AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡಿದರು’

ಬಳ್ಳಾರಿ: ಮಾಜಿ ಸಿಎಂ ಸಿದ್ರಾಮಯ್ಯನವರ ಶ್ರೀರಾಮುಲು ಪೆದ್ದ ಎಂಬ ಹೇಳಿಕೆ ಸಂಬಂಧಿಸಿ ಬಳ್ಳಾರಿಯ ವಿಜಯನಗರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ನಾನು ಪೆದ್ದನಾದ್ರೆ ನೀವು ಬುದ್ದಿವಂತನಾಗಿ ಏನು ಮಾಡಿದಿರಿ, ದಲಿತ ನಾಯಕರನ್ನು ಬೆಳೆಸಿದ್ರಾ? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನಿಂದ ಕಾಂಗ್ರೆಸ್ ನಿರ್ನಾಮ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡಿದರು. ದಲಿತ, ಹಿಂದುಳಿದ ನಾಯಕರನ್ನು ತುಳಿದಿದ್ದಾರೆ. ವಂಚನೆ ಮಾಡಿ ಪರಮೇಶ್ವರ್, ಖರ್ಗೆರನ್ನು ತುಳಿದಿದ್ದಾರೆ. ಈ ಬಗ್ಗೆ ನಾನು ಹೇಳಲ್ಲ, ಬದಲಾಗಿ ಅವರ ಶಿಷ್ಯರೇ ಹೇಳ್ತಾರೆ ಎಂದು […]

‘ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡಿದರು'
ಸಾಧು ಶ್ರೀನಾಥ್​
|

Updated on:Nov 22, 2019 | 1:16 PM

Share

ಬಳ್ಳಾರಿ: ಮಾಜಿ ಸಿಎಂ ಸಿದ್ರಾಮಯ್ಯನವರ ಶ್ರೀರಾಮುಲು ಪೆದ್ದ ಎಂಬ ಹೇಳಿಕೆ ಸಂಬಂಧಿಸಿ ಬಳ್ಳಾರಿಯ ವಿಜಯನಗರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ನಾನು ಪೆದ್ದನಾದ್ರೆ ನೀವು ಬುದ್ದಿವಂತನಾಗಿ ಏನು ಮಾಡಿದಿರಿ, ದಲಿತ ನಾಯಕರನ್ನು ಬೆಳೆಸಿದ್ರಾ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನಿಂದ ಕಾಂಗ್ರೆಸ್ ನಿರ್ನಾಮ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡಿದರು. ದಲಿತ, ಹಿಂದುಳಿದ ನಾಯಕರನ್ನು ತುಳಿದಿದ್ದಾರೆ. ವಂಚನೆ ಮಾಡಿ ಪರಮೇಶ್ವರ್, ಖರ್ಗೆರನ್ನು ತುಳಿದಿದ್ದಾರೆ. ಈ ಬಗ್ಗೆ ನಾನು ಹೇಳಲ್ಲ, ಬದಲಾಗಿ ಅವರ ಶಿಷ್ಯರೇ ಹೇಳ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.

ಸಿದ್ದರಾಮಯ್ಯಗೆ ರಾಜಕಾರಣದಲ್ಲಿ ಶಕ್ತಿಯಿಲ್ಲ ಇಲ್ಲ: ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಅಧಿಕಾರ ಚಲಾಯಿಸಿದ್ದೀರಿ. ಈಗ ಸಿದ್ದರಾಮಯ್ಯಗೆ ಯಾವ ಜವಾಬ್ದಾರಿ ಕೊಟ್ಟಿದ್ದಾರೆ? ಸಿದ್ದರಾಮಯ್ಯ ಜತೆ ಯಾರೂ ಇಲ್ಲ, ಅವರು ಏಕಾಂಗಿಯಾಗಿದ್ದಾರೆ. ಸಿದ್ದರಾಮಯ್ಯಗೆ ರಾಜಕಾರಣದಲ್ಲಿ ಶಕ್ತಿಯಿಲ್ಲ ಇಲ್ಲ ಶ್ರೀರಾಮುಲು ಹೇಳಿದ್ದಾರೆ.

ಸಿದ್ದರಾಮಯ್ಯ ವರ್ಸಸ್ ರಾಮುಲು: ವಿಪಕ್ಷದ ನಾಯಕರಾಗಿ ಲಘುವಾಗಿ ಮಾತನಾಡಬಾರದು, ಏನೇ ಆದರು ಸಿದ್ದರಾಮಯ್ಯ ವರ್ಸಸ್ ರಾಮುಲು ಆಗಲಿ. ಜಾತಿವಾರು ಸಂಘರ್ಷವಾಗಬಾರದು. ನಾವು ಕಷ್ಟಪಟ್ಟು ಸರ್ಕಾರ ರಚಿಸಿದ್ದೇವೆ, ಯಾರೋ ಕಟ್ಟಿದ ಪಕ್ಷದಲ್ಲಿ ಎಂಜಾಯ್ ಮಾಡುತ್ತಿಲ್ಲ. ಕಷ್ಟಪಟ್ಟು ಪಕ್ಷ ಕಟ್ಟಿ ಅಧಿಕಾರ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಹಿರಿಯರು ಅವರು ನಮಗೆ ಮಾದರಿಯಾಗಬೇಕು. ನಮ್ಮಂತರ ಬಗ್ಗೆ ಟೀಕೆ ಮಾಡಿ ಸಣ್ಣವರಾಗಬಾರದು ಎಂದು ಸಿದ್ದರಾಮಯ್ಯ ವಿರುದ್ದ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

Published On - 12:53 pm, Fri, 22 November 19

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ