ಬಳ್ಳಾರಿ: ಮೂರು ದಿನ ಕಳೆದರು ಮುಗಿಯದ ಐಟಿ ದಾಳಿ; ಕೈಲಾಸ ವ್ಯಾಸ್ ಫ್ಲ್ಯಾಟ್‌​ನಲ್ಲಿ ಮುಂದುವರೆದ ದಾಖಲೆ ಪರಿಶೀಲನೆ

| Updated By: ವಿವೇಕ ಬಿರಾದಾರ

Updated on: Jan 15, 2023 | 7:48 AM

ಬಳ್ಳಾರಿಯ ವಿದ್ಯಾನಗರದಲ್ಲಿರುವ ಕೈಗಾರಿಕೋದ್ಯಮಿ ಕೈಲಾಸ ವ್ಯಾಸ್​​ನ ರಾಗಾ ಪೊರ್ಟ್ ಅಪಾರ್ಟ್‌ಮೆಂಟ್‌​ನ ಫ್ಲ್ಯಾಟ್‌ ನಂಬರ್ 310 ಮತ್ತು 510 ರಲ್ಲಿ ಐಟಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.

ಬಳ್ಳಾರಿ: ಮೂರು ದಿನ ಕಳೆದರು ಮುಗಿಯದ ಐಟಿ ದಾಳಿ; ಕೈಲಾಸ ವ್ಯಾಸ್ ಫ್ಲ್ಯಾಟ್‌​ನಲ್ಲಿ ಮುಂದುವರೆದ ದಾಖಲೆ ಪರಿಶೀಲನೆ
ಆದಾಯ ತೆರಿಗೆ ಇಲಾಖೆ
Follow us on

ಬಳ್ಳಾರಿ: ಕೈಲಾಸ್ ವ್ಯಾಸ್ ಒಡೆತನದ ಹರಿ ಇಸ್ಪಾತ್ ಫ್ಯಾಕ್ಟರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, 72 ಗಂಟೆ ಕಳೆದರೂ ಐಟಿ ಇಲಾಖೆಯ (IT) ರೇಡ್ ಮುಗಿದಿಲ್ಲ. ಐಟಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ದಾಖಲೆ ಪರಿಶೀಲಿಸುತ್ತಿದ್ದಾರೆ. ಇಂದು (ಜ.15) ಸಹ ದಾಖಲೆ ಪರಿಶೀಲನೆ ಮುಂದುವರೆದಿದ್ದು, ಕೈಗಾರಿಕೋದ್ಯಮಿ ಕೈಲಾಸ ವ್ಯಾಸ್ ಫ್ಲ್ಯಾಟ್‌​ನಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಬಳ್ಳಾರಿಯ ವಿದ್ಯಾನಗರದಲ್ಲಿರುವ ರಾಗಾ ಪೊರ್ಟ್ ಅಪಾರ್ಟಮೆಂಟ್​ನ ಪ್ಲಾಟ್ ನಂಬರ್ 310 ಮತ್ತು 510 ರಲ್ಲಿ ಪರಿಶೀಲನೆ ನಡೆಯುತ್ತಿದೆ.

ಐಟಿ ಇಲಾಖೆ ಅಧಿಕಾರಿಗಳು ನಿನ್ನೆ (ಜ.14) ಹಲವು ಮಹತ್ವದ ದಾಖಲೆಗಳನ್ನು ಸೀಜ್ ಮಾಡಿಕೊಂಡಿದ್ದು, ಇಂದು ಅಧಿಕಾರಿಗಳು ಕೈಲಾಸ ವ್ಯಾಸ್ ಮಾಲಿಕತ್ವದ ಆನಂದಿ ಮಾರ್ಕೆಟಿಂಗ್ ಸೇರಿದಂತೆ ವಿವಿಧ ಕಾರ್ಖಾನೆಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ಸಚಿವ ಶ್ರೀರಾಮುಲು, ಕೈಲಾಸ್ ವ್ಯಾಸ್ ಒಡೆತನದ ಫ್ಯಾಕ್ಟರಿ ಮೇಲೆ ಐಟಿ ದಾಳಿ

ಸಚಿವ ಶ್ರೀರಾಮುಲು ಪಾಲುದಾರಿಕೆಯ ಕೊಪ್ಪಳದ ಗಿಣಿಗೇರಾ ಬಳಿಯ ಹರಿ ಇಸ್ಪಾತ್ ಕಾರ್ಖಾನೆ, ಮಾಜಿ ಶಾಸಕ ಸುರೇಶಬಾಬು ಪಾಲುದಾರಿಕೆಯ ಮಹಾಮಾನವ ವಾಷಿಂಗ್ ಪ್ಲ್ಯಾಂಟ್, ಲಾಡ್ ಕುಟುಂಬದ ಅಮರ ಜ್ಯೋತಿ ಪ್ಲ್ಯಾಂಟ್, ಬಳ್ಳಾರಿಯ ವೆಂಕಟೇಶ್ವರ, ಶ್ರೀಹರಿ ಪಿಜಿಎಂ ಕಾರ್ಖಾನೆ, ಕೊಪ್ಪಳದ ಶಿಮ್ಲಾ ಡಾಬಾ ಬಳಿಯ ವಾಷಿಂಗ್ ಪ್ಲ್ಯಾಂಟ್​​ಗಳ ಮೇಲೆ ಐಟಿ ಇಲಾಖೆ ದಾಳಿ ಮಾಡಿ ದಾಖಲೆ ಪರಿಶೀಲಿಸುತ್ತಿದೆ.

ಜನಾರ್ದನ ರೆಡ್ಡಿ ಪಕ್ಷ ಸ್ಥಾಪನೆ ಬಗ್ಗೆ ನನಗೆ ಅಸಮಾಧಾನ ಇದೆ

ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಸರ್ಕಾರ ಅನುಮತಿ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಕಾನೂನು ತನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತೆ. ಜನಾರ್ದನ ರೆಡ್ಡಿ ತಾಳ್ಮೆ ಕಳೆದುಕೊಂಡಿದ್ದಕ್ಕೆ ಹೀಗೆ ಆಗಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ದುಡುಕಿನ ನಿರ್ಧಾರವಾಗಿದೆ ಎಂದರು.

ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜನಾರ್ದನ ರೆಡ್ಡಿ ಪಕ್ಷ ಸ್ಥಾಪನೆ ಬಗ್ಗೆ ನನಗೆ ಅಸಮಾಧಾನ ಇದೆ. ನೂರಕ್ಕೆ ನೂರರಷ್ಟು ಅಸಮಾಧಾನ ಇದೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗಲ್ಲ. ಸೋದರ ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ.

ಇದನ್ನೂ ಓದಿ: ಸಚಿವ ಶ್ರೀರಾಮುಲು, ಕೈಲಾಸ್ ವ್ಯಾಸ್ ಒಡೆತನದ ಫ್ಯಾಕ್ಟರಿ ಮೇಲೆ ಐಟಿ ದಾಳಿ

ಜನಾರ್ದನ ರೆಡ್ಡಿಗೆ ಪಕ್ಷ ಸ್ಥಾಪಿಸಲು ಬೇಡ ಅಂದೆ

ಜನಾರ್ದನ ರೆಡ್ಡಿ ಪಕ್ಷ ಸ್ಥಾಪನೆ ವೇಳೆ ನನಗೂ ಕೇಳಿದರು. ನಾನು ಬೇಡ ಅಂದೆ. ಆದರು ಅವರು ಪಕ್ಷ ಸ್ಥಾಪನೆ ಮಾಡಿದ್ದಾರೆ. ರೆಡ್ಡಿ ಪಕ್ಷ ಸ್ಥಾಪನೆ ವಿಚಾರದಲ್ಲಿ ಮುನ್ನಡೆ ಹಿನ್ನಡೆಯನ್ನು ಜನರು ನಿರ್ಧಾರ ಮಾಡುತ್ತಾರೆ. ಜನಾರ್ದನ ರೆಡ್ಡಿ ಮನಸ್ಸು ಓಲಿಸಲು ಈಗಲೂ ಶ್ರೀರಾಮುಲು ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಚುನಾವಣೆಗೂ ಮುನ್ನ ಅವರನ್ನ ಬಿಜೆಪಿಗೆ ಕರೆತರಲು ಸಾಧ್ಯವಿಲ್ಲ. ಈ ಬಗ್ಗೆ ಅವರು ಎನೂ ನಿರ್ಣಯ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಸಿದರು.

ರೆಡ್ಡಿ ಪಕ್ಷ ಸ್ಪಾಪನೆ ಮಾಡಿದ ವಿಚಾರವಾಗಿ ನನಗೆ ನೂರಕ್ಕೆ ನೂರರಷ್ಟು ಅಸಮಾಧಾನವಿದೆ. ಸೋಮಶೇಖರ ರೆಡ್ಡಿ ವಿರುದ್ಧ ಲಕ್ಷ್ಮೀ ಅರುಣಾ ಸ್ಪರ್ಧೆ ಮಾಡುವ ಸಾಧ್ಯತೆ ವಿಚಾರವಾಗಿ ಮಾತನಾಡಿದ ಅವರು ನನ್ನ ವಿರುದ್ದ ಸ್ಪರ್ದೆ ಮಾಡಲಿ. ತಪ್ಪೇನಿದೆ, ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಸೋಮಶೇಖರರೆಡ್ಡಿ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಹಿಂದೆ ರಾಮುಲು ಬಿಆರ್​​ಆರ್ ಪಕ್ಷ ಸ್ಪಾಪನೆ ವೇಳೆ ನಾನು ರೆಡ್ಡಿಗಾಗಿ ತ್ಯಾಗ ಮಾಡಿದ್ದೆ. ಜನಾರ್ದನ ರೆಡ್ಡಿ ಕೋರ್ಟ್ ಕೇಸ್​​​ಗಳಿಗೆ ಓಡಾಡುವ ಉದ್ದೇಶಕ್ಕಾಗಿ ಸ್ಪರ್ಧೆ ಮಾಡಲಿಲ್ಲ. ತಮ್ಮನಿಗಾಗಿ ನಾನು ಸ್ಪರ್ಧೆ ಮಾಡಿದೆ. ಅವರಿಗಾಗಿ ತ್ಯಾಗ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:41 am, Sun, 15 January 23