ಸ್ವಾತಂತ್ರ್ಯ ದಿನ ಸೇರಿ ಆಗಸ್ಟ್​ 15 ರವರೆಗೆ ರಜೆ ಸಿಗುತ್ತದೆ. ಮುಂದುವರೆದು ಆಗಸ್ಟ್​ 19 ಶುಕ್ರವಾರದಂದು ಕೃಷ್ಣ ಜನ್ಮಾಷ್ಟಮಿ ಇರುವುದರಿಂದ ಮತ್ತೆ 3 ದಿನಗಳ ರಜೆಯನ್ನು ನೀವು ಪಡೆಯಬಹುದು.

ಸೆಪ್ಟಂಬರ್​ ಈ ತಿಂಗಳಿನಲ್ಲಿಯೂ ನೀವು 4 ದಿನಗಳ ಸುದೀರ್ಘ ರಜೆ ಪಡೆಯಬಹುದು. ಗುರುವಾರ ಸೆಪ್ಟಂಬರ್​ 8 ರಂದು ಓನಮ್​ ಕಾರಣ ರಜೆ ಆರಂಭವಾಗುತ್ತದೆ. 9ನೇ ತಾರೀಕಿನಂದು ಒಂದು ದಿನ ರಜೆ ಪಡೆದರೆ ಸೆಪ್ಟಂಬರ್​ 11 ರವರೆಗೆ ಹಾಲಿಡೇ ಎಂಜಾಯ್​ ಮಾಡಬಹುದು.

ಅಕ್ಟೋಬರ್​ ಈ ತಿಂಗಳ ಮಧ್ಯದಲ್ಲಿ ನಿಮಗೆ ದಸರಾ ರಜೆ ಸಿಗುತ್ತದೆ. 5 ದಿನಗಳ ಸುದೀರ್ಘ ರಜೆ ಬೇಕೆಂದರೆ ನೀವು 2  ದಿನ ಪ್ರತ್ಯೇಕ ರಜೆ ಪಡೆದುಕೊಳ್ಳಬೇಕು. ಅಕ್ಟೋಬರ್​5 ರಿಂದ ದಸರಾ ಆರಂಭವಾಗುತ್ತದೆ 2 ದಿನ ರಜೆ ಪಡೆದರೆ ನಿಮ್ಮ ಹಾಲಿಡೇಯನ್ನು ನೀವು 5 ದಿನ ಪಡೆಯಬಹುದು. ಸಾಧ್ಯವಾಗಲಿಲ್ಲ ಎಂದರೆ ಚಿಂತೆ ಬೇಡ ಅಕ್ಟೋಬರ್​ 22 ರಿಂದ ದೀಪಾವಳಿ ಪ್ರಯುಕ್ತ ಮತ್ತೆ 3 ದಿನ ರಜೆ ಸಿಗುತ್ತದೆ.

ನವೆಂಬರ್​ ನವೆಂಬರ್​ 7 ರಂದು ಒಂದು ದಿನ ರಜೆ ಪಡೆದರೆ ನಿಮಗೆ 4 ದಿನಗಳ ರಜೆ ಸಿಗುತ್ತದೆ. ಏಕೆಂದೆರೆ ನ. 5 ರಿಂದು ಶನಿವಾರವಾದ್ದರಿಂದ ರಜೆ ಆರಂಭವಾಗುತ್ತದೆ. ನ.7 ರಂದು ಪ್ರತ್ಯೇಕ ರಜೆ ಪಡೆದರೆ ಗುರು ನಾನಕ್​ ಜಯಂತಿ ಹಿನ್ನಲೆ ನ. 8ರಂದು ಹಾಲಿಡೇ ಇದೆ.

ಡಿಸೆಂಬರ್ ಈ ವರ್ಷದ ಅಂತ್ಯದಲ್ಲಿ ಕ್ರಿಸ್​ ಮಸ್​ ಕೂಡ ಭಾನುವಾರ ಬಂದಿದೆ. ಹೀಗಾಗಿ ಇಯರ್​ ಎಂಡ್​ ತಿಂಗಳಿನಲ್ಲಿ ನಿಮಗೆ ಹೆಚ್ಚು ರಜಾದಿನಗಳು ಸಿಗುವುದಿಲ್ಲ.

ಇದನ್ನೂ ಓದಿ:

Winter Skin Care: ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಸನ್​ಸ್ಕ್ರೀನ್ ಬಳಸಲು ಮರೆಯದಿರಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ