ವಿಜಯನಗರ, ಅ.08: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳ ಸಾವನ್ನಪ್ಪಿದ ದಾರುಣ ಘಟನೆ ವಿಜಯನಗರ (Vijayanagara) ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದಲ್ಲಿ ನಡೆದಿದೆ. ಕುಮತಿ ಗ್ರಾಮದ ಸಾಗರ್(14), ಗುರು(14) ಹಾಗೂ ವಿನಯ್(11) ಮೃತರು. ದಸರಾ ರಜೆ ಹಿನ್ನೆಲೆಯಲ್ಲಿ ಮೂವರು ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಇತ್ತ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಸ್ಥಳಕ್ಕೆ ಕಾನಾಹೊಸಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉತ್ತರ ಕನ್ನಡ: ಜಿಲ್ಲೆಯ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಪ್ರವಾಸಿಗನೋರ್ವನ ಜೀವ ರಕ್ಷಣೆ ಮಾಡಲಾಗಿದೆ. ಉತ್ತರ ಪ್ರದೇಶ ಬನಾರಸ್ ಮೂಲದ ರಾಹುಲ್ ಕುಮಾರ್ (28) ರಕ್ಷಣೆಗೊಳಗಾದ ಯುವಕ. ಕುಡ್ಲೆ ಬೀಚ್‌ನಲ್ಲಿ ಈಜಲು ತೆರಳಿದ್ದಾಗ ಸಮುದ್ರ ಸುಳಿಗೆ ಸಿಲುಕಿದ್ದ ಯುವಕ, ಜೀವ ರಕ್ಷಣೆಗಾಗಿ ಕೂಗಾಡುತ್ತಿದ್ದ. ಅದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿ ಮಂಜುನಾಥ್ ಹರಿಕಂತ್ರ ಎಂಬುವವರು ಕೂಡಲೇ ಪ್ರದೀಪ್ ಅಂಬಿಗ್ ಹಾಗೂ ಮಿಸ್ಟೇಕ್ ಗೋಕರ್ಣ ಅಡ್ವೆಂಚರ್ಸ್ ಸಿಬ್ಬಂದಿಯಿಂದ ಜೆಟ್ ಸ್ಕೀ ಮೂಲಕ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕೇಕ್ ತಿಂದು 5 ವರ್ಷದ ಮಗು ಸಾವು; ತಂದೆ-ತಾಯಿ ಸ್ಥಿತಿ ಗಂಭೀರ
ಕೊಡಗು: ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಬಳಿಯ ಪನ್ಯ ಎಸ್ಟೇಟ್ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಒಂದು ವಾರದ ಹಿಂದೆಯೇ ಪೆಟ್ರೋಲ್ ಹಾಕಿ ಶವ ಸುಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಗುರುತು ಸಿಗದಷ್ಟು ಮೃತದೇಹ ಸಂಪೂರ್ಣ ಕರಕಲಾಗಿದೆ. ಸಧ್ಯ ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Tue, 8 October 24