ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಇಂಗ್ಲೀಷ್ ಪ್ರಾಧ್ಯಾಪಕ ಅಮಾನತು

ಇಂಗ್ಲೀಷ್ ಪ್ರೊಫೆಸರ್ ಚಾಂದ್‌ ಭಾಷ ವಿರುದ್ಧ ಸಂಶೋಧನಾ ವಿದ್ಯಾರ್ಥಿನಿ ನವೆಂಬರ್ 7, 2022 ರಂದು ಲೈಂಗಿಕ ಕಿರುಕುಳದ ಕುರಿತು ವಿಶ್ವವಿದ್ಯಾಲಯಕ್ಕೆ ಲಿಖಿತ ದೂರನ್ನು ಸಲ್ಲಿಸಿದ್ದರು.

ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಇಂಗ್ಲೀಷ್ ಪ್ರಾಧ್ಯಾಪಕ ಅಮಾನತು
ಇಂಗ್ಲೀಷ್ ಪ್ರಾಧ್ಯಾಪಕ ಪ್ರೊ. ಚಾಂದ್‌ ಭಾಷ ಅಮಾನತು
Updated By: ಸಾಧು ಶ್ರೀನಾಥ್​

Updated on: Dec 24, 2022 | 9:50 AM

ಬಳ್ಳಾರಿ: ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಳ್ಳಾರಿಯ (Bellary) ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (Sri Krishnadevaraya University) ಪಿಜಿ ಸೆಂಟರ್‌ನ ಇಂಗ್ಲೀಷ್ ಪ್ರೊಫೆಸರ್ (English professor) ಡಾ. ಚಾಂದ್‌ ಭಾಷ ಎಂ. ಅವರನ್ನು ಸೇವೆಯಿಂದ ಅಮಾನತು (Suspend) ಮಾಡಿ ಗುರುವಾರ ಆದೇಶ ಜಾರಿ ಮಾಡಲಾಗಿದೆ.

ವಿಶ್ವವಿದ್ಯಾಲದಯ ರಿಜಿಸ್ಟರ್ ಅವರು ಈ ಆದೇಶವನ್ನು ಜಾರಿ ಮಾಡಿದ್ದು, ಕರ್ನಾಟಕ ಸಿವಿಲ್ ಸೇವೆಗಳ ಕಾಯ್ದೆ ಮತ್ತು ಕಾನೂನಾತ್ಮಕವಾಗಿ ಪಿಎಚ್‌ಡಿ ವಿದ್ಯಾರ್ಥಿನಿ (PhD student) ಸಲ್ಲಿಸಿದ್ದ ಲೈಂಗಿಕ ಕಿರುಕುಳದ ಲಿಖಿತ ಆರೋಪದ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆಯನ್ನು ನಡೆಸಿ, ಸಮಿತಿ ಸಲ್ಲಿಸಿದ ವರದಿಯನ್ನು ಸಿಂಡಿಕೇಟ್ ಸಭೆಯ ನಿರ್ಣಯದ ಪ್ರಕಾರ ಡಾ. ಚಾಂದ್‌ಭಾಷ ಎಂ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರೊ. ಚಾಂದ್‌ಭಾಷ ವಿರುದ್ಧ ಸಂಶೋಧನಾ ವಿದ್ಯಾರ್ಥಿನಿ ನವೆಂಬರ್ 7, 2022 ರಂದು ಲೈಂಗಿಕ ಕಿರುಕುಳದ ಕುರಿತು ವಿಶ್ವವಿದ್ಯಾಲಯಕ್ಕೆ ಲಿಖಿತ ದೂರನ್ನು ಸಲ್ಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ