ಇದೇನಿದು, ವಿಜಯನಗರ ಸಾಮ್ರಾಜ್ಯದ ಕಲ್ಲಿನ ರಥ ಹೊಸಪೇಟೆ ರೈಲ್ವೆ ನಿಲ್ದಾಣದ ಮಹಾದ್ವಾರದ ಬಳಿ ಬಂದು ನಿಂತಿದೆಯಾ!?

| Updated By: ಸಾಧು ಶ್ರೀನಾಥ್​

Updated on: Mar 22, 2022 | 8:20 PM

ವಿಜಯನಗರ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳನ್ನು ದರ್ಶನ ಮಾಡಿಸುವ ಮಾದರಿಯಲ್ಲಿ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯ ರೈಲ್ವೆ ನಿಲ್ದಾಣ ಕಟ್ಟಡ ನಿರ್ಮಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ರೈಲ್ವೆ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ ನೋಡುವ ಮೂಲಕ ವಿನೂತನ ಪ್ರಯತ್ನ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ. ಹಂಪಿಯ ಸ್ಮಾರಕಗಳ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹಂಪಿಯ ವಿರೂಪಾಕ್ಷೇಶ್ವರ ಮಂದಿರ. ವಿಜಯ ವಿಠಲ ದೇವಸ್ಥಾನ. ಕಲ್ಲಿನ ರಥ (Hampi Rock chariot) […]

ಇದೇನಿದು, ವಿಜಯನಗರ ಸಾಮ್ರಾಜ್ಯದ ಕಲ್ಲಿನ ರಥ ಹೊಸಪೇಟೆ ರೈಲ್ವೆ ನಿಲ್ದಾಣದ ಮಹಾದ್ವಾರದ ಬಳಿ ಬಂದು ನಿಂತಿದೆಯಾ!?
ಹೊಸಪೇಟೆ ರೈಲ್ವೆ ನಿಲ್ದಾಣದ ಮಹಾದ್ವಾರ ವಿಜಯನಗರ ಸಾಮ್ರಾಜ್ಯ ವಾಸ್ತು ಶಿಲ್ಪಾಕಾರದ ಕಲ್ಲಿನ ರಥದಂತೆ ಕಾಣುತ್ತಿದೆ!
Follow us on

ವಿಜಯನಗರ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳನ್ನು ದರ್ಶನ ಮಾಡಿಸುವ ಮಾದರಿಯಲ್ಲಿ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯ ರೈಲ್ವೆ ನಿಲ್ದಾಣ ಕಟ್ಟಡ ನಿರ್ಮಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ರೈಲ್ವೆ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ ನೋಡುವ ಮೂಲಕ ವಿನೂತನ ಪ್ರಯತ್ನ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ. ಹಂಪಿಯ ಸ್ಮಾರಕಗಳ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹಂಪಿಯ ವಿರೂಪಾಕ್ಷೇಶ್ವರ ಮಂದಿರ. ವಿಜಯ ವಿಠಲ ದೇವಸ್ಥಾನ. ಕಲ್ಲಿನ ರಥ (Hampi Rock chariot) ಅಷ್ಟೇ ಅಲ್ಲ ಹಂಪಿ ಸುತ್ತಮುತ್ತ ಇರುವ ಆಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್. ದರೋಜಿ ಕರಡಿ ಧಾಮ ಈಗ ಪ್ರವಾಸೋದ್ಯಮದ ಹಬ್ ಆಗಿ ಬೆಳೆಯುತ್ತಿದೆ. ಹಂಪಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕಗಳ ದರ್ಶನ ಮಾಡುವ ಮಾದರಿಯಲ್ಲೇ ಈಗ ರೈಲ್ವೆ ನಿಲ್ದಾಣ ಕಟ್ಟಡ ನಿರ್ಮಿಸಲಾಗಿದೆ (Hampi Tourism).

ಕಲ್ಲಿನ ತೇರು!
ವಿಜಯನಗರದ ವಾಸ್ತು ಶಿಲ್ಪದಲ್ಲಿ ಅರಳಿರುವ ಹಂಪಿ ಸ್ಮಾರಕಗಳನ್ನು ನೆನಪಿಸುವಂತೆ ಹೊಸಪೇಟೆ ರೈಲ್ವೆ ನಿಲ್ದಾಣದ ಕಟ್ಟಡ ನಿರ್ಮಿಸಲಾಗುತ್ತಿದೆ. ಅದರಲ್ಲೂ ಪ್ರವೇಶ ದ್ವಾರವನ್ನು ಹಂಪಿಯ ವಿಜಯ ವಿಠಲ ದೇಗುಲದ ಆವರಣದಲ್ಲಿರುವ ಕಲ್ಲಿನ ತೇರಿನ ಮಾದರಿಯಲ್ಲೇ ಸೃಷ್ಟಿಸಲಾಗಿದೆ. ಗ್ರಾನೈಟ್ ಕಲ್ಲುಗಳ ಮೂಲಕ ಹಂಪಿಯ ಕಲ್ಲಿನ ರಥವನ್ನೆ ಹೋಲುವಂತೆ ಮಹಾ ದ್ವಾರದ ಬಾಗಿಲು ನಿರ್ಮಾಣ ಮಾಡಲಾಗಿದ್ದು, ರೈಲ್ವೆ ನಿಲ್ದಾಣದ ಗೋಡೆಗಳ ಮೇಲೂ ಹಂಪಿ ಸ್ಮಾರಕಗಳ ಪರಂಪರೆಯನ್ನ ಬಿಂಬಿಸುವ ಪ್ರಯತ್ನ ಮಾಡಲಾಗಿದೆ.

ಹೊಸಪೇಟೆಯ ರೈಲ್ವೆ ನಿಲ್ದಾಣ ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ಪ್ರಮುಖ ಜಂಕ್ಷನ್ ಆಗಿದ್ದು, ಜೊತೆಗೆ ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಹಂಪಿ ಮೇಲೆ ರೈಲ್ವೆ ಇಲಾಖೆಗೆ ವಿಶೇಷ ಪ್ರೀತಿಯೂ ಇದೆ. ಅದಕ್ಕಾಗಿ ಹಂಪಿ ಎಕ್ಸ್‌ಪ್ರೆಸ್ ಎಂಬ ಹೆಸರಿಟ್ಟಿದೆ . ಜತೆಗೆ ಗೋಲ್ಡನ್ ಚಾರಿಯಟ್ ರೈಲನ್ನು ಬಿಟ್ಟಿದೆ. ಅಲ್ಲದೇ ಉತ್ತರ ಭಾರತದ ಪ್ರವಾಸಿಗರನ್ನು ಹಂಪಿಗೆ ಕರೆತರುವ ರೈಲನ್ನು ಇತ್ತೀಚೆಗೆ ಪರಿಚಯಿಸಿದೆ.

ಹಂಪಿಗೆ ಹತ್ತಿರವಿರುವ ಹೊಸಪೇಟೆ ರೈಲ್ವೆ ನಿಲ್ದಾಣದ ಕಟ್ಟಡವನ್ನು ವಿಜಯನಗರದ ವಾಸ್ತುಶಿಲದಲ್ಲಿ ಅರಳಿಸಲು 8 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ರೈಲ್ವೆ ಇಲಾಖೆ 4 ಕೋಟಿ ರೂಪಾಯಿ ಮೊತ್ತವನ್ನು ಹಾಗೂ ಇ ನ್ನುದ 4 ಕೋಟಿ ರೂಪಾಯಿಯನ್ನ ಪ್ರವಾಸೋದ್ಯಮ ಇಲಾಖೆ ಒದಗಿಸಿದೆ. ಈಗ ಕಟ್ಟಡ ನಿರ್ಮಾಣ ಕಾರ್ಯ ಮುಗಿದಿದ್ದು, ಅಂತಿಮ ಸ್ಪರ್ಶ ನೀಡುವ ಕಾರ್ಯ ನಡೆದಿದೆ. ಹಂಪಿ ಸ್ಮಾರಕಗಳ ಮಾದರಿಯಲ್ಲೇ ರೈಲ್ವೆ ನಿಲ್ದಾಣದ ಕಟ್ಟಡವನ್ನು ಅರಳಿಸಿರುವ ಹಿನ್ನೆಲೆಯಲ್ಲಿ ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಪ್ರವಾಸಿಗರು ಕೂಡ ನಿಲ್ದಾಣ ಕಂಡು ಆಕರ್ಷಿತರಾಗುತ್ತಿದ್ದಾರೆ.

Published On - 8:19 pm, Tue, 22 March 22