ಬಳ್ಳಾರಿ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದ ಕುರುಗೋಡು ಠಾಣೆ ಪಿಎಸ್ಐ (PSI) ಕೆ.ಹೆಚ್.ಮಣಿಕಂಠರನ್ನು ಅಮಾನತುಗೊಳಿಸಿ, ಇಲಾಖೆ ವಿಚಾರಣೆಗೆ ಬಳ್ಳಾರಿ (Bellary) ಎಸ್ಪಿ (SP) ಸೈದುಲು ಅಡಾವತ್ ಸೂಚಿಸಿದ್ದಾರೆ. ಕುರಗೋಡು ಠಾಣೆಗೆ ನೂತನ PSI ಆಗಿ ಎನ್.ರಘು ನೇಮಕಗೊಂಡಿದ್ದಾರೆ. ಹಲ್ಲೆ, ಜಾತಿ ನಿಂದನೆ, ಜೀವ ಬೆದರಿಕೆ ಹಾಕಿದ ಆರೋಪ ಹಿನ್ನೆಲೆ PSI ಕೆ.ಹೆಚ್ಮಣಿಕಂಠ ವಿರುದ್ಧ ಈರಣ್ಣ ದೂರು ನೀಡಿದ್ದರು. ಈರಣ್ಣರ ಮೇಲಿನ ಹಲ್ಲೆ ಖಂಡಿಸಿ ಕೊಳೂರು ಗ್ರಾಮಸ್ಥರು ಪಿಎಸ್ಐ ವಿರುದ್ಧ ಧರಣಿ ನಡೆಸಿದ್ದರು. ಪ್ರತಿಭಟನೆ ಬೆನ್ನಲ್ಲೇ ಕುರಗೋಡು ಠಾಣೆ PSI ವಿರುದ್ಧ ಪ್ರಕರಣ ದಾಖಲಾಗಿತ್ತು.
ನಡೆದಿದ್ದೇನು?
ಮೊಹರಂ ಹಬ್ಬದ ಹಿನ್ನೆಲೆ ಕೊಳೂರು ಗ್ರಾಮದಲ್ಲಿ ಹಾಕಲಾಗಿದ್ದ ಬ್ಯಾನರ್ ಹರಿದ ಪ್ರಕರಣದ ಗಲಾಟೆ ಸಂಬಂಧ ಗ್ರಾಮಕ್ಕೆ ಪಿಎಸ್ಐ ಮಣಿಕಂಠ ಹೋಗಿದ್ದರು.ಈ ವೇಳೆ ಪಿಎಸ್ಐ ಮಣಿಕಂಠ ಪಕ್ಕದಲ್ಲಿ ನಿಂತಿದ್ದ ಈರಣ್ಣನಿಗೆ ಘಟನೆಗೆ ನೀನೇ ಕಾರಣ ಅಂತಾ ಸಾರ್ವಜನಿಕವಾಗಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ ಕೊಳೂರು ಗ್ರಾಮದ ಕಾಲುವೆಯಲ್ಲಿ ಅನಾಮಿಕ ಶವ ನೋಡಲು ಹೋದಾಗ ಪಿಎಸ್ಐ ಈರಣ್ಣನ ಮೇಲೆ ಯೂ ಹಲ್ಲೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಹಲ್ಲೆಯಿಂದಾಗಿ ಕಾಲುಮುರಿದುಕೊಂಡಿದ್ದ ಈರಣ್ಣರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸ್ಥಳೀಯ ಶಾಸಕ ಗಣೇಶ್ ನೇತೃತ್ವದಲ್ಲಿ ರಾಜಿ ಪಂಚಾಯಿತಿ ಮಾಡಲಾಗಿತ್ತು. ಇದೀಗ ಮತ್ತೆ ಪಿಎಸ್ಐ ಮಣಿಕಂಠರಿಂದ ಈರಣ್ಣನ ಮೇಲೆ ಕ್ಷುಲ್ಲಕ ಕಾರಕ್ಕೆ ಹಲ್ಲೆ ಮಾಡಲಾಗಿದೆ.
ಈ ಸಂಬಂಧ ಪಿಎಸ್ಐ ಅನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಠಾಣೆ ಮುಂದೆ ನೂರಕ್ಕೂ ಹೆಚ್ಚು ಸಾರ್ವಜನಿಕರು ಪ್ರತಿಭಟನೆ ಮಾಡುತ್ತಿದ್ದರು. ಕುರುಗೋಡ್ ಪೊಲೀಸ ಠಾಣೆಗೆ ಎಸ್ಪಿ ಸ್ಥಳಕ್ಕೆ ಬರುವಂತೆ ಜನರ ಪಟ್ಟು ಹಿಡಿದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಇ ಇಲ್ಲಿ ಕ್ಲಿಕ್ ಮಾಡಿ
Published On - 7:14 pm, Fri, 12 August 22