ಸಂಭ್ರಮದ ಮದುವೆ ಮನೆಯಲ್ಲಿ ಸೂತಕದ ಛಾಯೆ: ಆರತಕ್ಷತೆ ವೇಳೆ ಹೃದಯಾಘಾತದಿಂದ ವರ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 21, 2022 | 12:28 PM

ಕುಡಿದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಿ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರಿಂದ ಫೇಸ್ ಬುಕ್ ಲೈವ್ ಮಾಡಲಾಗಿದ್ದು, ಮನನೊಂದ ಹೊರಗುತ್ತಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ.

ಸಂಭ್ರಮದ ಮದುವೆ ಮನೆಯಲ್ಲಿ ಸೂತಕದ ಛಾಯೆ: ಆರತಕ್ಷತೆ ವೇಳೆ ಹೃದಯಾಘಾತದಿಂದ ವರ ಸಾವು
ಹೊನ್ನೂರ ಸ್ವಾಮಿ (26) ಮೃತ ದುರ್ದೈವಿ
Follow us on

ವಿಜಯನಗರ: ಮದುವೆ ಆರತಕ್ಷತೆ ವೇಳೆಯೇ ಹೃದಯಾಘಾತದಿಂದ ವರ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊನ್ನೂರ ಸ್ವಾಮಿ (26) ಮೃತ ದುರ್ದೈವಿ. ಎದೆ ನೋವಿನಿಂದ ಕುಸಿದು ಬಿದ್ದು, ಅಸ್ವಸ್ಥಗೊಂಡ ಹೊನ್ನೂರಸ್ವಾಮಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದ್ದ ವೈದ್ಯರು, ಆಸ್ಪತ್ರೆಗೆ ಸಾಗಿಸೋ ದಾರಿ ಮಧ್ಯೆಯೇ ವರ ಹೊನ್ನೂರಸ್ವಾಮಿ ಮೃತಪಟ್ಟಿದ್ದಾರೆ. ಸಂಭ್ರಮದ ಮದುವೆ ಮನೆಯಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ.

ಡೆಲಿವರಿ ಬಾಯ್​ನಿಂದ ಅನುಚಿತ ವರ್ತನೆ

ಬೆಂಗಳೂರು: ಹತ್ತು ರೂಪಾಯಿಗಾಗಿ ಸ್ವಿಗ್ಗಿ ಡೆಲಿವರಿ ಬಾಯ್​ನಿಂದ ಅನುಚಿತ ವರ್ತನೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವಂತಹ ಘಟನೆ ಜಯನಗರ ಬಳಿ ಇರುವ ಅಪಾರ್ಟ್ಮೆಂಟ್​ನಲ್ಲಿ ನಡೆದಿದೆ. ಗ್ರಾಹಕ ಶಿಖರ್ ಗುಪ್ತಾ ಎಂಬುವವರಿಗೆ ಸ್ವಿಗ್ಗಿ ಬಾಯ್​ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗಲಾಗಿದೆ. ಬಾಗಿಲು ತೆಗೆದು ಸ್ವಿಗ್ಗಿ ಡೆಲಿವರಿ ಬಾಯ್ ದೌರ್ಜನ್ಯದಿಂದ ವರ್ತಿಸಿದ್ದು, ಬೆಂಗಳೂರು ಪೊಲೀಸರಿಗೆ ಟ್ವಿಟ್ಟರ್ ಮೂಲಕ ಶಿಖರ್ ಗುಪ್ತಾ ದೂರು ಸಲ್ಲಿಸಿದ್ದಾರೆ.

ವಾಹನ ತೊಳೆಯಲು ಹೋಗಿ ತಂದೆ-ಮಗ ಸಾವು

ಧಾರವಾಡ: ವಾಹನ ತೊಳೆಯಲು ಹೋಗಿ ತಂದೆ-ಮಗ ಸಾವನ್ನಪ್ಪಿರುವಂತಹ ಘಟನೆ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗದಿಗೆಪ್ಪ ಅಂಗಡಿ (42), ರವಿ ಅಂಗಡಿ (17) ಸಾವನ್ನಪ್ಪಿದವರು. ಕೆರೆಗೆ ಟಂ ಟಂ ವಾಹನ ತೊಳೆಯಲು ಹೋಗಿದ್ದು, ಕೆರೆಗೆ ಇಳಿದಾಗ ಘಟನೆ ನಡೆದಿದೆ. ತಂದೆ ಗದಿಗೆಪ್ಪನ ಶವ ಪತ್ತೆಯಾಗಿದ್ದು, ರವಿ ಶವಕ್ಕಾಗಿ‌ ತೀವ್ರ ಹುಡುಕಾಟ ನಡೆಯುತ್ತಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಮನನೊಂದ ಹೊರಗುತ್ತಿಗೆ ನೌಕರ ನೇಣು ಬಿಗಿದುಕೊಂಡು ಆತ್ಮಹತ್ಯೆ

ಚಾಮರಾಜನಗರ: ಕುಡಿದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಿ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರಿಂದ ಫೇಸ್ ಬುಕ್ ಲೈವ್ ಮಾಡಲಾಗಿದ್ದು, ಮನನೊಂದ ಹೊರಗುತ್ತಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಚಾಮರಾಜನಗರದ ಗಾಳೀಪುರದಲ್ಲಿ ನಿನ್ನೆ ನಡೆದಿದೆ. ಮಹೇಶ್(32) ಆತ್ಮಹತ್ಯೆ ಮಾಡಿಕೊಂಡ ಹೊರ ಗುತ್ತಿಗೆ ನೌಕರ. ಚಾಮರಾಜ‌ನಗರ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹೊರ ಗುತ್ತಿಗೆ ನೌಕರನಾಗಿದ್ದು, ಐದು ದಿನಗಳ ಹಿಂದೆ ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ, ಉಪಾಧ್ಯಕ್ಷ ಫೇಸ್ ಬುಕ್ ಲೈವ್ ಮಾಡಿದ್ದರು. ಕುಡಿದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾನೆಂದು ಹೇಳಲಾಗಿದೆ. ಇದರಿಂದ ಖಿನ್ನತೆಗೊಳಗಾಗಿದ್ದ ಹೊರಗುತ್ತಿಗೆ ನೌಕರ ಮಹೇಶ್, ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಶ್ರೀನಿವಾಸ ಶಾಸ್ತ್ರಿ, ಉಪಾಧ್ಯಕ್ಷ ಗಣೇಶ್ ವಿರುದ್ದ ದೂರು ದಾಖಲಾಗಿದೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.