ವಿಜಯನಗರ: ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ತುಂಗಭದ್ರಾ (Tungabhadra) ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದ್ದು, ಡ್ಯಾಂನಿಂದ ನದಿಗೆ 1,74,797 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಕಂಪ್ಲಿ ಸೇತುವೆ ಜಲಾವೃತವಾಗಿದೆ. ಗಂಟೆಯಿಂದ ಗಂಟೆಗೆ ನದಿ ಪಾತ್ರಕ್ಕೆ ಹೊರಹರಿವು ಹೆಚ್ಚಳವಾಗುತ್ತಿದ್ದು, ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. 25 ಗೇಟಗಳ ಮೂಲಕ 4 ಅಡಿ ಎತ್ತರ ಹಾಗೂ 8 ಗೇಟ್ ಗಳಿಂದ ಒಂದೂವರೆ ಅಡಿ ಎತ್ತರದಿಂದ ನದಿಗೆ ನೀರು ಬಿಡಲಾಗಿದೆ. 2 ಲಕ್ಷ ಕ್ಯೂಸೆಕ್ವರೆಗೂ ನದಿಗೆ ನೀರು ಹರಿಸುವ ಕುರಿತು ಟಿಬಿ ಬೋರ್ಡ್ ಎಚ್ಚರಿಕೆ ನೀಡಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಟಿಬಿ ಬೋರ್ಡ್ ಎಚ್ಚರಿಕೆ ನೀಡಿದೆ. ಇನ್ನೂ ಕೃಷ್ಣ ನದಿ ಪಾತ್ರವದಲ್ಲಿರುವ ಜಲಾಶಯಗಳು ಭರ್ತಿಯಾಗಿದ್ದು, ಬಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ.
ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ತಗ್ಗಿದ ಮಳೆಯ ಅಬ್ಬರ; ಈ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಣೆ
ಹೇಮಾವತಿ ಜಲಾಶಯದಿಂದ 50,950 ಕ್ಯೂಸೆಕ್ ನೀರು ಬಿಡುಗಡೆ
ಹಾಸನ: ಮಲೆನಾಡು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣಾರ್ಭಟ ಹಿನ್ನೆಲೆ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯಕ್ಕೆ ಇಂದು 43,737 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ಇಂದು 50,950 ಕ್ಯುಸೆಕ್ ನೀರನ್ನು ಅಧಿಕಾರಿಗಳು ಹೊರ ಬಿಡುತ್ತಿದ್ದಾರೆ. ಹೇಮಾವತಿ ಜಲಾಶಯ ಗರಿಷ್ಠ 2922 ಅಡಿ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ ಇಂದು 2921 ಅಡಿ ನೀರು ಸಂಗ್ರಹವಾಗಿದೆ. 37 ಟಿಎಂಸಿ ನೀರು ಸಂಗ್ರಹದ ಜಲಾಶಯದಲ್ಲಿ 36 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ಎರಡು ವಾರಗಳಿಂದ ಬಾರಿ ಮಳೆ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿದೆ.
ಹಿಡಕಲ್ ಡ್ಯಾಂನಿಂದ ಘಟಪ್ರಭಾ ನದಿಗೆ ನೀರು ಬಿಡುಗಡೆ: ಮುಧೋಳ ಸಂಪರ್ಕ ಸ್ಥಗಿತ
ಬಾಗಲಕೋಟೆ: ಮಹಾರಾಷ್ಟ್ರ, ಬೆಳಗಾವಿ ನಿರಂತರ ಮಳೆ ಹಿನ್ನೆಲೆ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಬಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಘಟಪ್ರಭಾ ನದಿ ನೀರಿನ ಹರಿವಿನ ಪ್ರಮಾಣ 12 ಸಾವಿರಕ್ಕೂ ಅಧಿಕ ಕ್ಯೂಸೆಕ್ ಹೆಚ್ಚಾಗಿದ್ದು, ನದಿ ವ್ಯಾಪ್ತಿ ಬಿಟ್ಟು ವಿಸ್ತಾರವಾಗಿ ನೀರು ಹರಿಯುತ್ತಿದೆ. ಕ್ಷಣ ಕ್ಷಣಕ್ಕೂ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಅನಗವಾಡಿ ಬೂದಿಹಾಳ ಮಧ್ಯದ ರಸ್ತೆ ಜಲಾವೃತವಾಗಿದ್ದು, ಅನಗವಾಡಿ ಬೂದಿಹಾಳ, ಬಾವಲತ್ತಿ, ಕೋವಳ್ಳಿ ಮಾರ್ಗದಿಂದ ಮುಧೋಳ ಸಂಪರ್ಕ ಸ್ಥಗಿತವಾಗಿದೆ.
ಇದನ್ನೂ ಓದಿ: ಆಟೋರಿಕ್ಷಾ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ; 9 ಜನರ ಸಾವು
ಬೂದಿಹಾಳ ಕೋವಳ್ಳಿ, ಬಾವಲತ್ತಿ ಗ್ರಾಮದಿಂದ ಬಾಗಲಕೋಟೆ ಬರಲು 18-20 ಕಿಮೀ ಸುತ್ತುವರೆದು ಬರುವ ಸ್ಥಿತಿ ಎದುರಾಗಿದೆ. ಘಟಪ್ರಭಾ ನದಿ ಪ್ರವಾಹದಿಂದಾಗಿ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಬಳಿ ಇರುವ ಘಟಪ್ರಭಾ ಸೇತುವೆ ಜಲಾವೃತವಾಗಿದ್ದು, ಬಾಗಲಕೋಟೆ-ಬೆಳಗಾವಿ ಗಡಿಭಾಗದ ರಸ್ತೆ ಸಂಪರ್ಕ ಕಟ್ ಆಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:33 am, Wed, 10 August 22