Winter Skin Care: ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಸನ್​ಸ್ಕ್ರೀನ್ ಬಳಸಲು ಮರೆಯದಿರಿ

ಚರ್ಮದ ಮೇಲೆ ಬಿದ್ದ ಸೂರ್ಯನ ಯುವಿ ಕಿರಣಗಳಿಂದ ಚರ್ಮ ಸುಕ್ಕಗಟ್ಟಿದಂತಾಗಿ ವಯಸ್ಸಾದಂತೆ ಕಾಣಬಹುದು. ಹೀಗಾಗಿ ನಿಮಗೆ  ವಯಸ್ಸಾದಂತೆ ಕಾಣುವುದನ್ನು ತಪ್ಪಿಸಲು, ಚರ್ಮ ಡ್ರೈ ಆಗುವುದನ್ನು ತಪ್ಪಿಸಲು ಸನ್​ಸ್ಕ್ರೀನ್ ಉತ್ತಮ ಆಯ್ಕೆಯಾಗಿದೆ. 

Winter Skin Care: ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಸನ್​ಸ್ಕ್ರೀನ್ ಬಳಸಲು ಮರೆಯದಿರಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Jan 14, 2022 | 7:45 AM

ಚರ್ಮದ ಕಾಂತಿಯನ್ನು ಉಳಿಸಿಕೊಳ್ಳಲು ಬಿಸಿಲಿನಿಂದ ರಕ್ಷಣೆ ಪಡೆಯಲು ಸ್ಕಾರ್ಪ್​ಗಳನ್ನು ಬಳಸುತ್ತೇವೆ. ಆದರೆ ನೀವು ಹೊರಹೋಗುವ ಮುನ್ನ ಸನ್​ಸ್ಕ್ರೀನ್​ ಬಳಸುವುದು ಉತ್ತಮ ಅಭ್ಯಾಸವಾಗಿದೆ. ಸನ್​ಸ್ಕ್ರೀನ್ ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು ಉತ್ತಮ ವಾಹಕ ಎಂದು ಸಾಬೀತಾಗಿದೆ. ಹೀಗಾಗಿ ಮನೆಯಿಂದ ಹೊರಹೋಗುವ ಮುನ್ನ ಸನ್​ಸ್ಕ್ರೀನ್  ಅನ್ನು ಮರೆಯದೇ ಬಳಸಿ. ಇದು ಸೂರ್ಯನ ಕಿರಣಗಳಿಂದ ಚರ್ಮದ ಮೇಲೆ ಉಂಟಾಗುವ ಹಾನಿಯನ್ನು ತಪ್ಪಿಸಿ ಅಂಗಾಂಶಗಳನ್ನು ರಕ್ಷಿಸುತ್ತದೆ. ಬಿಸಿಲು, ಉರಿಯೂತ, ಕಪ್ಪುಕಲೆ, ಶುಷ್ಕತೆ, ಹೈಪರ್​ಪಿಗ್ಮೆಂಟೇಶನ್​ನಂತಹ ಸಮಸ್ಯಗಳಿಂದ ಚರ್ಮದ ಮೇಲೆ ಪದರ ರಚಿಸಿ ಸನ್​ಸ್ಕ್ರೀನ್ ರಕ್ಷಿಸುತ್ತದೆ.  SPF 30 ಅಥವಾ ಅದಕ್ಕಿಂತ ಹೆಚ್ಚಿನ ಗುಣಮಟ್ಟದ ಸನ್​ಸ್ಕ್ರೀನ್ ಬಳಸುವಂತೆ ತಜ್ಞರು ಸಲಹೆ ನೀಡುತ್ತಾರೆ. ಮನೆಯಿಂದ ಹೊರಗೆ ಬಿಸಿಲೆಗೆ ಹೋಗುವ 30 ನಿಮಿಷಗಳ ಮೊದಲು ಸನ್​ಸ್ಕ್ರೀನ್ ಹಚ್ಚಿಕೊಳ್ಳಿ. ಇದು ನಿಮ್ಮ ತ್ವಚೆಗೆ ಹೊಂದಿಕೊಂಡು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುತ್ತದೆ.

ಸರಿಯಾದ ಸನ್​ಸ್ಕ್ರೀನ್ ಆಯ್ಕೆಯಿರಲಿ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಸನ್​ಸ್ಕ್ರೀನ್​ ದೊರೆಯುತ್ತದೆ. ಆದರೆ ಅದರಲ್ಲಿ ರಾಸಾಯನಿಕಗಳ ಮಿಶ್ರಣವಿರಬಹುದು ಎಚ್ಚರಿಕೆಯಿರಲಿ. ಹೀಗಾಗಿ ಆಕ್ಸಿನೋಕ್ಸೆಟ್​ ಮತ್ತು ಆಕ್ಸಿನೊಝೇನ್​ ಅಂಶಗಳಿರುವ ಸನ್​ಸ್ಕ್ರೀನ್ ಅನ್ನೇ ಖರೀದಿಸಿ. ಜತೆಗೆ ಎಸ್​ಪಿಎಫ್​ 30ಕ್ಕಿಂತ ಹೆಚ್ಚಾಗಿರುವ ಸನ್​ಸ್ಕ್ರೀನ್​ಗಳನ್ನೇ ಪರ್ಚೇಸ್​ ಮಾಡಿರಿ.

ಎಲ್ಲಾ ಸಮಯದಲ್ಲೂ ಬಳಸಬಹುದು ಸನ್​ಸ್ಕ್ರೀನ್ ಅನ್ನು ಕೇವಲ  ಬಿಸಿಲಿನಿಂದ ಚರ್ಮವನ್ನು ರಕ್ಷಣೆಮಾಡಿಕೊಳ್ಳಲು ಮಾತ್ರವೇ ಬಳಸಬೇಕೆಂದಿಲ್ಲ. ಪ್ರತಿನಿತ್ಯ ಹೊರಗೆ ಹೋಗುವ ವೇಳೆ ಹಚ್ಚಿದರೆ ಸೂರ್ಯನ ಕಿರಣಗಳಿಂದ ಚರ್ಮದ ಮೇಲಾಗುವ ಹಾನಿಯನ್ನು ತಪ್ಪಿಸಬಹುದು. ಇದರ ಜತೆಗೆ ತ್ವಚೆಗೆ ಸಂಬಂಧಿಸಿದ  ಕೆಲವು ಸಮಸ್ಯೆಗಳನ್ನೂ ಸನ್​ಸ್ಕ್ರೀನ್ ನಿವಾರಿಸುತ್ತದೆ.

ಹಾಗಾದರೆ ಯಾವೆಲ್ಲ ಕಾರಣಗಳಿಗೋಸ್ಕರ ಸನ್​ಸ್ಕ್ರೀನ್ ಅನ್ನು ಬಳಸಲೇಬೇಕು? 

ಚಳಿಗಾಲದ ಬಿಸಿಲೂ ಕೂಡ ಬೇಸಿಗೆಯ ಬಿಸಿಲಿನಷ್ಟೇ ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಅಲ್ಲದೆ ಚಳಿಗಾಲದಲ್ಲಿ ಡ್ರೈ ಸ್ಕಿನ್​ ಇರುವುದರಿಂದ ಸೂರ್ಯನ ಬಿಸಿಲಿಗೆ ಮುಖವನ್ನು ತೆರೆದಾಗ ಚರ್ಮ ಸುಡುವ ಸಾಧ್ಯತೆಗಳೇ ಹೆಚ್ಚಿರುತ್ತದೆ. ಆದ್ದರಿಂದ ಸನ್​ಸ್ಕ್ರೀನ್ ಬಳಕೆ ಉತ್ತಮ ಎನ್ನುತ್ತಾರೆ ವೈದ್ಯರು.

ಚಳಿಗಾಲದಲ್ಲಿನ ಶುಷ್ಕತೆಯಿಂದ ನಿಮ್ಮ ಚರ್ಮ ಡ್ರೈ ಆಗಿರುತ್ತದೆ. ಇದರಿಂದ ನಿಮ್ಮ ಚರ್ಮದ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಒಣ ತ್ವಚೆ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಸನ್​ಸ್ಕ್ರೀನ್ ಬಳಸಿದಾಗ ಚರ್ಮದ ಪದರದ ಮೇಲೆ ರಕ್ಷಣಾ ಕವಚವನ್ನು ನಿರ್ಮಿಸಿ ಹಾನಿಯನ್ನು ತಪ್ಪಿಸುತ್ತದೆ.

ಚಳಿಗಾಲದಲ್ಲಿ ಚರ್ಮದ ಮರು ಉತ್ಪಾದನೆ ನಿಧಾನವಾಗಿರುತ್ತದೆ. ಹೀಗಾಗಿ ಬಿಸಿಲಿನಿಂದ ಒಂದು ಬಾರಿ ಚರ್ಮ ಹಾಳಾದರೆ ಮತ್ತೆ ಸರಿಹೋಗಲು ಸಮಯಗಳೇ ಬೇಕಾಗಬಹುದು. ಸನ್​ಸ್ಕ್ರೀನ್ ಬಳಸಿದರೆ ಚರ್ಮದ ಮೇಲಾಗುವ ಹಾನಿಯನ್ನು ತಪ್ಪಿಸಬಹುದು.

ಸೂರ್ಯನ ಕಿರಣಗಳಿಗೆ ಮುಖವನ್ನು ಒಡ್ಡಿಕೊಂಡಾಗ ಚರ್ಮದ ಮೇಲೆ ಬಿದ್ದ ಯುವಿ ಕಿರಣಗಳಿಂದ ಚರ್ಮ ಸುಕ್ಕಗಟ್ಟಿದಂತಾಗಿ ವಯಸ್ಸಾದಂತೆ ಕಾಣಬಹುದು. ಹೀಗಾಗಿ ನಿಮಗೆ  ವಯಸ್ಸಾದಂತೆ ಕಾಣುವುದನ್ನು ತಪ್ಪಿಸಲು, ಚರ್ಮ ಡ್ರೈ ಆಗುವುದನ್ನು ತಪ್ಪಿಸಲು ಸನ್​ಸ್ಕ್ರೀನ್ ಉತ್ತಮ ಆಯ್ಕೆಯಾಗಿದೆ.

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್