
ಬಳ್ಳಾರಿ: KSRTC ಬಸ್ ಹಿಂಬದಿ ಚಕ್ರಕ್ಕೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಪೇಟೆ ನಗರದ ಶಾನ್ ಭೋಗ್ ವೃತ್ತದಲ್ಲಿ ನಡೆದಿದೆ. 32 ವರ್ಷದ ವೀರಾರೆಡ್ಡಿ ಬಸ್ಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ಸಂಡೂರು ತಾಲೂಕಿನ ತೋರಣಗಲ್ಲು ನಿವಾಸಿಯಾಗಿರುವ ವೀರಾರೆಡ್ಡಿ ಬಸ್ ಚಕ್ರಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಹೊಸಪೇಟೆ ಸಂಚಾರಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.