ವಿದ್ಯುತ್‌ ತಂತಿ ತಗುಲಿ ಹೊತ್ತಿ ಉರಿದ ಭತ್ತದ ಹುಲ್ಲು

|

Updated on: Dec 23, 2019 | 3:31 PM

ಬಳ್ಳಾರಿ: ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್​ನಲ್ಲಿ ತುಂಬಿದ್ದ ಭತ್ತದ ಹುಲ್ಲು ಹೊತ್ತಿ ಉರಿದಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಿಂದ ನೆರೆಯ‌ ಆಂಧ್ರ ಪ್ರದೇಶಕ್ಕೆ ಭತ್ತದ ಹುಲ್ಲನ್ನು ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್​ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಹುಲ್ಲಿನ‌ ಸ‌ಮೇತ ಆ ಟ್ರ್ಯಾಕ್ಟರ್​ನ ಟ್ರ್ಯಾಲಿ ಸುಟ್ಟು ಕರಕಲು ಆಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿ‌ ಸಂಭವಿಸಿಲ್ಲ. ಆಂಧ್ರ ಮೂಲದ ಐವರು‌ ಸಿರುಗುಪ್ಪಗೆ ಬಂದು ಟ್ರ್ಯಾಕ್ಟರ್​ನಲ್ಲಿ ಭತ್ತದ ಹುಲ್ಲನ್ನು‌ ಖರೀದಿಸಿ ತೆರಳಿದ್ದರು. ಆದೋನಿ ಬಳಿ ತೆರಳುತ್ತಿದ್ದಾಗ ಕೆಳಗಡೆ ನೇತಾಡುತ್ತಿದ್ದ ವಿದ್ಯುತ್ ತಂತಿಯೊಂದು ಹುಲ್ಲಿಗೆ […]

ವಿದ್ಯುತ್‌ ತಂತಿ ತಗುಲಿ ಹೊತ್ತಿ ಉರಿದ ಭತ್ತದ ಹುಲ್ಲು
Follow us on

ಬಳ್ಳಾರಿ: ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್​ನಲ್ಲಿ ತುಂಬಿದ್ದ ಭತ್ತದ ಹುಲ್ಲು ಹೊತ್ತಿ ಉರಿದಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಿಂದ ನೆರೆಯ‌ ಆಂಧ್ರ ಪ್ರದೇಶಕ್ಕೆ ಭತ್ತದ ಹುಲ್ಲನ್ನು ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್​ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಹುಲ್ಲಿನ‌ ಸ‌ಮೇತ ಆ ಟ್ರ್ಯಾಕ್ಟರ್​ನ ಟ್ರ್ಯಾಲಿ ಸುಟ್ಟು ಕರಕಲು ಆಗಿದೆ.

ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿ‌ ಸಂಭವಿಸಿಲ್ಲ. ಆಂಧ್ರ ಮೂಲದ ಐವರು‌ ಸಿರುಗುಪ್ಪಗೆ ಬಂದು ಟ್ರ್ಯಾಕ್ಟರ್​ನಲ್ಲಿ ಭತ್ತದ ಹುಲ್ಲನ್ನು‌ ಖರೀದಿಸಿ ತೆರಳಿದ್ದರು. ಆದೋನಿ ಬಳಿ ತೆರಳುತ್ತಿದ್ದಾಗ ಕೆಳಗಡೆ ನೇತಾಡುತ್ತಿದ್ದ ವಿದ್ಯುತ್ ತಂತಿಯೊಂದು ಹುಲ್ಲಿಗೆ ಸ್ಪರ್ಶಿಸಿದೆ. ಭತ್ತದ ಹುಲ್ಲಿನ ಮೇಲೆ ಐವರು ಕಾರ್ಮಿಕರು ಮಲಗಿಕೊಂಡಿದ್ದರು. ಬೆಂಕಿಯ ಜ್ವಾಲೆ ಎಲ್ಲೆಡೆ ಪಸರಿಸುತ್ತಿದ್ದಂತೆಯೇ ಎಚ್ಚರವಾಗಿ ಕೆಳಗೆ ಹಾರಿದ್ದಾರೆ. ಟ್ರ್ಯಾಕ್ಟರ್​ನ ಚಾಲಕ‌ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Published On - 3:29 pm, Mon, 23 December 19