ಕಣ್ಣು ಕಾಣದ 58 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ, ಆಸ್ಪತ್ರೆಯಿಂದ ವಾಪಸಾದ ಮಹಿಳೆ ಆತ್ಮಹತ್ಯೆಗೆ ಶರಣು, ಕಾಮುಕನ ಅರೆಸ್ಟ್​​ ಮಾಡಿರುವ ಹಗರಿಬೊಮ್ಮನಹಳ್ಳಿ ಪೊಲೀಸರು

ಮಹಿಳೆಯ ಮೇಲೆ ಮೇ 30 ರಂದು ಆರೋಪಿ ಲೋಕೇಶ ನಾಯ್ಕ್ ಅತ್ಯಾಚಾರವೆಸಗಿ ಪರಾರಿಯಾಗಿದ್ದ. ಈ ಹೇಯ ಕುಕೃತ್ಯದ ಬಳಿಕ ಸಂತ್ರಸ್ತ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಶುಕ್ರವಾರ ಊರಿಗೆ ಮರಳಿದ ಮಹಿಳೆ ವಯಸ್ಸಾದ ತನಗೇ ಹಿಂಗಾಯ್ತಲ್ಲ ಎಂದು ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಣ್ಣು ಕಾಣದ 58 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ, ಆಸ್ಪತ್ರೆಯಿಂದ ವಾಪಸಾದ ಮಹಿಳೆ ಆತ್ಮಹತ್ಯೆಗೆ ಶರಣು, ಕಾಮುಕನ ಅರೆಸ್ಟ್​​ ಮಾಡಿರುವ ಹಗರಿಬೊಮ್ಮನಹಳ್ಳಿ ಪೊಲೀಸರು
ಅತ್ಯಾಚಾರ, ಆಸ್ಪತ್ರೆಯಿಂದ ವಾಪಸಾದ ಮಹಿಳೆ ಆತ್ಮಹತ್ಯೆಗೆ ಶರಣು (ಒಳ ಚಿತ್ರ ಲೋಕೇಶ ನಾಯ್ಕ್)
Follow us
ಸಾಧು ಶ್ರೀನಾಥ್​
|

Updated on: Jun 03, 2023 | 7:07 AM

ಇದು ಇಡೀ ನಾಗರಿಕ ಸಮಾಜವೇ ನಾಚಿಕೆಯಿಂದ ತಲೆತಗ್ಗಿಸುವಂತಹ ಸುದ್ದಿ. ಆ ಮಹಿಳೆಗೆ (woman) ಕಣ್ಣು ಕಾಣ್ತಿರಲಿಲ್ಲ. ಮಗಳು ಮತ್ತು ಮನೆಯವರೆಲ್ಲಾ ಊರನಲ್ಲಿನ ಮದುವೆ ಸಮಾರಂಭದಲ್ಲಿದ್ರು. ಇದೇ ವೇಳೆ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಕಾಮುಕನೊಬ್ಬ ಯಾರೂ ಉಹಿಸಲಾಗದಂತಹ ಕೃತ್ಯ ಎಸಗಿದ್ದ. ತಾಯಿ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿದ್ದಾನೆ. ಅತ್ಯಾಚಾರದ (Rape) ನಂತರ ಮನನೊಂದು ಮಹಿಳೆ ಆತ್ಮಹತ್ಯೆಗೆ (Rape) ಶರಣಾದ ಮನಕಲಕುವ ಘಟನೆ ನಿನ್ನೆ ಶುಕ್ರವಾರ ನಡೆದಿದೆ. ದುರ್ದೈವ ಅಂದ್ರೆ ಆಕೆ ಕಣ್ಣು ಕಾಣದ ಮಹಿಳೆ. ಇದರಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಬೇಕೇ ಬೇಕು ನ್ಯಾಯ ಬೇಕು ಅಂತಾ ಪೊಲೀಸರ ಮುಂದೆ ಜಮಾವಣೆಯಾಗಿದ್ದರು. ಕಾಮುಕನ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರ ಜೊತೆ ವಾಗ್ವಾದ ಮಾಡಿದರು. ಸ್ಥಳಕ್ಕೆ ತಡವಾಗಿ ಬಂದ ಹಗರಿಬೊಮ್ಮನಹಳ್ಳಿ (hagaribommanahalli) ತಹಶೀಲ್ದಾರ್​​ರನ್ನು ತರಾಟೆಗೆ ತಗೆದುಕೊಂಡರು. ಮಹಿಳೆಯ ಮೇಲೆ ನಡೆದ ಹೇಯ ಕೃತ್ಯ ಕಂಡು ಮಹಿಳೆಯರು ಕಣ್ಣೀರು ಹಾಕಿದರು. ತಾಯಿ ವಯಸ್ಸಿನ ವೃದ್ದೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿರುವುದಕ್ಕೆ ಆಕ್ರೋಶಗೊಂಡ ನಾಗರಿಕ ಸಮಾಜದ ದೃಶ್ಯಗಳಿವು..

ಮೇಲಿನ ಪೋಟೋದಲ್ಲಿ ಪೋಸ್ ಕೊಟ್ಟಿರುವ ಇವನಿಗೆ ಅದ್ಯಾವ ಶಿಕ್ಷೆ ಕೊಟ್ರು ಕಮ್ಮಿನೇ.. ಇವನ ಹೆಸರು ಲೋಕೇಶ ನಾಯ್ಕ್. ಈ ಲೋಕೇಶ ಲೋಕದಲ್ಲಿ ಯಾರೂ ಮೆಚ್ಚದಂತಹ ಕೆಲಸ ಮಾಡಿದ್ದಾನೆ ನೋಡಿ. ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಾಪುರ ತಾಂಡದ ಈ ಲೋಕೇಶ ನಾಯ್ಕ್ ಮದುವೆಯಾಗಿದ್ದು, ಅವನಿಗೆ ಮಕ್ಕಳಿದ್ದಾರೆ. ಅಂತಹುದರಲ್ಲಿ ತನ್ನ ತಾಯಿ ವಯಸ್ಸಿನ ವೃದ್ದೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ಥ ಮಹಿಳೆಯ ಮನೆಯವರು ಊರಲ್ಲಿನ ಮದುವೆ ಸಮಾರಂಭದಲ್ಲಿ ಸಂಭ್ರಮಿಸುತ್ತಿದ್ದರೆ ಈ ಪಾಪಿ ಮನೆಯಲ್ಲಿ ಒಂಟಿಯಾಗಿದ್ದ ವೃದ್ದೆಯ ಮೇಲೆ ಅತ್ಯಾಚಾರವೆಸಗಿ, ತನ್ನಕರಾಳತೆ ತೋರಿದ್ದಾನೆ. ಕಣ್ಣು ಕಾಣದ ವೃದ್ದೆಗೆ ಸಹಾಯ ಮಾಡುವ ನೆಪದಲ್ಲಿ ಯಾರೂ ಇಲ್ಲದ ಮನೆಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಅತ್ಯಾಚಾರವೆಸಗಿದ್ದಾನೆ ಈ ದುರುಳ.

58 ವರ್ಷದ ಕಣ್ಣು ಕಾಣದ ಈ ಮಹಿಳೆಯ ಮೇಲೆ ಮೇ 30 ರಂದು ಅತ್ಯಾಚಾರವೆಸಗಿ ಆರೋಪಿ ಲೋಕೇಶ ನಾಯ್ಕ್ ಪರಾರಿಯಾಗಿದ್ದ. ಲೋಕೇಶನ ಕುಕೃತ್ಯದಿಂದ ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತ ವೃದ್ದೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಶುಕ್ರವಾರ ಊರಿಗೆ ಮರಳಿದ ಮಹಿಳೆಯು ವಯಸ್ಸಾದ ತನಗೇ ಹಿಂಗಾಯ್ತಲ್ಲ ಎಂದು ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೃದ್ದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಜಮಾಯಿಸಿದ್ದು, ಪೊಲೀಸರು ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ತಾಯಿ ವಯಸ್ಸಿನ ವೃದ್ದೆಯ ಮೇಲೆ ಹೇಯ ಕೃತ್ಯ ಎಸಗಿದ ಕಾಮುಕನಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ವೃದ್ದೆಯ ಮೇಲೆ ಅತ್ಯಾಚಾರವಾದರೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಾರದ ಪರಿಣಾಮ ಗ್ರಾಮಸ್ಥರು ಪಟ್ಟು ಹಿಡಿದ ಬಳಿಕ ಹಗರಿಬೊಮ್ಮನಹಳ್ಳಿ ತಹಶೀಲ್ದಾರ್​​ ಸ್ಥಳಕ್ಕೆ ಆಗಮಿಸಿದ್ದರು. ಸಂಬಂಧಿಕರು ಅವರನ್ನೂ ತರಾಟೆಗೆ ತಗೆದುಕೊಂಡರು.

ಕೊನೆಗೆ ತಹಶೀಲ್ದಾರ್​​ ಮತ್ತು ಪೊಲೀಸರು ಆರೋಪಿ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರನ್ನ ಸಮಾಧಾನಪಡಿಸಿದರು. ಕಣ್ಣು ಕಾಣದ ವೃದ್ದೆಯ ಮೇಲೆ ಅತ್ಯಾಚಾರವೆಸಗಿರುವ ಕಾಮುಕ ಲೋಕೇಶ ನಾಯ್ಕ್ ನನ್ನ ಪೊಲೀಸರು ಈಗಾಗಲೇ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಗ್ರಾಮಸ್ಥರು ಮಾತ್ರ, ಹೇಯ ಕೃತ್ಯ ಎಸಗಿರುವ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಮಾತ್ರ ಇಂತಹ ಹೇಯ ಕೃತ್ಯಗಳಿಗೆ ಕಡಿವಾಣ ಬೀಳಬಹುದಾಗಿದೆ.

ವರದಿ: ವೀರೇಶ್​ ದಾನಿ, ಟಿವಿ9, ವಿಜಯನಗರ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ