ಬಳ್ಳಾರಿ: ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಖಾಲಿ ಬಿದ್ದಿರೋ ಜಮೀನಿನಲ್ಲಿ ನಾಡಾಬಾಂಬ್ಗಳ ಹಾವಳಿ ಹೆಚ್ಚಾಗಿದೆ. ಜನ ಆ ಜಮೀನಿನಲ್ಲಿ ಹೆಜ್ಜೆ ಇಡೋಕೂ ಹೆದರುತ್ತಿದ್ದಾರೆ. ಮಣ್ಣಿನ ಹಿಂಟೆ ಮೇಲೆ ದಾರದ ತುಣುಕುಗಳನ್ನ ಜಾಲಾಡ್ತಿದ್ದಾರೆ.
ತುಂಗಭದ್ರಾ ನದಿಗೆ ಹೊಂದಿಕೊಂಡಂತಿರೋ ಈ ಗ್ರಾಮದ ಹೊರವಲಯದಲ್ಲಿ ಎರಡು ನಾಯಿಗಳು ಸತ್ತು ಬಿದ್ದಿವೆ. ಅದು ಬೇಟೆಗಾರರು ಬಳಸೋ ನಾಡಾಬಾಂಬ್ಗಳನ್ನ ಕಚ್ಚಿ. ಪ್ರಾಣಿಗಳನ್ನ ಬೇಟೆಯಾಡಲು ಅಲ್ಲಲ್ಲಿ ನಾಡಾ ಬಾಂಬ್ಗಳನ್ನ ಅಲ್ಲಲ್ಲಿ ಹುದುಗಿಸಿಟ್ಟಿದ್ದು ಜನರು ಕೂಡ ಭಯಗೊಂಡಿದ್ದಾರೆ. ಯಾವಾಗ, ಎಲ್ಲಿ ಏನಾಗುತ್ತೋ ಅಂತ ಆತಂಕಗೊಂಡಿದ್ದಾರೆ.
ಸ್ಫೋಟಕ ವಸ್ತುಗಳನ್ನ ಮಾಂಸದಲ್ಲಿ ಹಾಕಿ ಬಿಸಾಡಿರ್ತಾರೆ. ಮಾಂಸದ ವಾಸನೆ ಕಂಡು ತಿನ್ನಲು ಬರೋ ಪ್ರಾಣಿಗಳು, ಸ್ಫೋಟದಿಂದ ಸಾವನ್ನಪ್ಪುತ್ತವೆ. ನಂತರ, ಬಾಂಬ್ ಇಟ್ಟವರು ಆ ಪ್ರಾಣಿಯನ್ನ ಹೊತ್ತೊಯ್ತಾರೆ. ಭೇಟೆಗೆ ಬಂದವರು ತಕ್ಷಣ ಬಂದು ಆ ಪ್ರಾಣಿಯನ್ನ ತೆಗೆದುಕೊಂಡು ಹೋಗುತ್ತಾರೆ. ಹೀಗೆ, ಎರಡು ನಾಯಿಗಳು ಮೃತಪಟ್ಟಿವೆ. ಕಬ್ಬು ಕಟಾವು ಮಾಡಲು ದೂರದ ಮಹಾರಾಷ್ಟ್ರದಿಂದ ಜನರು ಬರ್ತಿದ್ದಾರೆ. ಅವರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.