ಸಚಿವ ಬಿ.ನಾಗೇಂದ್ರ ಸ್ವಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪರದಾಟ: ಬಸ್ ವ್ಯವಸ್ಥೆ ಇಲ್ಲದೆ ಟಾಟಾಏಸ್ನಲ್ಲಿ ಪ್ರಯಾಣ
ಬಳ್ಳಾರಿಯ ಬ್ಯಾಲಚಿಂತೆ, ನಾಗೇಹಳ್ಳಿ ಸೇರಿ ವಿವಿಧ ಗ್ರಾಮದಿಂದ NMMS ಸ್ಕಾಲರ್ಶಿಪ್ ಪರೀಕ್ಷೆಗೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಆದರೆ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದೆ ಕುರಿ ಹಿಂಡಿನಂತೆ ತುಂಬಿಕೊಂಡು ಟಾಟಾಏಸ್ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿದೆ.
ಬಳ್ಳಾರಿ, ಜನವರಿ 07: ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಶಾಲಾ ವಿದ್ಯಾರ್ಥಿಗಳು (students) ಪರದಾಡಿರುವಂತಹ ಘಟನೆ ಜಿಲ್ಲೆಯಲ್ಲಿ ಕಂಡುಬಂದಿದೆ. ಬಳ್ಳಾರಿಯ ಬ್ಯಾಲಚಿಂತೆ, ನಾಗೇಹಳ್ಳಿ ಸೇರಿ ವಿವಿಧ ಗ್ರಾಮದಿಂದ NMMS ಸ್ಕಾಲರ್ಶಿಪ್ ಪರೀಕ್ಷೆಗೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಆದರೆ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದೆ ಕುರಿ ಹಿಂಡಿನಂತೆ ತುಂಬಿಕೊಂಡು ಟಾಟಾಏಸ್ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿದೆ. ಉಸ್ತುವಾರಿ ಸಚಿವ ಬಿ.ನಾಗೇಂದ್ರ ಸ್ವಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಪರದಾಡಿತ್ತಿದ್ದು, ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.