ಜಿಗೇನಹಳ್ಳಿಯಲ್ಲಿ ಶೀಲ ಶಂಕಿಸಿ ಪತ್ನಿಯನ್ನು ಕೊಂದು ಪತಿಯೂ ನೇಣಿಗೆ ಶರಣು; 5 ಮಕ್ಕಳು ಅನಾಥ

| Updated By: ಆಯೇಷಾ ಬಾನು

Updated on: Oct 28, 2022 | 9:45 AM

12 ವರ್ಷದ ಹಿಂದೆ ರೇಖಾಳನ್ನ ಮದುವೆಯಾಗಿದ್ದ ಕುಮಾರಸ್ವಾಮಿ ದಂಪತಿಗೆ 5 ಜನ ಮಕ್ಕಳಿದ್ದಾರೆ. ಇಷ್ಟಿದ್ದರೂ ಕುಮಾರಸ್ವಾಮಿಗೆ ತನ್ನ ಪತ್ನಿ ಶೀಲದ ಬಗ್ಗೆ ಶಂಕೆ ಇತ್ತು.

ಜಿಗೇನಹಳ್ಳಿಯಲ್ಲಿ ಶೀಲ ಶಂಕಿಸಿ ಪತ್ನಿಯನ್ನು ಕೊಂದು ಪತಿಯೂ ನೇಣಿಗೆ ಶರಣು; 5 ಮಕ್ಕಳು ಅನಾಥ
ಸಾಂದರ್ಭಿಕ ಚಿತ್ರ
Image Credit source: India.com
Follow us on

ಬಳ್ಳಾರಿ: ಶೀಲ ಶಂಕಿಸಿ ಪತ್ನಿಯನ್ನ ಪತಿಯೇ ಬರ್ಬರವಾಗಿ ಹತ್ಯೆಗೈದು ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜಿಗೇನಹಳ್ಳಿಯ ಗ್ರಾಮವೊಂದರಲ್ಲಿ ನಡೆದಿದೆ. ಜಿಗೇನಹಳ್ಳಿ ಗ್ರಾಮದಲ್ಲಿ ರೇಖಾ ಕುಮಾರಸ್ವಾಮಿ ಎಂಬ ಮಹಿಳೆಯ ಮೇಲೆ ಆತನ ಪತಿ ಕುಮಾರಸ್ವಾಮಿ ಕುಡುಗೋಲಿನಿಂದ ಕೊಲೆ ಮಾಡಿದ್ದಾನೆ. ಜಮೀನಿನಲ್ಲಿ ಪತ್ನಿ ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚೋರನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

12 ವರ್ಷದ ಹಿಂದೆ ರೇಖಾಳನ್ನ ಮದುವೆಯಾಗಿದ್ದ ಕುಮಾರಸ್ವಾಮಿ ದಂಪತಿಗೆ 5 ಜನ ಮಕ್ಕಳಿದ್ದಾರೆ. ಇಷ್ಟಿದ್ದರೂ ಕುಮಾರಸ್ವಾಮಿಗೆ ತನ್ನ ಪತ್ನಿ ಶೀಲದ ಬಗ್ಗೆ ಶಂಕೆ ಇತ್ತು. ತಾಯಿ-ತಂದೆ ಮೃತಪಟ್ಟಿದ್ದು 5 ಜನ ಮಕ್ಕಳು ಬೀದಿಗೆ ಬಿದ್ದಿದ್ದಾರೆ. ಅನಾಥರಾಗಿದ್ದಾರೆ.

ಟಂಟಂ ಆಟೋ ಪಲ್ಟಿ ಸ್ಥಳದಲ್ಲೆ ವ್ಯಕ್ತಿ ಸಾವು

ಯಾದಗಿರಿ: ವಡಗೇರಾ ತಾಲೂಕಿನ ಮನಗನಾಳ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಅಪಘಾತದಲ್ಲಿ ಖಾನಾಪುರ ಗ್ರಾಮದ ಉದಯ್(27) ಪ್ರಾಣ ಕಳೆದುಕೊಂಡಿದ್ದಾರೆ. ಖಾನಾಪುರದಿಂದ ಯಾದಗಿರಿಗೆ ತೆರಳುತ್ತಿದ್ದ ಆಟೋ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ವಿರುದ್ಧ ನಾಳೆಯಿಂದ ಪ್ರತಿಭಟನೆ: 144 ಸೆಕ್ಷನ್​ ನಿಷೇಧಾಜ್ಞೆ ‌ಜಾರಿ

ಹುಲಿ ಉಗುರು ಮಾರಾಟಕ್ಕೆ ಯತ್ನಿಸಿದವ ಅರೆಸ್ಟ್

ಚಾಮರಾಜನಗರ: ಹರದನಹಳ್ಳಿಯಲ್ಲಿ ಹುಲಿ ಉಗುರು ಸಂಗ್ರಹಿಸಿದ್ದ ಮಹೇಂದ್ರ ಎಂಬುವರ ಮನೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ನಾಲ್ವರನ್ನ ಬಂಧಿಸಿದ್ದಾರೆ. ಅಧಿಕಾರಿಗಳು ಬಂಧಿತರಿಂದ 4 ಹುಲಿ ಉಗುರುಗಳನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿ ಮಹೇಂದ್ರ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಹುಲಿ ಉಗುರ ಸಂಬಂಧ ಮಾಹಿತಿ ಪಡೆದು ಪೊಲೀಸ್ ಅರಣ್ಯ ಸಂಚಾರಿದಳ ಸಿಐಡಿ ಘಟಕದ ಅಧಿಕಾರಿಗಳು ದಾಳಿ ನಡೆಸಿದ್ರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆನೆ ದಂತ ಅಕ್ರಮ ಮಾರಾಟ ಯತ್ನ

ಆನೆ ದಂತ ಅಕ್ರಮ ಮಾರಾಟಕ್ಕೆ ಯತ್ನಿಸಿದಕ್ಕೆ ಕೊಡಗಿನಲ್ಲಿ ಇಬ್ಬರು ಆರೋಪಿಗಳ‌ನ್ನು ಬಂಧಿಸಲಾಗಿದೆ. ಬಂಧಿತರಿಂದ‌ 20 ಕೆಜಿ ಆನೆ ಹಲ್ಲು ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ. ಪೊನ್ನಂಪೇಟೆ ತಾಲ್ಲೂಕಿನ ಪಾಲಿಬೆಟ್ಟ-ತಿತಿಮತಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಆನೆ ಹಲ್ಲು ಮಾರಾಟ ಯತ್ನದಲ್ಲಿದ್ದಾಗ ಅರಣ್ಯ ಇಲಾಖೆ ದಾಳಿ ಮಾಡಿ ಮಧು (21), ಮೋಹನ ಚಂದ್ರ (25) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದ್ರೆ ದಿನೇಶ್ (21), ವಿನು (23) ಪರಾರಿಯಾಗಿದ್ದಾರೆ.

Published On - 7:14 am, Fri, 28 October 22